ಯಥರ್ವನಿಗೆ ಭಯ ಹುಟ್ಟಿಸಿದ ಯಶ್ ಹಾಗೂ ಆಯ್ರಾ; ಇಲ್ಲಿದೆ ಫನ್ನಿ ವಿಡಿಯೋ

ಯಶ್ ಪಕ್ಕಾ ಫ್ಯಾಮಿಲಿ ಮ್ಯಾನ್​. ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದರೂ ಬಿಡುವು ಮಾಡಿಕೊಂಡು ಕುಟುಂಬಕ್ಕೆ ಆದ್ಯತೆ ನೀಡುತ್ತಾರೆ. ಈಗ ಯಶ್ ಬ್ರೇಕ್​ನಲ್ಲಿದ್ದಾರೆ. ಹೊಸ ಸಿನಿಮಾ ಒಪ್ಪಿಕೊಳ್ಳುವುದಕ್ಕೂ ಮೊದಲು ಮಕ್ಕಳ ಜತೆ ಸಮಯ ಕಳೆಯುತ್ತಿದ್ದಾರೆ.

ಯಥರ್ವನಿಗೆ ಭಯ ಹುಟ್ಟಿಸಿದ ಯಶ್ ಹಾಗೂ ಆಯ್ರಾ; ಇಲ್ಲಿದೆ ಫನ್ನಿ ವಿಡಿಯೋ
ಯಥರ್ವನಿಗೆ ಭಯ ಹುಟ್ಟಿಸಿದ ಯಶ್ ಹಾಗೂ ಆಯ್ರಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:May 11, 2022 | 6:10 PM

‘ಕೆಜಿಎಫ್: ಚಾಪ್ಟರ್​ 2’ (KGF: Chapter 2) ಗೆದ್ದು ಬೀಗಿದೆ. ಈ ಸಿನಿಮಾದಿಂದ ಯಶ್​ಗೆ (Yash) ಅಭೂತಪೂರ್ವ ಗೆಲುವು ಸಿಕ್ಕಿದೆ. ಈ ಚಿತ್ರದ ಕಲೆಕ್ಷನ್ 1200 ಕೋಟಿ ರೂಪಾಯಿ ಸಮೀಪಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಯಶ್​ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ, ಯಶ್ ಸೋಶಿಯಲ್ ಮೀಡಿಯಾದಲ್ಲಿ (Social Media) ಆ್ಯಕ್ಟೀವ್ ಆಗಿರಲು ಪ್ರಯತ್ನಿಸುತ್ತಿದ್ದಾರೆ. ಇವುಗಳ ಮಧ್ಯೆ ಕುಟುಂಬದ ಜತೆ ಅವರು ಸಮಯ ಕಳೆಯುತ್ತಾ ಹಾಯಾಗಿದ್ದಾರೆ. ಅವರು ಹೊಸ ವಿಡಿಯೋ ಶೇರ್ ಮಾಡಿಕೊಂಡಿದ್ದು ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯ ಕಮೆಂಟ್ ಮಾಡುತ್ತಿದ್ದಾರೆ.

ಯಶ್ ಪಕ್ಕಾ ಫ್ಯಾಮಿಲಿ ಮ್ಯಾನ್​. ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದರೂ ಬಿಡುವು ಮಾಡಿಕೊಂಡು ಕುಟುಂಬಕ್ಕೆ ಆದ್ಯತೆ ನೀಡುತ್ತಾರೆ. ‘ಕೆಜಿಎಫ್ 2’ ಪ್ರಚಾರದ ಮಧ್ಯೆಯೂ ಅವರು ಕುಟುಂಬದ ಜತೆ ಯುಗಾದಿ ಹಬ್ಬ ಆಚರಿಸಿಕೊಂಡಿದ್ದು ಇದಕ್ಕೆ ಹೊಸ ಉದಾಹರಣೆ. ಈಗ ಯಶ್ ಬ್ರೇಕ್​ನಲ್ಲಿದ್ದಾರೆ. ಹೊಸ ಸಿನಿಮಾ ಒಪ್ಪಿಕೊಳ್ಳುವುದಕ್ಕೂ ಮೊದಲು ಮಕ್ಕಳ ಜತೆ ಸಮಯ ಕಳೆಯುತ್ತಿದ್ದಾರೆ.

ಇದನ್ನೂ ಓದಿ
Image
‘ಕೆಜಿಎಫ್​ 2’ ನೋಡಿದ್ಮೇಲೆ ‘ಕೆಜಿಎಫ್​ 3’ ಬಗ್ಗೆ ಶಿವಣ್ಣ ಹೇಳಿದ್ದೇನು? ಇಲ್ಲಿದೆ ‘ಸೆಂಚುರಿ ಸ್ಟಾರ್​’ ಮಾತು
Image
‘ದಂಗಲ್​’ ದಾಖಲೆ ಉಡೀಸ್​ ಮಾಡಿದ ಯಶ್​​; ಅತಿ ಹೆಚ್ಚು ಹಣ ಗಳಿಸಿದ​ 2ನೇ ಸಿನಿಮಾ ‘ಕೆಜಿಎಫ್​ 2’
Image
ಗೋವಾ ಸಿಎಂ ಪ್ರಮೋದ್​ ಸಾವಂತ್​ ಭೇಟಿ ಮಾಡಿದ ಯಶ್​-ರಾಧಿಕಾ ಪಂಡಿತ್​; ಮುಂದಿನ ಸಿನಿಮಾ ಬಗ್ಗೆ​ ಕುತೂಹಲ
Image
‘ಗೆದ್ದ ಸಿನಿಮಾವನ್ನು ಅತಿಯಾಗಿ ಹೊಗಳ್ತಾರೆ’: ಕೆಜಿಎಫ್​ 2, ಆರ್​ಆರ್​ಆರ್​ ಬಗ್ಗೆ ನವಾಜುದ್ದೀನ್​ ಸಿದ್ದಿಕಿ ಹೇಳಿಕೆ

ಯಶ್​ಗೆ ಆಯ್ರಾ ಹಾಗೂ ಯಥರ್ವ್​ ಎಂದರೆ ಅಚ್ಚುಮೆಚ್ಚು. ಮಕ್ಕಳು ಮಾಡುವ ತುಂಟಾಟದ ವಿಡಿಯೋಗಳನ್ನು ಯಶ್ ಪತ್ನಿ ರಾಧಿಕಾ ಪಂಡಿತ್ ಹಂಚಿಕೊಳ್ಳುತ್ತಿರುತ್ತಾರೆ. ಈಗ ಯಥರ್ವ್​ನನ್ನು ಯಶ್ ಹಾಗೂ ಆಯ್ರಾ ಇಬ್ಬರೂ ಭಯ ಬೀಳಿಸಿದ್ದಾರೆ. ಈ ಫನ್ನಿ ವಿಡಿಯೋವನ್ನು ಯಶ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

View this post on Instagram

A post shared by Yash (@thenameisyash)

ಇನ್​ಸ್ಟಾಗ್ರಾಮ್​ನಲ್ಲಿ ಯಶ್ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಯಶ್, ಯಥರ್ವ್​ ಹಾಗೂ ಆಯ್ರಾ ಇದ್ದಾರೆ. ಯಥರ್ವ್​ ‘ನಾನು ಡೈನೋಸಾರ್​’ ಎಂದು ಕೂಗಿದ್ದಾನೆ. ಇದಕ್ಕೆ ಯಶ್​, ‘ನನಗೆ ಹಾಗೂ ಆಯ್ರಾಗೆ ಭಯವಾಗುತ್ತಿದೆ’ ಎಂದು ಹೇಳಿದ್ದಾರೆ. ಮುಂದುವರಿದು ‘ನಾನು ಹುಲಿ ಆಗುತ್ತಿದ್ದೇನೆ’ ಎಂದು ಹೇಳುತ್ತಾ, ಹುಲಿಯಂತೆ ಘರ್ಜಿಸಿದ್ದಾರೆ ಯಶ್. ಇದನ್ನು ನೋಡಿ ಯಥರ್ವ್​ ಅಲ್ಲಿಂದ ಓಡಿ ಹೋಗಿದ್ದಾನೆ.

ಈ ವಿಡಿಯೋಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಯಶ್ ಅವರನ್ನು ಪಕ್ಕಾ ಫ್ಯಾಮಿಲಿ ಮ್ಯಾನ್ ಎಂದು ಹೊಗಳಿದ್ದಾರೆ. ವಿಡಿಯೋ ಹಂಚಿಕೊಂಡ ಒಂದು ಗಂಟೆಯಲ್ಲಿ 8 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಕಲೆಕ್ಷನ್​ ನೋಡಿ ಎಲ್ಲರೂ ದಂಗಾಗಿದ್ದಾರೆ. ಹಲವು ಘಟಾನುಘಟಿ ಸ್ಟಾರ್​ ಸಿನಿಮಾಗಳನ್ನೆಲ್ಲ ಹಿಂದಿಕ್ಕಿ ಈ ಚಿತ್ರ ಧೂಳೆಬ್ಬಿಸಿದೆ. ಗಲ್ಲಾಪೆಟ್ಟಿಗೆಯಲ್ಲಿ ‘ಕೆಜಿಎಫ್​ 2’ ಕಲೆಕ್ಷನ್​ ಇನ್ನೂ ತಗ್ಗಿಲ್ಲ. ಬಿಡುಗಡೆಯಾಗಿ 28 ದಿನ ಕಳೆದಿದೆ. ಆದರೂ ಸಹ ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ತನ್ನ ನೆಲೆಯನ್ನು ಬೇರೆ ಸಿನಿಮಾಗೆ ಬಿಟ್ಟುಕೊಟ್ಟಿಲ್ಲ. ಈವರೆಗೂ 1160 ಕೋಟಿ ರೂಪಾಯಿ ಗಳಿಸಿರುವ ಈ ಸಿನಿಮಾದಿಂದ ನಿರ್ದೇಶಕ ಪ್ರಶಾಂತ್​ ನೀಲ್​ ಅವರ ಖ್ಯಾತಿ ವಿಶ್ವಾದ್ಯಂತ ಹಬ್ಬಿದೆ. ‘ಕೆಜಿಎಫ್​ 2’ ಸಿನಿಮಾದ ಕಲೆಕ್ಷನ್​ 1200 ಕೋಟಿ ರೂಪಾಯಿ ಗಡಿ ಮುಟ್ಟಲಿದೆಯೇ ಎಂಬ ಕೌತುಕ ನಿರ್ಮಾಣ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:43 pm, Wed, 11 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ