‘ರಾಣ’ ಚಿತ್ರಕ್ಕೆ ಹೀರೋ ಆದ ಕೆ.ಮಂಜು ಪುತ್ರ ಶ್ರೇಯಸ್​; ಯಶ್​ ಸಿನಿಮಾ ನಿರ್ಮಾಪಕರು ಟೈಟಲ್​ ಬಿಟ್ಟುಕೊಟ್ಟಿದ್ದೇಕೆ?

‘ರಾಣ’ ಚಿತ್ರಕ್ಕೆ ಖ್ಯಾತ ನಿರ್ಮಾಪಕ ನಂದಕಿಶೋರ್​ ನಿರ್ದೇಶನ ಮಾಡುತ್ತಿದ್ದಾರೆ. ‘ರನ್ನ’, ‘ಪೊಗರು’ ಅಂಥ ಸಿನಿಮಾಗಳಿಗೆ ಆ್ಯಕ್ಷನ್​ ಕಟ್​ ಹೇಳಿದ ಖ್ಯಾತಿ ನಂದಕಿಶೋರ್​ಗೆ ಇದೆ. ಈಗ ಅವರು, ಶ್ರೇಯಸ್ ವೃತ್ತಿ ಜೀವನದ​ ಮೂರನೇ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳೋಕೆ ರೆಡಿ ಆಗಿದ್ದಾರೆ.

‘ರಾಣ’ ಚಿತ್ರಕ್ಕೆ ಹೀರೋ ಆದ ಕೆ.ಮಂಜು ಪುತ್ರ ಶ್ರೇಯಸ್​; ಯಶ್​ ಸಿನಿಮಾ ನಿರ್ಮಾಪಕರು ಟೈಟಲ್​ ಬಿಟ್ಟುಕೊಟ್ಟಿದ್ದೇಕೆ?
ಯಶ್​-ಶ್ರೇಯಸ್
TV9kannada Web Team

| Edited By: Rajesh Duggumane

Jul 01, 2021 | 6:08 PM

‘ರಾಣ’ ಚಿತ್ರದಲ್ಲಿ ‘ರಾಕಿಂಗ್​ ಸ್ಟಾರ್’​ ಯಶ್​ ನಟಿಸಬೇಕಿತ್ತು. ಆದರೆ, ಈ ಸಿನಿಮಾ ಟೈಟಲ್​ಅನ್ನು ಚಿತ್ರದ ನಿರ್ಮಾಪಕರು ಬಿಟ್ಟುಕೊಟ್ಟಿದ್ದಾರೆ. ಈ ಚಿತ್ರದಲ್ಲಿ ನಿರ್ಮಾಪಕ ಕೆ. ಮಂಜು ಮಗ ಶ್ರೇಯಸ್​ ನಟಿಸುತ್ತಿದ್ದಾರೆ. ಜುಲೈ 7ರಂದು ಸಿನಿಮಾದ ಮುಹೂರ್ತ ನಡೆಯಲಿದೆ. ನಂತರದ ಚಿತ್ರದ ಕೆಲಸಗಳು ಆರಂಭಗೊಳ್ಳಲಿವೆ.

‘ರಾಣ’ ಚಿತ್ರಕ್ಕೆ ಖ್ಯಾತ ನಿರ್ಮಾಪಕ ನಂದಕಿಶೋರ್​ ನಿರ್ದೇಶನ ಮಾಡುತ್ತಿದ್ದಾರೆ. ‘ರನ್ನ’, ‘ಪೊಗರು’ ಅಂಥ ಸಿನಿಮಾಗಳಿಗೆ ಆ್ಯಕ್ಷನ್​ ಕಟ್​ ಹೇಳಿದ ಖ್ಯಾತಿ ನಂದಕಿಶೋರ್​ಗೆ ಇದೆ. ಈಗ ಅವರು, ಶ್ರೇಯಸ್ ವೃತ್ತಿ ಜೀವನದ​ ಮೂರನೇ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳೋಕೆ ರೆಡಿ ಆಗಿದ್ದಾರೆ. ಈ ಚಿತ್ರವನ್ನು ನಿರ್ಮಾಪಕ ಕೆ.ಮಂಜು ಅರ್ಪಿಸುತ್ತಿದ್ದು, ಗುಜ್ಜಲ್ ಪುರುಷೋತ್ತಮ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ರೇಶ್ಮಾ ನಾಣಯ್ಯ ನಾಯಕಿ. ಇಂದು (ಜುಲೈ 1) ಬೆಳಗ್ಗೆ ಬೆಂಗಳೂರಿನ ಮೋದಿ‌ ಆಸ್ಪತ್ರೆ ಬಳಿಯ ಗಣಪತಿ ದೇವಸ್ಥಾನದಲ್ಲಿ ಟೈಟಲ್​ ಲಾಂಚ್​ ನೆರವೇರಿದೆ.

‘ರಾಣ’ ಚಿತ್ರದ ಶೀರ್ಷಿಕೆ ಮೊದಲು ನಿರ್ಮಾಪಕ ರಮೇಶ್ ಕಶ್ಯಪ್ ಅವರ ಬಳಿಯಿತ್ತು. ಯಶ್ ಅವರು ‘ರಾಣ’ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ, ರಮೇಶ್ ಕಶ್ಯಪ್ ಅವರು ನಮಗಾಗಿ ಈ ಶೀರ್ಷಿಕೆ ಬಿಟ್ಟುಕೊಟ್ಟಿದ್ದಾರೆ. ಶೀರ್ಷಿಕೆ ನೀಡಿದ ರಮೇಶ್ ಕಶ್ಯಪ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಧನ್ಯವಾದ ಎಂದು ನಿರ್ಮಾಪಕ ಪುರುಷೋತ್ತಮ ಗುಜ್ಜಾಲ್, ಕೆ.ಮಂಜು ಹಾಗೂ ಶ್ರೇಯಸ್​  ತಿಳಿಸಿದ್ದಾರೆ.

ಚಂದನ್ ಶೆಟ್ಟಿ ಸಂಗೀತ ನೀಡುತ್ತಿರುವ ಈ ಚಿತ್ರಕ್ಕೆ ಶೇಖರ್ ಚಂದ್ರು ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆಯುತ್ತಿದ್ದಾರೆ‌. ಶೀಘ್ರವೇ ಈ ಚಿತ್ರದ ಕೆಲಸಗಳು ನಡೆಯಲಿವೆ.

ಶ್ರೇಯಸ್​ ಈ ಮೊದಲು ‘ಪಡ್ಡೆ ಹುಲಿ’ ಹಾಗೂ ‘ವಿಷ್ಣು ಪ್ರಿಯಾ’ ಚಿತ್ರಗಳಲ್ಲಿ ನಟಿಸಿದ್ದರು. ಈ ಎರಡೂ ಚಿತ್ರಗಳು ಹೇಳಿಕೊಳ್ಳುವಂಥ ಹೆಸರು ಮಾಡಿಲ್ಲ. ಹೀಗಾಗಿ, ಅವರು ಮೂರನೇ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ:  ಸಿನಿಮಾ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಬಂದ ಕೇಂದ್ರದ ವಿರುದ್ಧ ಕಿಡಿಕಾರಿದ ನಟಿ ರಮ್ಯಾ

ಧ್ರುವ ಸರ್ಜಾ ‘ದುಬಾರಿ’ ಆಲೋಚನೆ ಸದ್ಯಕ್ಕೆ ಕೈಬಿಟ್ಟ ನಿರ್ಮಾಪಕರು; ಚಿತ್ರದಿಂದ ಹೊರನಡೆದ ನಿರ್ದೇಶಕ ನಂದ ಕಿಶೋರ್​?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada