AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಭಾವನೆ ಬಗ್ಗೆ ಮಾತನಾಡಿದ ಯಶ್, 50 ಕೋಟಿ ಅಲ್ಲ, ಮತ್ತೆಷ್ಟು?

Yash remuneration: ಶಾರುಖ್ ಖಾನ್, ವಿಜಯ್, ಪ್ರಭಾಸ್, ಅಲ್ಲು ಅರ್ಜುನ್ ಇವೇ ಹೆಸರುಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಇನ್ನು ಮುಂದೆ ಹಾಗಿಲ್ಲ. ಯಶ್, ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗಷ್ಟೆ ಯಶ್ ಅವರು ‘ಆಪ್​​ ಕಿ ಅದಾಲತ್’ ಟಿವಿ ಸಂದರ್ಶನದಲ್ಲಿ ಭಾಗಿ ಆಗಿದ್ದು, ಸಂದರ್ಶನದಲ್ಲಿ ತಮ್ಮ ಸಂಭಾವನೆ ಬಗ್ಗೆಯೂ ಮಾತನಾಡಿದ್ದಾರೆ.

ಸಂಭಾವನೆ ಬಗ್ಗೆ ಮಾತನಾಡಿದ ಯಶ್, 50 ಕೋಟಿ ಅಲ್ಲ, ಮತ್ತೆಷ್ಟು?
Yash
ಮಂಜುನಾಥ ಸಿ.
|

Updated on: Aug 14, 2026 | 5:42 PM

Share

ಮುಖ್ಯಾಂಶಗಳು

  • ಯಶ್ ಸಂಭಾವನೆ ಎಷ್ಟು ಕೋಟಿ?
  • ಸಂದರ್ಶನದಲ್ಲಿ ತಮ್ಮ ಸಂಭಾವನೆ ಬಗ್ಗೆ ಯಶ್ ಮಾತನಾಡಿದ್ದಾರೆ.
  • ಯಶ್ ಸಂಭಾವನೆ 50 ಕೋಟಿ ಅಲ್ಲವಂತೆ, ಮತ್ತೆಷ್ಟು?

ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವವರ ವಿಷಯ ಬಂದಾಗ ಕನ್ನಡದ ನಟರ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಶಾರುಖ್ ಖಾನ್, ವಿಜಯ್, ಪ್ರಭಾಸ್, ಅಲ್ಲು ಅರ್ಜುನ್ ಇವೇ ಹೆಸರುಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಇನ್ನು ಮುಂದೆ ಹಾಗಿಲ್ಲ. ಯಶ್ (Yash), ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗಷ್ಟೆ ಯಶ್ ಅವರು ‘ಆಪ್​​ ಕಿ ಅದಾಲತ್’ ಟಿವಿ ಸಂದರ್ಶನದಲ್ಲಿ ಭಾಗಿ ಆಗಿದ್ದು, ಸಂದರ್ಶನದಲ್ಲಿ ತಮ್ಮ ಸಂಭಾವನೆ ಬಗ್ಗೆಯೂ ಮಾತನಾಡಿದ್ದಾರೆ.

ಸಂದರ್ಶಕ ರಜತ್ ಶರ್ಮಾ ಅವರು, ‘ನೀವು ಟಿವಿ ಧಾರಾವಾಹಿಗಳಲ್ಲಿ ನಟಿಸುವಾಗಲೇ ಹಲವು ಸಿನಿಮಾ ಆಫರ್ ಆಗಿತ್ತಂತೆ. ಆದರೆ ನೀವು ಅವರಿಂದ ಚಿತ್ರಕತೆ ಕೇಳಿದಿರಂತೆ. ಧಾರಾವಾಹಿ ನಟ ಚಿತ್ರಕತೆ ಕೇಳುತ್ತಾನಲ್ಲ? ಎಂದು ಅವರು ನಿಮಗೆ ಸಿನಿಮಾ ಕೊಡಲಿಲ್ಲವಂತೆ ನಿಜವೇ?’ ಎಂದು ಪ್ರಶ್ನಿಸಿದ್ದಾರೆ. ‘ಚಿತ್ರಕತೆ ಕೇಳಿದ್ದು ತಪ್ಪೆ?’ ಎಂದು ಯಶ್ ಉತ್ತರಿಸಿದ್ದಾರೆ. ಮುಂದುವರೆದು, ‘ಆ ಸಿನಿಮಾಗಳು ನನ್ನ ಕೈಬಿಟ್ಟು ಹೋದವು, ಆದರೆ ಅವರು (ನಿರ್ದೇಶಕರು) ಈಗ ಎಲ್ಲಿದ್ದಾರೋ ಗೊತ್ತಿಲ್ಲ’ ಎಂದು ಮಾಸ್ ಆಗಿ ಉತ್ತರ ಕೊಟ್ಟಿದ್ದಾರೆ.

ಬಳಿಕ ಯಶ್ ಅವರು, ‘ನೀವು ಸಿನಿಮಾಕ್ಕೆ 50 ಕೋಟಿ ಸಂಭಾವನೆ ಪಡೆಯುತ್ತೀರಂತೆ?’ ಎಂದಿದ್ದಾರೆ. ಅದಕ್ಕೆ ಯಶ್, ‘ಇಲ್ಲ, ಅದಕ್ಕಿಂತಲೂ ಹೆಚ್ಚು’ ಎಂದು ಮತ್ತೊಂದು ಮಾಸ್ ಉತ್ತರ ನೀಡಿದ್ದಾರೆ. ಈ ಮೂಲಕ ಯಶ್ ಸ್ಪಷ್ಟವಾಗಿ ಹೇಳಿದ್ದಾರೆ. ತಮ್ಮ ಸಂಭಾವನೆ 50 ಕೋಟಿ ಅಲ್ಲ ಅದಕ್ಕಿಂತಲೂ ಎಷ್ಟೋ ಹೆಚ್ಚೆಂದು. ಕೆಲ ಮೂಲಗಳ ಪ್ರಕಾರ ಅವರು ‘ರಾಮಾಯಣ’ ಸಿನಿಮಾಕ್ಕೆ 100 ಕೋಟಿಗೂ ಹೆಚ್ಚು ಸಂಭಾವನೆ ಪಡೆದಿದ್ದಾರೆ. ‘ಟಾಕ್ಸಿಕ್’ ಸಿನಿಮಾಕ್ಕೆ ಅವರು ಸಹ ನಿರ್ಮಾಪಕ ಆಗಿದ್ದಾರೆ.

ಇದನ್ನೂ ಓದಿ:ಅಭಿಮಾನಿಯ ಅಂತ್ಯಕ್ರಿಯೆಗೆ ಹೋಗಲಿಲ್ಲ ಏಕೆ? ಯಶ್ ಕೊಟ್ಟರು ಕಾರಣ

ಯಶ್, ಅವರು ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಕೊಟ್ಟಿರುವ ಉತ್ತರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಯಶ್ ಅವರು ರಜತ್ ಶರ್ಮಾ ಅವರು ಕೇಳಿರುವ ಪ್ರತಿ ಪ್ರಶ್ನೆಗೆ ಮಾಸ್ ಉತ್ತರಗಳನ್ನು ನೀಡಿದ್ದಾರೆ. ಎಪಿಸೋಡ್​​ನ ಟೀಸರ್, ಟ್ರೈಲರ್​​ಗಳು ಮಾತ್ರವೇ ಬಿಡುಗಡೆ ಆಗಿವೆ. ಪೂರ್ಣ ಎಪಿಸೋಡ್ ನಾಳೆ (ಆಗಸ್ಟ್ 15) ರಿಲೀಸ್ ಆಗಲಿದೆ.

‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ರಾಯ ಮತ್ತು ಟಿಕೆಟ್ ಹೆಸರಿನ ಎರಡು ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ. ಸಿನಿಮಾ ಅನ್ನು ಗೀತು ಮೋಹನ್​​ದಾಸ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ, ಕಿಯಾರಾ ಅಡ್ವಾಣಿ ಮತ್ತು ರುಕ್ಮಿಣಿ ವಸಂತ್ ನಾಯಕಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us