ಕೇರಳದಲ್ಲಿ ಡಾಮಿನೇಷನ್ ಮಾಡಲು ರೆಡಿ ಆದ ‘ಟಾಕ್ಸಿಕ್’; ದೊಡ್ಡ ಸಂಸ್ಥೆ ಪಾಲಾಯ್ತು ಹಂಚಿಕೆ ಹಕ್ಕು

ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರ ಕೇರಳದಲ್ಲಿ ಭರ್ಜರಿ ಪ್ರದರ್ಶನಕ್ಕೆ ಸಜ್ಜಾಗಿದೆ. 'ಎ4 ಎಂಟರ್‌ಟೈನ್‌ಮೆಂಟ್ಸ್' ದೊಡ್ಡ ಮೊತ್ತಕ್ಕೆ ಹಂಚಿಕೆ ಹಕ್ಕುಗಳನ್ನು ಪಡೆದುಕೊಂಡಿದ್ದು, ರಾಜ್ಯಾದ್ಯಂತ 350ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಿದೆ. 'ಕೆಜಿಎಫ್ 2' ಯಶಸ್ಸಿನ ನಂತರ ಮತ್ತು ಗೀತು ಮೋಹನ್‌ದಾಸ್ ನಿರ್ದೇಶನದಿಂದ, 'ಟಾಕ್ಸಿಕ್' ಚಿತ್ರಕ್ಕೆ ಕೇರಳದಲ್ಲಿ ಭಾರಿ ನಿರೀಕ್ಷೆ ಮೂಡಿದೆ.

ಕೇರಳದಲ್ಲಿ ಡಾಮಿನೇಷನ್ ಮಾಡಲು ರೆಡಿ ಆದ ‘ಟಾಕ್ಸಿಕ್’; ದೊಡ್ಡ ಸಂಸ್ಥೆ ಪಾಲಾಯ್ತು ಹಂಚಿಕೆ ಹಕ್ಕು
ಯಶ್

Updated on: Feb 23, 2026 | 12:25 PM

‘ಟಾಕ್ಸಿಕ್’ ಸಿನಿಮಾ (Toxic Movie) ಬಗ್ಗೆ ಭಾರೀ ಕ್ರೇಜ್ ಸೃಷ್ಟಿ ಆಗಿದೆ. ಈ ಚಿತ್ರದ ಹಕ್ಕುಗಳನ್ನು ಖರೀದಿ ಮಾಡಲು ವಿವಿಧ ಸಂಸ್ಥಗಳು ಕಣ್ಣಿಟ್ಟಿವೆ. ಈ ಚಿತ್ರವನ್ನು ವಿದೇಶದಲ್ಲಿ ಹಂಚಿಕೆ ಮಾಡಲು ‘ಫಾರ್​ಸ್​ ಫಿಲ್ಮ್ಸ್’ ಮುಂದೆ ಬಂದಿದೆ. ಈಗ ಸಿನಿಮಾನ ಕೇರಳದಲ್ಲಿ ಹಂಚಿಕೆ ಮಾಡಲು ‘ಎ4 ಎಂಟರ್​​ಟೇನ್​​ಮೆಂಟ್ಸ್ ಮುಂದೆ ಬಂದಿದೆ. ಈ ಸಂಸ್ಥೆಯನ್ನು ಸಿವಿ ಸಾರಥಿ ಹಾಗೂ ಮುಕೇಶ್ ಮೆಹ್ತಾ ಮುನ್ನಡೆಸುತ್ತಿದ್ದಾರೆ. ಕೇರಳಾದ್ಯಂತ ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡಲು ಇವರು ಪ್ಲ್ಯಾನ್ ಮಾಡ್ತಿದ್ದಾರೆ.

‘ಎ4 ಎಂಟರ್​​ಟೇನ್​​ಮೆಂಟ್’ಗೆ ಕೇರಳದಲ್ಲಿ ‘ಪುಷ್ಪ 2’, ‘ಅನಿಮಲ್’, ‘ಲಿಯೋ’, ‘ಅವತಾರ್’ ರೀತಿಯ ದೊಡ್ಡ ಚಿತ್ರಗಳನ್ನು ಹಂಚಿಕೆ ಮಾಡಿದ ಅನುಭವ ಇದೆ. ಹೀಗಾಗಿ, ದೊಡ್ಡ ಮಟ್ಟದಲ್ಲಿ ‘ಟಾಕ್ಸಿಕ್’ ಚಿತ್ರವನ್ನು ಇವರು ರಿಲೀಸ್ ಮಾಡಲು ಪ್ಲ್ಯಾನ್ ನಡೆಸಿದ್ದಾರೆ. ಈ ಸಿನಿಮಾ ಹಕ್ಕನ್ನು ಇವರು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದ್ದಾರೆ ಎಂದು ಹೇಳಲಾಗುತ್ತಾ ಇದೆ.

ಕೇರಳದಲ್ಲಿ ‘ಕೆಜಿಎಫ್ 2’ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಮಲಯಾಳಂ ಸಿನಿಮಾ ಅಲ್ಲದಿದ್ದರೂ, ‘ಕೆಜಿಎಫ್ 2’ ಕೇರಳದಲ್ಲಿ ಸಾಕಷ್ಟು ದಾಖಲೆಗಳನ್ನು ಬರೆದಿತ್ತು. ಈಗ ಯಶ್ ಅವರ ಸಿನಿಮಾ ‘ಟಾಕ್ಸಿಕ್’ ರಿಲೀಸ್ ಆಗುತ್ತಿರುವುದರಿಂದ ಸಾಕಷ್ಟು ನಿರೀಕ್ಷೆ ಇದೆ. ಕೇರಳದಲ್ಲಿ 350ಕ್ಕೂ ಅಧಿಕ ಪರದೆಗಳಲ್ಲಿ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್​​ದಾಸ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಕಾರಣದಿಂದ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ.

ಇದನ್ನೂ ಓದಿ: ಯಶ್ ‘ಟಿಕೆಟ್’ ಲುಕ್ ಎಐ ಎಂದವರಿಗೆ ಸಿಕ್ತು ಉತ್ತರ; ಯಶ್ ಮೇಕೋವರ್ ನೋಡಿ

ಹಿಂದಿಯಲ್ಲಿ ಅನಿಲ್ ತಡಾನಿ ಅವರ ‘ಎಎ ಫಿಲ್ಮ್ಸ್’ ಹಿಂದಿಯಲ್ಲಿ ಹಂಚಿಕೆ ಮಾಡುತ್ತಿದೆ. ತೆಲುಗಿನಲ್ಲಿ ದಿಲ್ ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಖರೀದಿ ಮಾಡಿದೆ. ಕನ್ನಡದಲ್ಲಿ ಕೆವಿಎನ್ ಹಂಚಿಕೆ ಮಾಡಲಿದೆ.
ಯಶ್ ಹಾಗೂ ಗೀತು ಒಟ್ಟಾಗಿ ‘ಟಾಕ್ಸಿಕ್’ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್​​ನಲ್ಲಿ ಸಿನಿಮಾ ಶೂಟ್ ಮಾಡಿದ್ದಾರೆ. ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗೆ ಡಬ್ ಆಗಿ ಸಿನಿಮಾ ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us