AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವ ಹಾಗೂ ಆ ನಟಿ ಬಗ್ಗೆ ಕೇಳಿದ್ದಕ್ಕೆ ರಾಜ್​​ಕುಮಾರ್ ಹಾಡಿನ ಮೂಲಕ ಉತ್ತರಿಸಿದ ಶ್ರೀದೇವಿ

ಯುವ ರಾಜ್​​ಕುಮಾರ್ ಮತ್ತು ಶ್ರೀದೇವಿ ವಿಚ್ಛೇದನ ನಿರ್ಧಾರದಿಂದ ಸುದ್ದಿಯಲ್ಲಿದ್ದಾರೆ. ಇಬ್ಬರೂ ಮದುವೆ ಆದವರು. ಕೆಲವೇ ವರ್ಷ ಸಂಸಾರ ನಡೆಸಿ ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದರು. ಇಬ್ಬರ ಮಧ್ಯೆ ಸಾಕಷ್ಟು ವೈಮನಸ್ಸು ಮೂಡಿದ್ದರಿಂದ ಇವರು ಬೇರೆ ಆಗುತ್ತಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಯುವ ಕುರಿತ ಪ್ರಶ್ನೆಗೆ ಶ್ರೀದೇವಿ ರಾಜ್​​ಕುಮಾರ್ ಅವರ ಹಾಡಿನ ಮೂಲಕ ಉತ್ತರಿಸಿದ್ದಾರೆ.

ಯುವ ಹಾಗೂ ಆ ನಟಿ ಬಗ್ಗೆ ಕೇಳಿದ್ದಕ್ಕೆ ರಾಜ್​​ಕುಮಾರ್ ಹಾಡಿನ ಮೂಲಕ ಉತ್ತರಿಸಿದ ಶ್ರೀದೇವಿ
ಯುವ-ಶ್ರೀದೇವಿ
ರಾಜೇಶ್ ದುಗ್ಗುಮನೆ
|

Updated on: Dec 18, 2025 | 8:52 AM

Share

ಯುವ ರಾಜ್​​ಕುಮಾರ್ ಹಾಗೂ ಶ್ರೀದೇವಿ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಇಬ್ಬರೂ ಪರಸ್ಪರ ಆರೋಪ ಹಾಗೂ ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಾ ಬರುತ್ತಿದ್ದಾರೆ. ಶ್ರೀದೇವಿ ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಶ್ರೀದೇವಿ ಅವರಿಗೆ ಯುವ ಬಗ್ಗೆ ಪ್ರಶ್ನೆ ಬಂದಿದೆ. ಇದಕ್ಕೆ ಅವರು ರಾಜ್​​ಕುಮಾರ್ ಹಾಡಿನ ಮೂಲಕ ಉತ್ತರ ನೀಡಿದ್ದಾರೆ. ನಟಿಯ ಬಗ್ಗೆ ಕೇಳಿದ ಪ್ರಶ್ನೆಗೂ ಉತ್ತರಿಸಿದ್ದಾರೆ.

ಯುವ ಹಾಗೂ ಶ್ರೀದೇವಿ ಪ್ರೀತಿಸಿ ಮದುವೆ ಆದವರು. ಕೆಲವೇ ವರ್ಷ ಸಂಸಾರ ನಡೆಸಿ ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದರು. ಇಬ್ಬರ ಮಧ್ಯೆ ಸಾಕಷ್ಟು ವೈಮನಸ್ಸು ಮೂಡಿದ್ದರಿಂದ ಇವರು ಬೇರೆ ಆಗುತ್ತಿದ್ದಾರೆ. ಈ ಪ್ರಕರಣ ಕೋರ್ಟ್​​ನಲ್ಲಿದೆ. ಹೀಗಿರುವಾಗಲೇ ಯುವ ಅವರ ಬಗ್ಗೆ ಶ್ರೀದೇವಿ ಬಳಿ ಕೇಳಲಾಗಿದೆ. ಇದಕ್ಕೆ ಶ್ರೀದೇವಿ ಮುಚ್ಚುಮರೆ ಇಲ್ಲದೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಯುವ ರಾಜ್​ಕುಮಾರ್ ವಿಚ್ಛೇದನ: ಕೋರ್ಟ್ ಮೆಟ್ಟಿಲೇರಿದ ರಾಜ್​​ಕುಮಾರ್ ಕುಟುಂಬದ ಕುಡಿ; ಕಾರಣವೇನು?

ಶ್ರೀದೇವಿ ಅವರು ಇನ್​​ಸ್ಟಾಗ್ರಾಮ್​​ನಲ್ಲಿ ‘ಆಸ್ಕ್​ ಮಿ ಎನಿಥಿಂಗ್’ ಸೆಷನ್ ನಡೆಸಿದರು. ಈ ವೇಳೆ ‘ಯುವರಾಜ್​​ಕುಮಾರ್ ಬಗ್ಗೆ ಏನು ಹೇಳ್ತೀರಾ’ ಎಂದು ಕೇಳಲಾಯಿತು. ಈ ಪ್ರಶ್ನೆಯನ್ನು ಪೋಸ್ಟ್ ಮಾಡಿ, ‘ಬಾನಿಗೊಂದು ಎಲ್ಲೆ ಎಲ್ಲಿದೆ’ ಹಾಡನ್ನು ಹಾಕಿದ್ದಾರೆ ಶ್ರೀದೇವಿ. ಈ ಪೋಸ್ಟ್ ಗಮನ ಸೆಳೆದಿದೆ. ಯುವ ಹಾಗೂ ಆ ನಟಿಯ ಬಗ್ಗೆ ಏನು ಹೇಳ್ತೀರಾ ಎಂದು ಕೇಳಿದ್ದಕ್ಕೆ, ‘ಮೋಸ ಮಾಡೋದು ಆಯ್ಕೆ, ತಪ್ಪಾಗಿ ಪಡೆಯೋದಲ್ಲ’ ಎಂಬರ್ಥದಲ್ಲಿ ಉತ್ತರಿಸಿದ್ದಾರೆ. ಈ ಪೋಸ್ಟ್​​ನಲ್ಲಿ ನಟಿಯ ಹೆಸರನ್ನು ಬ್ಲರ್ ಮಾಡಿದ್ದಾರೆ.

7 ವರ್ಷಗಳ ಕಾಲ ಯುವ ಹಾಗೂ ಶ್ರೀದೇವಿ ಪ್ರೀತಿಸಿದರು. 2019ರಲ್ಲಿ ಇವರು ವಿವಾಹ ಆದರು. ನಾಲ್ಕೇ ವರ್ಷ ಸಂಸಾರ ನಡೆಸಿದ ಇವರು ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಇವರು ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಅನೇಕ ಬಾರಿ ಯುವ ಹಾಗೂ ಅವರ ಕುಟುಂಬದವರ ಮೇಲೆ ಶ್ರೀದೇವಿ ಸಿಟ್ಟು ಹೊರಹಾಕಿದ್ದಾರೆ. ಈಗ ಯುವ ಬಗ್ಗೆ ಕೇಳಿದ್ದಕ್ಕೆ ರಾಜ್​​ಕುಮಾರ್ ಹಾಡು ಹಾಕಿ ಉತ್ತರಿಸಿದ್ದು ವಿಶೇಷವಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!