ರಶ್ಮಿಕಾ ಮಂದಣ್ಣಗೂ ಸಂಜಯ್ ದತ್ಗೂ ಇದೆ ಸಾಮ್ಯತೆ ಏನದು?
Rashmika Mandanna and Sanjay Dutt: ಸಂಜಯ್ ದತ್ ಬಾಲಿವುಡ್ನ ಸ್ಟಾರ್ ನಟ ಮಾತ್ರವಲ್ಲ ಪ್ಯಾನ್ ಇಂಡಿಯಾದ ಬಲು ಬೇಡಿಕೆಯ ವಿಲನ್ ಸಹ. ಇನ್ನು ರಶ್ಮಿಕಾ ಮಂದಣ್ಣ ಕೊಡಗಿನ ಹುಡುಗಿ ಪ್ಯಾನ್ ಇಂಡಿಯಾದ ಸ್ಟಾರ್ ನಟಿ. ಈ ಇಬ್ಬರ ನಡುವೆ ಒಂದು ಸಾಮ್ಯತೆ ಇದೆ. ಏನದು?

ರಶ್ಮಿಕಾ ಮಂದಣ್ಣ (Rashmika Mandanna) ಪ್ಯಾನ್ ಇಂಡಿಯಾ ಸ್ಟಾರ್ ನಟಿ, ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ನೀಡುತ್ತಾ ಸಾಗುತ್ತಿದ್ದಾರೆ. ಇದೀಗ ವಿಜಯ್ ದೇವರಕೊಂಡ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ರಶ್ಮಿಕಾ, ಶೀಘ್ರವೇ ವಿಜಯ್ ದೇವರಕೊಂಡ ಜೊತೆ ಅದ್ಧೂರಿ ವಿವಾಹ ಸಹ ಆಗಲಿದ್ದಾರೆ. ಇನ್ನೊಂದೆಡೆ ಸಂಜಯ್ ದತ್, ಪ್ಯಾನ್ ಇಂಡಿಯಾ ಸ್ಟಾರ್ ವಿಲನ್ ಎನಿಸಿಕೊಂಡಿದ್ದಾರೆ. ಬಾಲಿವುಡ್ನ ಸ್ಟಾರ್ಗಳಲ್ಲಿ ಒಬ್ಬರಾದ ಸಂಜಯ್ ದತ್ ಬಾಲಿವುಡ್ನಲ್ಲಿ ಮಾತ್ರವಲ್ಲ ದಕ್ಷಿಣ ಭಾರತದಲ್ಲೂ ಬೇಡಿಕೆಯ ಸ್ಟೈಲಿಷ್ ವಿಲನ್. ಸಂಜಯ್ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸಿದ್ದಿಲ್ಲ. ಆದರೆ ಈ ಇಬ್ಬರಿಗೂ ಒಂದು ಸಾಮ್ಯತೆ ಇದೆ, ಏನದು ಗೊತ್ತೆ?
1000 ಕೋಟಿ ಗಳಿಕೆ ಎನ್ನುವುದು ಭಾರತದ ಸಿನಿಮಾಗಳ ಪಾಲಿಗೆ ಅಲ್ಟಿಮೇಟ್ ಯಶಸ್ಸು. ಯಾವುದೇ ಸಿನಿಮಾ 1000 ಕೋಟಿ ಗಳಿಸಿತೆಂದರೆ ಅದು ದಾಖಲೆ ನಿರ್ಮಿಸಿದಂತೆಯೇ ಸರಿ. ಆದರೆ ಈ 1000 ಕೋಟಿ ಸಿನಿಮಾ ಯಾರ ಖಾತೆಯಲ್ಲಿ ಹೆಚ್ಚಿದೆ ಎಂದರೆ ಸಹಜವಾಗಿ ಪ್ರಭಾಸ್, ಶಾರುಖ್ ಖಾನ್, ಅಲ್ಲು ಅರ್ಜುನ್ ಎಂಬ ಉತ್ತರ ಬರಬಹುದು ಆದರೆ ಅತಿ ಹೆಚ್ಚು ಸಾವಿರ ಕೋಟಿ ಗಳಿಸಿರುವ ಸಿನಿಮಾಗಳಲ್ಲಿ ನಟಿಸಿರುವುದು ರಶ್ಮಿಕಾ ಮಂದಣ್ಣ ಮತ್ತು ಸಂಜಯ್ ದತ್. ಇದೇ ಈ ಇಬ್ಬರ ನಡುವೆ ಇರುವ ಸಾಮ್ಯತೆ.
ರಶ್ಮಿಕಾ ಮಂದಣ್ಣ ಮತ್ತು ಸಂಜಯ್ ದತ್ ಇಬ್ಬರೂ ಸಹ ಸಾವಿರ ಕೋಟಿಗೂ ಹೆಚ್ಚು ಗಳಿಕೆ ಮಾಡಿರುವ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ ನಟಿಸಿರುವ ‘ಪುಷ್ಪ 2’ 1000 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ರಣ್ಬೀರ್ ಕಪೂರ್ ಜೊತೆಗೆ ನಟಿಸಿದ ‘ಅನಿಮಲ್’ ಸಿನಿಮಾ ಸಹ ವಿಶ್ವ ಬಾಕ್ಸ್ ಆಫೀಸ್ನಲ್ಲಿ 1000 ಕೋಟಿ ಗಳಿಕೆ ಮಾಡಿದೆ. ಬಳಿಕ ವಿಕ್ಕಿ ಕೌಶಲ್ ಜೊತೆಗೆ ನಟಿಸಿದ ‘ಛಾವಾ’ ಸಿನಿಮಾ ಸಹ ವಿಶ್ವ ಬಾಕ್ಸ್ ಆಫೀಸ್ನಲ್ಲಿ 1000 ಕೋಟಿಗೂ ಹೆಚ್ಚಿನ ಮೊತ್ತವನ್ನು ಗಳಿಕೆ ಮಾಡಿದೆ. ಆ ಮೂಲಕ ಮೂರು, 1000 ಕೋಟಿ ಸಿನಿಮಾಗಳು ರಶ್ಮಿಕಾ ಫಿಲ್ಮಾಗ್ರಫಿ ಸೇರಿಕೊಂಡಿವೆ.
ಇದನ್ನೂ ಓದಿ:ಸಂಜಯ್ ದತ್ಗೆ ಜೈಲಿನಲ್ಲಿ ಕೆಲಸ ಮಾಡಿದ್ದಕ್ಕೆ ಸಿಕ್ಕ ಹಣ ಎಷ್ಟು?
ಇನ್ನು ಸಂಜಯ್ ದತ್ ಅವರ ಮೊದಲ 1000 ಕೋಟಿ ಸಿನಿಮಾ ಕನ್ನಡದ ‘ಕೆಜಿಎಫ್ 2’. ಈ ಸಿನಿಮಾ ವಿಶ್ವಬಾಕ್ಸ್ ಆಫೀಸ್ನಲ್ಲಿ 1250 ಕೋಟಿ ಗಳಿಕೆ ಮಾಡಿದೆ. ಬಳಿಕ ಶಾರುಖ್ ಖಾನ್ ನಾಯಕರಾಗಿ ನಟಿಸಿರುವ ‘ಜವಾನ್’ ಸಿನಿಮಾನಲ್ಲೂ ಸಂಜಯ್ ದತ್ ನಟಿಸಿದ್ದು, ಈ ಸಿನಿಮಾ 1100 ಕೋಟಿ ಹಣ ಗಳಿಕೆ ಮಾಡಿತು. ಇದೀಗ ಸಂಜಯ್ ದತ್, ‘ಧುರಂಧರ್’ ಸಿನಿಮಾನಲ್ಲಿ ನಟಿಸಿದ್ದು, ಈ ಸಿನಿಮಾ ಸಹ 1000 ಕೋಟಿ ಕಲೆಕ್ಷನ್ ಗಡಿಯನ್ನು ದಾಟಿದೆ. 1000 ಕೋಟಿ ಗಳಿಸಿದ ಸಿನಿಮಾಗಳಲ್ಲಿ ಹೆಚ್ಚು ನಟಿಸಿದ ಶ್ರೇಯ ಸಂಜಯ್ ದತ್ ಮತ್ತು ರಶ್ಮಿಕಾ ಮಂದಣ್ಣ ಅವರ ಬಳಿ ಇದೆ. ಮುಂದೆ ಇದು ಬದಲಾದರೂ ಆಗಬಹುದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




