AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಯನ್ ಖಾನ್, ಶಿಲ್ಪಾ ಪತಿಗೆ ಜೈಲಿನಲ್ಲಿ ಕಿರುಕುಳ; ವಿಷಯ ರಿವೀಲ್ ಮಾಡಿದ ರಾಜಕಾರಣಿ

ಸಂಜಯ್ ರಾವತ್ ಅವರ ‘ಹೆವನ್ ಇನ್ ಹೆಲ್’ ಪುಸ್ತಕದಲ್ಲಿ ಆರ್ಥರ್ ರೋಡ್ ಜೈಲಿನ ಅವರ ಅನುಭವ ಹೇಳಿದ್ದಾರೆ. ಈ ವೇಳೆ ಆರ್ಯನ್ ಖಾನ್ ಜೊತೆಗಿನ ಅವರ ಒಡನಾಟದ ಬಗ್ಗೆ ಮಾತನಾಡಿದ್ದಾರೆ. ಆರ್ಯನ್ ಖಾನ್ ಅವರನ್ನು ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿಸಲಾಗಿತ್ತು ಮತ್ತು ಅವರು ಜೈಲಿನಲ್ಲಿ ಅನುಭವಿಸಿದ ಕಷ್ಟಗಳನ್ನು ರಾವತ್ ವಿವರಿಸಿದ್ದಾರೆ.

ಆರ್ಯನ್ ಖಾನ್, ಶಿಲ್ಪಾ ಪತಿಗೆ ಜೈಲಿನಲ್ಲಿ ಕಿರುಕುಳ; ವಿಷಯ ರಿವೀಲ್ ಮಾಡಿದ ರಾಜಕಾರಣಿ
ಆರ್ಯನ್ ಖಾನ್-ರಾಜ್ ಕುಂದ್ರಾ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:May 23, 2025 | 12:05 PM

Share

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ ಶಿವಸೇನಾ ಸಂಸದ ಸಂಜಯ್ ರಾವತ್ ನೂರು ದಿನಗಳಿಗೂ ಹೆಚ್ಚು ಕಾಲ ಮುಂಬೈನ ಆರ್ಥರ್ ರಸ್ತೆ ಜೈಲಿನಲ್ಲಿದ್ದರು. ಜೈಲಿನಲ್ಲಿ ತಮಗಾದ ಅನುಭವವನ್ನು ಆಧರಿಸಿ ‘ಹೆವನ್ ಇನ್ ಹೆಲ್’ (Heaven in Hell) ಎಂಬ ಪುಸ್ತಕವನ್ನು ಬರೆದರು. ಪುಸ್ತಕ ಬಿಡುಗಡೆ ಸಮಾರಂಭ ಕೆಲವು ದಿನಗಳ ಹಿಂದೆ ನಡೆಯಿತು. ಈ ಪುಸ್ತಕದಲ್ಲಿ, ರಾವತ್ ಅನೇಕ ಘಟನೆಗಳನ್ನು ವಿವರವಾಗಿ ವಿವರಿಸಿದ್ದಾರೆ. ಅಂತಹ ಒಂದು ಘಟನೆಯಲ್ಲಿ ಅವರು ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಉಲ್ಲೇಖಿಸಿದರು.

ಸಂಜಯ್ ರಾವತ್ ಜೈಲಿನಲ್ಲಿದ್ದ ಅದೇ ಸಮಯದಲ್ಲಿ, ಆರ್ಯನ್ ಖಾನ್ ಕೂಡ ಮಾದಕವಸ್ತು ಪ್ರಕರಣದಲ್ಲಿ ಆರ್ಥರ್ ರಸ್ತೆ ಜೈಲಿನಲ್ಲಿದ್ದರು. ಕಾರ್ಡೆಲಿಯಾ ಕ್ರೂಸ್ ಮಾದಕವಸ್ತು ಪ್ರಕರಣದಲ್ಲಿ ಅವರನ್ನು ಮತ್ತು ಅವರ ಸ್ನೇಹಿತರನ್ನು NDPS ಅಡಿಯಲ್ಲಿ ಬಂಧಿಸಿ ಆರ್ಥರ್ ರಸ್ತೆ ಜೈಲಿಗೆ ತರಲಾಯಿತು. ಆರ್ಯನ್ ಸುಮಾರು ಇಪ್ಪತ್ತೊಂದು ದಿನಗಳ ಕಾಲ ಜೈಲಿನಲ್ಲಿದ್ದರು. ಆರ್ಯನ್ ಮತ್ತು ಅವನ ಸ್ನೇಹಿತರು ಕೂಡ ರಾವುತ್ ಅವರ ಸೆಲ್ ಸಮೀಪವೇ ಇದ್ದರು.

ಆರ್ಯನ್ ಖಾನ್ ಬಳಿ ಯಾವುದೇ ರೀತಿಯ ಮಾದಕ ದ್ರವ್ಯಗಳು ಪತ್ತೆಯಾಗಿಲ್ಲ ಮತ್ತು ನಂತರ ತನಿಖೆಯ ಸಮಯದಲ್ಲಿ ಅವರು ಮಾದಕ ದ್ರವ್ಯಗಳನ್ನು ಸೇವಿಸಿಲ್ಲ ಎಂದು ತಿಳಿದುಬಂದಿದೆ. ಈಗ ಅವರ ಬಗ್ಗೆ ರಾವತ್ ಮಾತನಾಡಿದ್ದಾರೆ. ‘ಆರ್ಯನ್ ಜೈಲಿನಲ್ಲಿದ್ದಾಗ ಸಾಮಾನ್ಯವಾಗಿ ಏನನ್ನೂ ತಿನ್ನುತ್ತಿರಲಿಲ್ಲ. ಅವನು ಜೈಲಿನಲ್ಲಿ ಯಾರೊಂದಿಗೂ ಮಾತನಾಡಲಿಲ್ಲ. ರಾವತ್ ಸೆಲ್​ನ ಸಹಾಯಕ ಬಂದನು. ಅವನು ಆಮದು ಮಾಡಿದ ಬ್ರಾಂಡ್ ಟಿ-ಶರ್ಟ್ ಧರಿಸಿದ್ದನು. ನೀವು ತುಂಬಾ ದಪ್ಪವಾದ ಟಿ-ಶರ್ಟ್ ಧರಿಸಿದ್ದೀರಿ ಎಂದು ಅವರಿಗೆ ಹೇಳಿದೆ. ಅದಕ್ಕೆ ಸಹಾಯಕ ‘ಹೌದು ಸರ್, ನಾನು ಆರ್ಯನ್ ಖಾನ್ ಜೊತೆ ಹತ್ತನೇ ನಂಬರ್‌ ಸೆಲ್​ ನೋಡಿಕೊಳ್ಳುತ್ತಿದ್ದೆ. ಅವರು ಹೊರಡುವಾಗ ನನಗೆ ತಮ್ಮ ಟಿ-ಶರ್ಟ್ ನೀಡಿದರು ಎಂದು ಅವರು ಉತ್ತರಿಸಿದ್ದರು’ ಎಂದಿದ್ದಾರೆ ಸಂಜಯ್.

ಇದನ್ನೂ ಓದಿ
Image
‘ಕಾಂತಾರ: ಚಾಪ್ಟರ್ 1’ ಅಡಚಣೆ; ಅಂದುಕೊಂಡ ದಿನಾಂಕದಲ್ಲೇ ಚಿತ್ರ ರಿಲೀಸ್
Image
ಮಹೇಶ್ ಬಾಬು ಕುಟುಂಬದಲ್ಲಿ ಕೊವಿಡ್; ಅಭಿಮಾನಿಗಳಲ್ಲಿ ಹೆಚ್ಚಿತು ಆತಂಕ
Image
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
Image
25ನೇ ವಯಸ್ಸಿಗೆ ಕಾಲಿಟ್ಟ ಸುಹಾನ; ಶಾರುಖ್ ಮಗಳ ಬಳಿ ಇದೆ ದುಬಾರಿ ವಸ್ತುಗಳು

ಇದನ್ನೂ ಓದಿ: ಪುತ್ರ ಆರ್ಯನ್ ಖಾನ್​ಗೆ ಕೆಲಸ ಕೊಡಿಸಲು ದೊಡ್ಡ ಕಂಪನಿ ಮುಖ್ಯಸ್ಥರ ಜತೆ ಮಾತಾಡಿದ್ದ ಶಾರುಖ್

‘ಆರ್ಯನ್ ಖಾನ್ ಅವರನ್ನು ಜೈಲಿನಲ್ಲಿ ಹಿಂಸಿಸಲು ಪ್ರಯತ್ನ ನಡೆದಿದೆ. ಇದು ಕೇವಲ ಹಣ ಸುಲಿಗೆ ಮಾಡಲು’ ಎಂದು ರಾವತ್ ತಮ್ಮ ಪುಸ್ತಕದಲ್ಲಿ ಆರೋಪಿಸಿದ್ದಾರೆ. ಆ ಸಮಯದಲ್ಲಿ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಕೂಡ ಜೈಲಿನಲ್ಲಿದ್ದರು. ಅವರನ್ನು ಉದ್ದೇಶಪೂರ್ವಕವಾಗಿ ಸಾಮಾನ್ಯ ಸೆಲ್​ನಲ್ಲಿ ಇರಿಸಲಾಗಿತ್ತಂತೆ. ಹೀಗಾಗಿ ಅವರು ಒಂದು ನೂರಾರು ಕೈದಿಗಳೊಂದಿಗೆ ಕಳೆಯಬೇಕಾಯಿತು. ಇದರಿಂದ ಅವರಿಗೆ ಸಾಕಷ್ಟು ತೊಂದರೆ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:01 pm, Fri, 23 May 25

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ