ಸಾರಾ ತೆಂಡೂಲ್ಕರ್ ಜೊತೆ ಶುಭ್ಮನ್ ಗಿಲ್ ಡೇಟಿಂಗ್ ಖಚಿತಪಡಿಸಿದ ಖ್ಯಾತ ನಟಿ
ಸಾರಾ ಅಲಿ ಖಾನ್ ಅವರು ಶುಭ್ಮನ್ ಗಿಲ್ ಜೊತೆ ಕಾಣಿಸಿಕೊಂಡಿದ್ದು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಸಾರಾ ತೆಂಡೂಲ್ಕರ್ನ ಬಿಟ್ಟು ಸಾರಾ ಅಲಿ ಖಾನ್ ಜೊತೆ ಶುಭ್ಮನ್ ಡೇಟಿಂಗ್ ಶುರು ಮಾಡಿಕೊಂಡರು ಎನ್ನುವ ಮಾತು ಕೇಳಿ ಬಂತು. ಈ ಬಗ್ಗೆ ಸಾರಾ ಉತ್ತರಿಸಿದ್ದಾರೆ.

ಟೀಂ ಇಂಡಿಯಾ ಆಟಗಾರ ಶುಭ್ಮನ್ ಗಿಲ್ (Shubman Gill) ಅವರು ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರು ಸಾರಾ ತೆಂಡೂಲ್ಕರ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ವಿಚಾರ ಈ ಮೊದಲಿನಿಂದಲೂ ಚರ್ಚೆ ಆಗುತ್ತಿದೆ. ಹೀಗಿರುವಾಗಲೇ ಅವರು ಸಾರಾ ಅಲಿ ಖಾನ್ ಜೊತೆ ಕಾಣಿಸಿಕೊಂಡರು. ಈ ಫೋಟೋ ವೈರಲ್ ಆಯಿತು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈ ಎಲ್ಲಾ ವಿಚಾರಗಳ ಬಗ್ಗೆ ಸಾರಾ ಅಲಿ ಖಾನ್ ಅವರು ‘ಕಾಫಿ ವಿತ್ ಕರಣ ಸೀಸನ್ 8’ರ ಮೂರನೇ ಎಪಿಸೋಡ್ನಲ್ಲಿ ಮಾತನಾಡಿದ್ದಾರೆ. ಇದರ ಪ್ರೋಮೋ ಗಮನ ಸೆಳೆಯುತ್ತಿದೆ.
ಸಾರಾ ಅಲಿ ಖಾನ್ ಹಾಗೂ ಅನನ್ಯಾ ಪಾಂಡೆ ಅವರು ಬಿಗ್ ಬಾಸ್ಗೆ ಆಗಮಿಸಿದ್ದಾರೆ. ಈ ವೇಳೆ ಅವರಿಗೆ ಹಲವು ಪ್ರಶ್ನೆಗಳು ಎದುರಾಗಿವೆ. ಸಾರಾ ಅಲಿ ಖಾನ್ ಅವರು ಶುಭ್ಮನ್ ಗಿಲ್ ಜೊತೆ ಕಾಣಿಸಿಕೊಂಡಿದ್ದು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಸಾರಾ ತೆಂಡೂಲ್ಕರ್ನ ಬಿಟ್ಟು ಸಾರಾ ಅಲಿ ಖಾನ್ ಜೊತೆ ಶುಭ್ಮನ್ ಡೇಟಿಂಗ್ ಶುರು ಮಾಡಿಕೊಂಡರು ಎನ್ನುವ ಮಾತು ಕೇಳಿ ಬಂತು. ಈ ಬಗ್ಗೆ ಸಾರಾ ಉತ್ತರಿಸಿದ್ದಾರೆ.
‘ನೀವು ಶುಭ್ಮನ್ ಜೊತೆ ಡೇಟಿಂಗ್ ಮಾಡುತ್ತಿದ್ದೀರಿ ಎನ್ನುವ ಮಾತಿದೆ’ ಎಂದು ಸಾರಾ ಅಲಿ ಖಾನ್ಗೆ ಕೇಳಲಾಯಿತು. ‘ನೀವು ತಪ್ಪಾದ ಸಾರಾಗೆ ಈ ಪ್ರಶ್ನೆ ಕೇಳುತ್ತಿದ್ದೀರಿ’ ಎಂದಿದ್ದಾರೆ ಅವರು. ಈ ಮೂಲಕ ಸಾರಾ ತೆಂಡೂಲ್ಕರ್ಗೆ ಈ ಬಗ್ಗೆ ಕೇಳಬೇಕಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
View this post on Instagram
ಇದನ್ನೂ ಓದಿ: Sara Ali Khan: ಕಾನ್ನಲ್ಲಿ ಸಾರಾ ಅಲಿ ಖಾನ್ ಧರಿಸಿರುವ ಉಡುಪಿನ ವಿಶೇಷತೆ ಗೊತ್ತೆ?
ಶುಭ್ಮನ್ ಗಿಲ್ ಹಾಗೂ ಸಾರಾ ತೆಂಡೂಲ್ಕರ್ ಒಂದೇ ಕಡೆಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಕ್ಕೆ ಸುದ್ದಿ ಆಗಿದ್ದರು. ಇತ್ತೀಚೆಗೆ ಇಬ್ಬರೂ ಒಂದೇ ಪಾರ್ಟಿಗೆ ತೆರಳಿದ್ದರು. ಪಾರ್ಟಿಗೆ ಹೋಗುವಾಗ ಇಬ್ಬರೂ ಬೇರೆ ಬೇರೆಯಾಗಿಯೇ ಹೋಗಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.
ಸಾರಾ ಅಲಿ ಖಾನ್ ಅವರು ಈ ಮೊದಲು ಕಾರ್ತಿಕ್ ಆರ್ಯನ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಬ್ರೇಕಪ್ನಲ್ಲಿ ಇವರ ಸಂಬಂಧ ಕೊನೆ ಆಯಿತು. ಸದ್ಯ ಸಾರಾ ಅವರು ಯಾರ ಜೊತೆ ಡೇಟ್ ಮಾಡುತ್ತಿದ್ದಾರೆ ಎಂಬುದು ರಿವೀಲ್ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:46 am, Tue, 7 November 23




