AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಧಿ ಸುಬ್ಬಯ್ಯ ಜತೆ ಆ್ಯಕ್ಟ್​ ಮಾಡ್ಬೇಕು ಅಂದ್ಕೊಂಡಿದ್ರಂತೆ ಬ್ರೋ ಗೌಡ!

ನಿಧಿ ಸಿನಿಮಾಗಳನ್ನು ನೋಡಿ ಅವರ ಮೇಲೆ ಕ್ರಶ್​ ಆಗಿತ್ತು ಎಂದು ಬ್ರೋ ಗೌಡ ಈ ಮೊದಲು ಹೇಳಿದ್ದರು. ಈಗ ಅವರು ಮತ್ತೊಂದು ಅಚ್ಚರಿಯ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

ನಿಧಿ ಸುಬ್ಬಯ್ಯ ಜತೆ ಆ್ಯಕ್ಟ್​ ಮಾಡ್ಬೇಕು ಅಂದ್ಕೊಂಡಿದ್ರಂತೆ ಬ್ರೋ ಗೌಡ!
ನಿಧಿ-ಶಮಂತ್​
ರಾಜೇಶ್ ದುಗ್ಗುಮನೆ
| Edited By: |

Updated on: Apr 20, 2021 | 7:29 AM

Share

ಬಿಗ್​ ಬಾಸ್​ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು 50 ದಿನ ಪೂರ್ಣಗೊಳಿಸಿದ್ದಾರೆ. ಇಷ್ಟು ದಿನಗಳ ಜರ್ನಿಯಲ್ಲಿ ಅನೇಕರು ಸಾಕಷ್ಟು ನೆನಪುಗಳನ್ನು ಹೊತ್ತು ಮುನ್ನಡೆಯುತ್ತಿದ್ದಾರೆ. 50ನೇ ದಿನಕ್ಕೆ ಕಾಲಿಟ್ಟಿದ್ದರಿಂದ ಬಿಗ್​ ಬಾಸ್ ಮನೆಯಲ್ಲಿ ಹೊಸ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​​ನಲ್ಲಿ ನಿಧಿ ಬಗ್ಗೆ ತಾವು ಕಂಡ ಕನಸಿನ ಕುರಿತು ಶಮಂತ್​ ಬ್ರೋ ಗೌಡ ಅಚ್ಚರಿಯ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ನಿಧಿ ಸಿನಿಮಾಗಳನ್ನು ನೋಡಿ ಅವರ ಮೇಲೆ ಕ್ರಶ್​ ಆಗಿತ್ತು ಎಂದು ಬ್ರೋ ಗೌಡ ಈ ಮೊದಲು ಹೇಳಿದ್ದರು. ಈಗ ಅವರು ಮತ್ತೊಂದು ಅಚ್ಚರಿಯ ವಿಚಾರದ ಬಗ್ಗೆ ಹೇಳಿದ್ದಾರೆ. ನಿಧಿ ಸುಬ್ಬಯ್ಯ ನಟನೆಯ ಪಂಚರಂಗಿ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಈ ಸಿನಿಮಾದಲ್ಲಿ ನಿಧಿ ಮಾಡಿದ್ದ ಪಾತ್ರ ಅನೇಕರಿಗೆ ಇಷ್ಟವಾಗಿತ್ತು. ಈ ಪಾತ್ರ ನೋಡಿ ಶಮಂತ್​ ಕೂಡ ಇಷ್ಟಪಟ್ಟಿದ್ದರು.

ಈ ಬಗ್ಗೆ ಅವರು ಬಿಗ್​ ಬಾಸ್​ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಮೊದಲ ಬಾರಿಗೆ ಪಂಚರಂಗಿ ಸಿನಿಮಾ ಬಂದಾಗ ನಿಧಿ ಅವರು ಇಷ್ಟ ಆಗಿದ್ದರು. ನಾನು ಹೀರೋ ಆದರೆ ಅವರ ಜತೆ ನಟಿಸಬೇಕು ಎಂದು ಕನಸು ಕಂಡಿದ್ದೆ. ನಾವು ಬಿಗ್​ ಬಾಸ್​ ಮನೆಯಲ್ಲಿ ಒಟ್ಟಿಗೆ ಸೇರಿದೆವು. ಜೋಡಿ ಟಾಸ್ಕ್​ ಬಂದಾಗ ಒಬ್ಬರು ಮತ್ತೊಬ್ಬರು ಆಯ್ಕೆ ಮಾಡಿಕೊಳ್ಳಬೇಕಿತ್ತು. ನಾನು ನಿಧಿ ಹೆಸರನ್ನು ಆಯ್ಕೆ ಮಾಡಿಕೊಳ್ಳಬೇಕು ಅಂದು ಕೊಂಡಿರಲಿಲ್ಲ. ಅವರು ಕೂಡ ನನ್ನನ್ನು ಆಯ್ಕೆ ಮಾಡಬೇಕು ಎನ್ನುವ ಆಲೋಚನೆ ಇರಲಿಲ್ಲ. ಆದರೆ, ನಾವಿಬ್ಬರೂ ಜೋಡಿಯಾದೆವು. ಅವರ ಜತೆ ಟಾಸ್ಕ್​ ಆಡಿದ್ದು, ಡಾನ್ಸ್​ ಕಲಿತಿದ್ದನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವೈಷ್ಣವಿ ಮಾಡಿದ ತಪ್ಪಿಗೆ ತಪ್ಪಲಿಲ್ಲ ಕಠಿಣ ಶಿಕ್ಷೆ; ಮನೆಯವರಿಗೆ ಸುಸ್ತೋ ಸುಸ್ತು

ವೈಷ್ಣವಿಗೆ ತುರ್ತಾಗಿ ಗಂಡ ಬೇಕಂತೆ! ಬಿಗ್​ ಬಾಸ್​ ಮನೆಯಲ್ಲಿ ಸನ್ನಿಧಿಯ ಹೊಸ ಬೇಡಿಕೆ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More