ಶಿಲ್ಪಾ ಹಾಗೂ ನಮ್ರತಾ ಮಧ್ಯೆ ವೈರತ್ವ ಇದೆಯೇ? ಸಿಕ್ಕಿತು ಉತ್ತರ
ನಮ್ರತಾ ಹಾಗೂ ಶಿಲ್ಪಾ ಇಬ್ಬರೂ ಚಿತ್ರರಂಗದಲ್ಲಿ ಇದ್ದವರು. ನಮ್ರತಾ ಮದುವೆ ಬಳಿಕ ಅಷ್ಟಾಗಿ ಚಿತ್ರರಂಗದಲ್ಲಿ ಮಿಂಚಲೇ ಇಲ್ಲ. ಶಿಲ್ಪಾ ಅವರು ಬಣ್ಣದ ಲೋಕದಲ್ಲಿ ಈ ಮೊದಲು ಸಾಕಷ್ಟು ಬೇಡಿಕೆ ಹೊಂದಿದ್ದರು. ಶಾರುಖ್ ಖಾನ್ ರೀತಿಯ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದರು. ಅವರು ಈಗ ದೊಡ್ಮನೆಯ ಆಟವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
‘ಬಿಗ್ ಬಾಸ್ ಹಿಂದಿ ಸೀಸನ್ 18’ರ ಸ್ಪರ್ಧಿ ಆಗಿ ಮಹೇಶ್ ಬಾಬು ಅವರ ಅತ್ತಿಗೆ ಅಂದರೆ ನಮ್ರತಾ ಶಿರೋಡ್ಕರ್ ಅವರ ಸಹೋದರಿ ಶಿಲ್ಪಾ ಶಿರೋಡ್ಕರ್ ಅವರು ಎಂಟ್ರಿ ಕೊಟ್ಟಿದ್ದಾರೆ. ಅವರು ದೊಡ್ಮನೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಮಹೇಶ್ ಬಾಬು ಸಂಬಂಧಿಗಳು ಎನ್ನುವ ಕಾರಣಕ್ಕೆ ದಕ್ಷಿಣ ಭಾರತದಲ್ಲಿ ಅವರಿಗೆ ಜನಪ್ರಿಯತೆ ಸಿಕ್ಕಿದೆ. ಶಿಲ್ಪಾ ಹಾಗೂ ನಮ್ರತಾ ಮಧ್ಯೆ ವೈರತ್ವ ಇದೆಯೇ? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ನಮ್ರತಾ ಹಾಗೂ ಶಿಲ್ಪಾ ಇಬ್ಬರೂ ಚಿತ್ರರಂಗದಲ್ಲಿ ಇದ್ದವರು. ನಮ್ರತಾ ಮದುವೆ ಬಳಿಕ ಅಷ್ಟಾಗಿ ಚಿತ್ರರಂಗದಲ್ಲಿ ಮಿಂಚಲೇ ಇಲ್ಲ. ಶಿಲ್ಪಾ ಅವರು ಬಣ್ಣದ ಲೋಕದಲ್ಲಿ ಈ ಮೊದಲು ಸಾಕಷ್ಟು ಬೇಡಿಕೆ ಹೊಂದಿದ್ದರು. ಶಾರುಖ್ ಖಾನ್ ರೀತಿಯ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದರು. ಅವರು ಈಗ ದೊಡ್ಮನೆಯ ಆಟವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರು ಸಂತೋಷದಿಂದ ಮಾತನಾಡಿದ್ದಾರೆ.
ಈ ಮೊದಲು ನಮ್ರತಾ ಅವರು ಶಿಲ್ಪಾ ಬಗ್ಗೆ ಮಾತನಾಡಿದ್ದರು. ತಮ್ಮ ಮಧ್ಯೆ ವೈರತ್ವ ಇದೆಯೇ ಎಂಬುದಕ್ಕೆ ಉತ್ತರ ನೀಡಿದ್ದರು. ‘ನಾನು ನನ್ನ ಸಹೋದರಿಯ ಟ್ಯಾಲೆಂಟ್ಗೆ ಮ್ಯಾಚ್ ಮಾಡಲು ಸಾಧ್ಯ ಇದೆಯೋ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ ನಾನು ನನ್ನ ಕೈಲಾದಷ್ಟು ಮಾಡುತ್ತೇನೆ. ಅವಳ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕರೆ ಮಾಡುತ್ತೇನೆ. ನಮ್ಮಿಬ್ಬರ ಮಧ್ಯೆ ಯಾವುದೇ ವೈರತ್ವ ಇಲ್ಲ. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್’ ಎಂದಿದ್ದರು ನಮ್ರತಾ.
ನಮ್ರತಾ ಅಕ್ಕ ಹಾಗೂ ಶಿಲ್ಪಾ ತಂಗಿ. ಆದರೆ, ಎಲ್ಲ ವಿಚಾರದಲ್ಲಿ ಮುಂದೆ ಇದ್ದಿದ್ದು ಶಿಲ್ಪಾ. ‘ನಾನು ನಮ್ರತಾಗಿಂತ ಮೊದಲೇ ಎಲ್ಲವನ್ನೂ ಮಾಡಿದ್ದೆ. ನಾನು ಅವಳಿಗಿಂತ ಮೊದಲು ಸಿನಿಮಾ ರಂಗಕ್ಕೆ ಬಂದೆ. ಅವಳಿಗಿಂದ ಮೊದಲು ಮದುವೆ ಆದೆ. ಅವಳಿಗಿಂತ ಮೊದಲು ನಾನು ತಾಯಿ ಆದೆ’ ಎಂದು ಈ ಮೊದಲು ಶಿಲ್ಪಾ ಹೇಳಿಕೊಂಡಿದ್ದರು. ‘ನಾನು ನಮ್ಮ ಕುಟುಂಬವನ್ನು ಕಳೆದುಕೊಂಡ ಬಳಿಕ ನಮ್ಮಿಬ್ಬರ ಮಧ್ಯೆ ಆಪ್ತತೆ ಬೆಳೆಯಿತು. ನನ್ನ ಭಾವ ಮಹೇಶ್ ಬಾಬು ಚಿತ್ರವನ್ನು ನೋಡುತ್ತೇನೆ’ ಎಂದು ಶಿಲ್ಪಾ ಈ ಮೊದಲು ಹೇಳಿದ್ದರು.
ಇದನ್ನೂ ಓದಿ: ಹಿಂದಿ ಬಿಗ್ ಬಾಸ್ಗೆ ಎಂಟ್ರಿ ಕೊಟ್ಟ ಮಹೇಶ್ ಬಾಬು ಸಂಬಂಧಿ
ಮಹೇಶ್ ಬಾಬು ಅವರು ರಾಜಮೌಳಿ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಸೆಟ್ಟೇರಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಇದು ಮಹೇಶ್ ಬಾಬು ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.