AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಬ್ಬ ನಟಿಯಿಂದಲೂ ಶೈನ್ ಟಾಮ್ ಚಾಕೊ ವಿರುದ್ಧ ಆರೋಪ

Shine Tom Chacko: ಮಲಯಾಳಂ ಚಿತ್ರರಂಗದ ಜನಪ್ರಿಯ ಶೈನ್ ಟಾಮ್ ಚಾಕೊ ವಿರುದ್ಧ ಇತ್ತೀಚೆಗಷ್ಟೆ ನಟಿಯೊಬ್ಬರು ಆರೋಪ ಮಾಡಿ ದೂರು ನೀಡಿದ್ದರು. ಡ್ರಗ್ಸ್ ಪ್ರಕರಣದಲ್ಲಿ ನಟನ ಬಂಧನವೂ ಆಗಿತ್ತು. ಅದರ ಬಳಿಕ ಶೈನ್ ಟಾಮ್ ಚಾಕೊ ಕ್ಷಮೆ ಸಹ ಕೇಳಿದರು. ಇದೀಗ ಮತ್ತೊಬ್ಬ ನಟಿ ಶೈನ್ ವಿರುದ್ಧ ಆರೋಪ ಮಾಡಿದ್ದಾರೆ.

ಮತ್ತೊಬ್ಬ ನಟಿಯಿಂದಲೂ ಶೈನ್ ಟಾಮ್ ಚಾಕೊ ವಿರುದ್ಧ ಆರೋಪ
Aparna John
ಮಂಜುನಾಥ ಸಿ.
|

Updated on: Apr 25, 2025 | 12:27 PM

Share

ಮಲಯಾಳಂನ (Malayalam) ಜನಪ್ರಿಯ ನಟ ಶೈನ್ ಟಾಮ್ ಚಾಕೊ (Shine Tom Chacko) ವಿರುದ್ಧ ಇತ್ತೀಚೆಗಷ್ಟೆ ನಟಿಯೊಬ್ಬರು ಕಲಾವಿದರ ಸಂಘಕ್ಕೆ ದೂರು ನೀಡಿದ್ದರು. ಅದರ ಬೆನ್ನಲ್ಲೆ ನಟನನ್ನು ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಜಾಮೀನು ಪಡೆದ ಬಳಿಕ ಮಲಯಾಳಂ ಸಿನಿಮಾ ಸಂಘದ ಸಭೆಯಲ್ಲಿ ಶೈನ್ ಟಾಮ್ ಚಾಕೊ ಬಹಿರಂಗ ಕ್ಷಮೆ ಕೇಳಿದ್ದಾರೆ. ಕೊನೆಯ ಅವಕಾಶ ನೀಡಿ, ಮುಂದಿನ ದಿನಗಳಲ್ಲಿ ವರ್ತನೆ ತಿದ್ದಿಕೊಳ್ಳುತ್ತೇನೆ ಎಂದಿದ್ದಾರೆ. ಅದಾದ ಮರು ದಿನವೇ ಮತ್ತೊಬ್ಬ ನಟಿ ಶೈನ್ ಟಾಮ್ ಚಾಕೊ ವಿರುದ್ಧ ದುರ್ವರ್ತನೆಯ ಆರೋಪ ಮಾಡಿದ್ದಾರೆ.

ನಟಿ ಅಪರ್ಣಾ ಜಾನ್ ಇದೀಗ ಶೈನ್ ಟಾಮ್ ಚಾಕೊ ಮೇಲೆ ಆರೋಪ ಮಾಡಿದ್ದಾರೆ. ಇತ್ತೀಚೆಗೆ ನಟನ ವಿರುದ್ಧ ದೂರು ನೀಡಿರುವ ನಟಿ ವಿನ್ಸಿ ಅಲೋಷಿಯಸ್ ಅವರು ಹೇಳಿರುವ ಮಾತುಗಳನ್ನು ಅನುಮೋದಿಸಿರುವ ನಟಿ ಅಪರ್ಣಾ ಜಾನ್, ಟಾಮ್ ಚಾಕೊ ಮಾತುಗಳು ‘ಬಾಯಿ ಭೇದಿ’ಯ ಹಾಗಿರುತ್ತವೆ ಎಂದು ಕಟು ನಿಂದನೆ ಮಾಡಿದ್ದಾರೆ.

‘ಸೆಟ್​ನಲ್ಲಿ ಶೈನ್ ಟಾಮ್ ಚಾಕೊ ಅವರ ಎನರ್ಜಿ ಅಸಾಧ್ಯವಾದುದು, ಅವರು ಬಹಳ ಒಳ್ಳೆಯ ನಟ. ಅತ್ತಿಂದಿತ್ತ ಓಡಾಡುತ್ತಲೇ ಇರುತ್ತಾರೆ ಎಲ್ಲರನ್ನೂ ಮಾತನಾಡಿಸುತ್ತಾ ಇರುತ್ತಾರೆ. ಅವರು ಆಡುವ ಬಹುತೇಕ ಮಾತುಗಳಿಗೆ ಅರ್ಥವೇ ಇರುವುದಿಲ್ಲ. ಅದರಲ್ಲೂ ನಟಿಯರ ಬಳಿಯಂತೂ ಸಂಯಮ ಇಲ್ಲದೆ ಮಾತನಾಡುತ್ತಾರೆ. ನಟಿಯರ ಜೊತೆಗೆ ಅವರು ಆಡುವ ಮಾತುಗಳು ಬಹುತೇಕ ಲೈಂಗಿಕತೆಗೆ, ಮಹಿಳೆಯರ ದೇಹಕ್ಕೆ ಸಂಬಂಧಿಸುದುವೇ ಆಗಿರುತ್ತವೆ. ನಟಿ ವಿನ್ಸಿ ಅಲೋಷಿಯಸ್ ಗೆ ಆಗಿರುವ ಕೆಟ್ಟ ಅನುಭವ ನನಗೂ ಆಗಿದೆ’ ಎಂದಿದ್ದಾರೆ ನಟಿ.

ಇದನ್ನೂ ಓದಿ:ಮಲಯಾಳಂ ನಟ ಶೈಮ್ ಟಾಮ್ ಚಾಕೊಗೆ ಕೊನೆ ಎಚ್ಚರಿಕೆ

ಆ ಸಮಯದಲ್ಲಿ ನಾನು ಕಲಾವಿದರ ಸಂಘಕ್ಕೆ ದೂರು ನೀಡಿದ್ದೆ. ಅವರು ನನ್ನ ದೂರಿಗೆ ಬಲು ಬೇಗ ಸ್ಪಂದಿಸಿದರು. ಸಿನಿಮಾದವರು ನನ್ನ ಭಾಗದ ಚಿತ್ರೀಕರಣವನ್ನು ಬಲು ಬೇಗನೆ ಮುಗಿಸಿದರು. ಅಲ್ಲದೆ ಶೈನ್ ಟಾಮ್ ಚಾಕೊ ಇಂದ ನನ್ನನ್ನು ದೂರ ಇಟ್ಟರು. ಸೆಟ್​ನಲ್ಲಿ ನಾನು ಸುರಕ್ಷಿತ ಭಾವ ಅನುಭವಿಸುವಂತೆ ಮಾಡಿದರು’ ಎಂದಿದ್ದಾರೆ ಅಪರ್ಣಾ ಜಾನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ