Captain Miller: ಬಂದೂಕು ಹಿಡಿದು ಧನುಶ್ ಜೊತೆ ರಣರಂಗದಲ್ಲಿ ನಿಂತ ಶಿವರಾಜ್ ಕುಮಾರ್

Captain Miller: ತಮಿಳಿನ ಧನುಶ್ ಹಾಗೂ ಶಿವರಾಜ್ ಕುಮಾರ್ ಒಟ್ಟಿಗೆ ನಟಿಸಿರುವ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. ಯುದ್ಧಕ್ಕೆ ಸಿದ್ಧವಾಗಿದ್ದಾರೆ ಶಿವಣ್ಣ.

Captain Miller: ಬಂದೂಕು ಹಿಡಿದು ಧನುಶ್ ಜೊತೆ ರಣರಂಗದಲ್ಲಿ ನಿಂತ ಶಿವರಾಜ್ ಕುಮಾರ್
ಕ್ಯಾಪ್ಟನ್ ಮಿಲ್ಲರ್
Follow us
ಮಂಜುನಾಥ ಸಿ.
|

Updated on: Jul 25, 2023 | 9:28 PM

ಕೆಲ ದಿನಗಳ ಹಿಂದಷ್ಟೆ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ (Birthday) ಆಚರಿಸಿಕೊಂಡ ಶಿವರಾಜ್ ಕುಮಾರ್ (Shiva Rajkumar), ತಾವು ಸುಮಾರು 10-12 ಸಿನಿಮಾಗಳನ್ನು ಒಪ್ಪಿಕೊಂಡಿರುವುದಾಗಿ ಹೇಳಿದ್ದರು. ಕನ್ನಡದ ಅತ್ಯಂತ ಬ್ಯುಸಿ ಸ್ಟಾರ್ ನಟರೆಂದರೆ ಅದು ಶಿವರಾಜ್ ಕುಮಾರ್ ಮಾತ್ರ. ಶಿವರಾಜ್ ಕುಮಾರ್, ಕನ್ನಡದಲ್ಲಿ ಮಾತ್ರವೇ ಅಲ್ಲದೆ ಆಗಾಗ್ಗೆ ನೆರೆ ಹೊರೆಯ ರಾಜ್ಯಗಳ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಇದೀಗ ರಜನೀಕಾಂತ್ (Rajinikanth)​ ಜೊತೆಗೆ ತಮಿಳು ಸಿನಿಮಾ ಒಂದರಲ್ಲಿ ನಟಿಸಿರುವ ಶಿವರಾಜ್ ಕುಮಾರ್, ರಜನೀಕಾಂತ್​ರ ಅಳಿಯ ಧನುಶ್​ರ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಇದೀಗ ಧನುಶ್ ಜೊತೆ ಶಿವಣ್ಣ ನಟಿಸಿರುವ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ.

ಧನುಶ್ ಜೊತೆಗೆ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದಾರೆ. ಈ ಸಿನಿಮಾದ ಪೋಸ್ಟರ್ ಇದೀಗ ಬಿಡುಗಡೆ ಆಗಿದೆ. ಪೋಸ್ಟರ್ ನೋಡಿದರೆ ಈ ಸಿನಿಮಾದಲ್ಲಿ ಶಿವಣ್ಣನದ್ದು ಕೇವಲ ಅತಿಥಿ ಪಾತ್ರವಲ್ಲ ಬದಲಿಗೆ ಪ್ರಧಾನ ಪಾತ್ರ ಎಂಬುದು ಖಾತ್ರಿ ಆಗುತ್ತಿದೆ. ಸಿನಿಮಾದಲ್ಲಿ ನಾಯಕ ಧನುಶ್ ಹಾಗೂ ಶಿವರಾಜ್ ಕುಮಾರ್ ಇಬ್ಬರೂ ಬಂದೂಕುಗಳನ್ನು ಹಿಡಿದು ಪರಸ್ಪರ ಬೆನ್ನು ಮಾಡಿ ರಣರಂಗದಲ್ಲಿ ನಿಂತಿರುವ ಚಿತ್ರವಿದೆ. ಧನುಶ್ ಹಾಗೂ ಶಿವಣ್ಣ ಎದುರಾಳಿಗಳನ್ನು ಎದುರುಗೊಳ್ಳಲು ಸಜ್ಜಾಗಿ ನಿಂತಿರುವಂತಿದೆ ಆ ಪೋಸ್ಟರ್. ಪೋಸ್ಟರ್​ನಲ್ಲಿ ರೆಸ್ಪೆಕ್ಟ್ ಈಸ್ ಫ್ರೀಡಂ (ಗೌರವವೇ ಸ್ವಾತಂತ್ರ್ಯ) ಎಂದು ಬರೆದಿದೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟ ಶಿವರಾಜ್ ಕುಮಾರ್, ”ಧನುಶ್​ ಬಗ್ಗೆ ನನಗೆ ವಿಶೇಷ ಪ್ರೀತಿ, ಗೌರವ ಇದೆ. ಅವರ ಎಲ್ಲ ಸಿನಿಮಾಗಳನ್ನು ನೋಡಿದ್ದೇನೆ. ಧನುಶ್ ಹಾಗೂ ನಾನು ಒಂದೇ ರೀತಿ ಎನಿಸುತ್ತದೆ ನನಗೆ. ಅವರು ತರ್ಲೆ, ಗೆಳೆಯರೊಟ್ಟಿಗೆ ವರ್ತಿಸುವ ರೀತಿ, ನನಗೆ ನನ್ನದೇ ನೆನಪು ತರುತ್ತದೆ. ಧನುಶ್ ಅದ್ಭುತವಾದ ನಟ ಸಹ. ಅವರೊಟ್ಟಿಗೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಾಗ ಇಲ್ಲ ಎನ್ನಲಾಗಲಿಲ್ಲ” ಎಂದಿದ್ದರು ಶಿವರಾಜ್ ಕುಮಾರ್.

ಇದನ್ನೂ ಓದಿ:Rajinikanth: ಆ ಸಿನಿಮಾ ಬಳಿಕ ರಜನೀಕಾಂತ್ ನಟನೆಯಿಂದ ನಿವೃತ್ತಿ?

ಕ್ಯಾಪ್ಟನ್ ಮಿಲ್ಲರ್ ಸಿನಿಮಾವನ್ನು ಅರುಣ್ ಮಟೇಶ್ವರನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ನಿವೇದಿತಾ ಸತೀಶ್ ಹಾಗೂ ಪ್ರಿಯಾಂಕಾ ಮೋಹನ್ ನಾಯಕಿಯರಾಗಿ ನಟಿಸಿದ್ದಾರೆ. ಇದೇ ಸಿನಿಮಾದಲ್ಲಿ ಜಾನ್ ಕೊಕ್ಕೆನ್, ಎಡ್ವರ್ಡ್, ಸಂದೀಪ್ ಕಿಶನ್ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾವನ್ನು ಸತ್ಯ ಜ್ಯೋತಿ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡಿದ್ದು, ಸಂಗೀತ ನೀಡಿರುವುದು ಜಿವಿ ಪ್ರಕಾಶ್. ಸಿನಿಮಾದ ಬಿಡುಗಡೆ ದಿನಾಂಕ ಇನ್ನಷ್ಟೆ ಘೋಷಣೆ ಆಗಬೇಕಿದೆ.

‘ಕ್ಯಾಪ್ಟನ್ ಮಿಲ್ಲರ್’ ಮಾತ್ರವೇ ಅಲ್ಲದೆ ಶಿವರಾಜ್ ಕುಮಾರ್ ಅವರು ತಮಿಳಿನ ‘ಜೈಲರ್’ ಸಿನಿಮಾದಲ್ಲಿಯೂ ನಟಿಸಿದ್ದಾರೆ. ರಜನೀಕಾಂತ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಮಾತ್ರವೇ ಅಲ್ಲದೆ, ಮಲಯಾಳಂ ಸ್ಟಾರ್ ಮೋಹನ್​ಲಾಲ್, ತೆಲುಗಿನ ಸುನಿಲ್, ಹಿಂದಿಯ ಜಾಕಿ ಶ್ರಾಫ್ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾದಲ್ಲಿ ತಮನ್ನಾ ಭಾಟಿಯಾ ನಾಯಕಿಯಾಗಿದ್ದು ಸಿನಿಮಾದ ಒಂದು ಹಾಡಂತೂ ಭಾರಿ ವೈರಲ್ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?