ತಮಿಳುನಾಡಿನ ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ ರಜನಿ-ಶಿವಣ್ಣನ ಸಿನಿಮಾ?
ತಮಿಳಿನಾಡಿನಾದ್ಯಂತ ಇರುವ ಎಲ್ಲಾ ಚಿತ್ರಮಂದಿರಗಳಲ್ಲಿ ‘ಜೈಲರ್’ ಚಿತ್ರ ಪ್ರದರ್ಶನ ಮಾಡುವಂತೆ ಪ್ರದರ್ಶಕರ ಸಂಘದವರು ಕೋರಿದ್ದಾರೆ. ಒಂದೊಮ್ಮೆ ಈ ಕೋರಿಕೆಯನ್ನು ಚಿತ್ರಮಂದಿರದವರು ಒಪ್ಪಿದರೆ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಲಿದೆ.

ರಜನಿಕಾಂತ್, ಶಿವರಾಜ್ಕುಮಾರ್ (Shivarajkumar) ನಟನೆಯ ‘ಜೈಲರ್’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಆಗಸ್ಟ್ 10ರಂದು ಈ ಚಿತ್ರ ವಿಶ್ವಾದ್ಯಂತ ರಿಲೀಸ್ ಆಗಲಿದೆ. ವಿಶೇಷ ಎಂದರೆ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸುನಾಮಿ ಸೃಷ್ಟಿ ಮಾಡಲಿದೆ ಎನ್ನಲಾಗುತ್ತಿದೆ. ಚಲನಚಿತ್ರ ಪ್ರದರ್ಶಕರ ಸಂಘದವರು ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ತಮಿಳುನಾಡಿನಾದ್ಯಂತ ‘ಜೈಲರ್’ ಸಿನಿಮಾ (Jailer Movie) ಪ್ರದರ್ಶನ ಮಾಡುವಂತೆ ಕೋರಲಾಗಿದೆ.
ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ಅದರ ಎದುರು ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡಲು ಸಣ್ಣ ಬಜೆಟ್ನ ಸಿನಿಮಾಗಳು ಹಿಂದೇಟು ಹಾಕುತ್ತವೆ. ‘ಜೈಲರ್’ ಸಿನಿಮಾ ವಿಚಾರದಲ್ಲೂ ಹಾಗೆಯೇ ಆಗಿದೆ. ಈ ಕಾರಣಕ್ಕೆ ತಮಿಳಿನಾಡಿನಾದ್ಯಂತ ಇರುವ ಎಲ್ಲಾ ಚಿತ್ರಮಂದಿರಗಳಲ್ಲಿ ‘ಜೈಲರ್’ ಚಿತ್ರ ಪ್ರದರ್ಶನ ಮಾಡುವಂತೆ ಪ್ರದರ್ಶಕರ ಸಂಘದವರು ಕೋರಿದ್ದಾರೆ.
‘ಜೈಲರ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬೇಕು ಎಂದು ಕೋರಿದ್ದಾರೆ. ಇದರಿಂದ ನಮಗೆ ತುಂಬಾ ಸಂತೋಷವಾಗಿದೆ. ತಮಿಳುನಾಡಿನ ಎಲ್ಲಾ ಚಿತ್ರಮಂದಿರಗಳಲ್ಲಿ ಜೈಲರ್ ಚಿತ್ರವನ್ನು ಪ್ರದರ್ಶಿಸಲು ಅವರು ಉತ್ಸುಕರಾಗಿದ್ದಾರೆ. ರಾಜ್ಯದ ಎಲ್ಲಾ ಥಿಯೇಟರ್ಗಳಲ್ಲಿ ಜೈಲರ್ ಚಿತ್ರ ಪ್ರದರ್ಶಿಸುವಂತೆ ನಾವು ನಿಮ್ಮನ್ನು ವಿನಂತಿಸುತ್ತೇವೆ’ ಎಂದು ತಮಿಳುನಾಡು ಪ್ರದರ್ಶಕ ಸಂಘದ ಪ್ರಧಾನ ಕಾರ್ಯದರ್ಶಿ ರೋಹಿಣಿ ಸೆಲ್ವನ್ ಅವರು ಚಿತ್ರಮಂದಿರದವರ ಬಳಿ ಕೋರಿದ್ದಾರೆ.
ಇದನ್ನೂ ಓದಿ: ‘ಜೈಲರ್’ ಎದುರು ಪೈಪೋಟಿ ನೀಡಲಿರುವ ‘ತೋತಾಪುರಿ 2’; ಆಗಸ್ಟ್ 11ರಂದು ಅದ್ದೂರಿಯಾಗಿ ಬಿಡುಗಡೆ
ಒಂದೊಮ್ಮೆ ಈ ಕೋರಿಕೆಯನ್ನು ಚಿತ್ರಮಂದಿರದವರು ಒಪ್ಪಿದರೆ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಲಿದೆ. ಯಾವುದೇ ತಮಿಳು ಸಿನಿಮಾ ಮಾಡಿರದ ದಾಖಲೆಯನ್ನು ಈ ಚಿತ್ರ ಮಾಡಲಿದೆ. ಇದರಿಂದ ಐತಿಹಾಸಿಕ ದಾಖಲೆ ಸೃಷ್ಟಿ ಆಗಲಿದೆ.
Rohini Paneerselvam , General Secretary, TN Film Exhibitors Association , requests Superstar Rajinikanth to ensure that his #Jailer gets screened in all the screens across Tamil Nadu ? pic.twitter.com/DChqaXL4pu
— Rajasekar (@sekartweets) July 31, 2023
ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ಅವರು ‘ಜೈಲರ್’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ರಜನಿಕಾಂತ್ ಜೊತೆ ಶಿವಣ್ಣ, ಮೋಹನ್ಲಾಲ್, ಜಾಕಿ ಶ್ರಾಫ್, ರಮ್ಯಾ ಕೃಷ್ಣನ್ ಮತ್ತು ತಮನ್ನಾ ಭಾಟಿಯಾ ನಟಿಸಿದ್ದಾರೆ. ‘ನನ್ನ ಪಾತ್ರ ಕೇವಲ 10 ನಿಮಿಷ ಇರುತ್ತದೆ’ ಎಂದು ಶಿವರಾಜ್ಕುಮಾರ್ ಅವರು ಈ ಮೊದಲು ಹೇಳಿದ್ದರು. ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ