AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Miss Diva 2023: ‘ಮಿಸ್ ದಿವಾ ಯೂನಿವರ್ಸ್​ 2023’ ಕಿರೀಟ ಮುಡಿಗೇರಿಸಿಕೊಂಡ ಶ್ವೇತಾ; ಕರ್ನಾಟಕದ ತ್ರಿಶಾ ರನ್ನರ್ ಅಪ್

Shweta Sharda: ಕರ್ನಾಟಕದ ತ್ರಿಶಾ ಶೆಟ್ಟಿ ಅವರಿಗೂ ಶುಭ ಹಾರೈಸಲಾಗುತ್ತಿದೆ. ಅವರಿಗೆ ಇನ್​​ಸ್ಟಾಗ್ರಾಮ್​ನಲ್ಲಿ 41 ಸಾವಿರ ಹಿಂಬಾಲಕರಿದ್ದಾರೆ. ಬಾಲಿವುಡ್ ನಟಿ ಪೂಜಾ ಹೆಗ್ಡೆ ಕೂಡ ತ್ರಿಶಾ ಅವರನ್ನು ಹಿಂಬಾಲಿಸುತ್ತಿದ್ದಾರೆ.

Miss Diva 2023: ‘ಮಿಸ್ ದಿವಾ ಯೂನಿವರ್ಸ್​ 2023’ ಕಿರೀಟ ಮುಡಿಗೇರಿಸಿಕೊಂಡ ಶ್ವೇತಾ; ಕರ್ನಾಟಕದ ತ್ರಿಶಾ ರನ್ನರ್ ಅಪ್
ಶ್ವೇತಾ-ತ್ರಿಶಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Aug 28, 2023 | 1:12 PM

ಚಂಡೀಗಢ ಮೂಲದ ಶ್ವೇತಾ ಶಾರದಾ (Shwetha Sharda) ಅವರು ‘ಮಿಸ್ ದಿವಾ ಯೂನಿವರ್ಸ್​ 2023’ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಮುಂಬೈನಲ್ಲಿ ಆಗಸ್ಟ್ 27ರಂದು ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಶ್ವೇತಾ ಅವರು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. 2022ರ ಮಿಸ್ ದಿವಾ ಯೂನಿವರ್ಸ್ ಆಗಿದ್ದ ಮಂಗಳೂರು ಮೂಲದ ದಿವಿತಾ ರೈ ಅವರು  (Diwita Rai) ಶ್ವೇತಾಗೆ ‘ಮಿಸ್ ದಿವಾ ಯೂನಿವರ್ಸ್​’ ಕಿರೀಟ ತೊಡಿಸಿದರು. ಸೋನಲ್ ಕುಕ್ರೇಜಾ ಅವರು ‘ಮಿಸ್ ದಿವಾ ಸುಪ್ರಾನ್ಯಾಷನ್ 2023’ ಆಗಿ ಹೊರಹೊಮ್ಮಿದರು. ಕರ್ನಾಟಕದ ತ್ರಿಶಾ ಶೆಟ್ಟಿ ‘ಮಿಸ್ ದಿವಾ  ಯೂನಿವರ್ಸ್​ 2023’ ರನ್ನರ್ ಅಪ್ ಆದರು.

72ನೇ ‘ಮಿಸ್ ಯೂನಿವರ್ಸ್’ ಶೀಘ್ರದಲ್ಲೇ ನಡೆಯಲಿದ್ದು, ಶ್ವೇತಾ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಅವರು ಅವಾರ್ಡ್ ಗೆದ್ದು ಬರಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ನಿಖಿತಾ ಅವರು ಡಿಸೈನ್ ಮಾಡಿದ್ದ ಗೌನ್ ಧರಿಸಿ ಶ್ವೇತಾ ಫಿನಾಲೆಯಲ್ಲಿ ಮಿಂಚಿದರು. ದಿವಿತಾ ಅವರು ‘ಮಿಸ್ ದಿವಾ ಯೂನಿವರ್ಸ್​’ ಕಿರೀಟ ತೊಡಿಸುತ್ತಿದ್ದಂತೆ ಶ್ವೇತಾ ಅವರು ಖುಷಿಯಿಂದ ಕಣ್ಣೀರು ಹಾಕಿದರು. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಬರುತ್ತಿದೆ. ಎಲ್ಲರೂ ಶ್ವೇತಾ ಅವರನ್ನು ಅಭಿನಂದಿಸುತ್ತಿದ್ದಾರೆ.

ಶ್ವೇತಾ ಅವರು ಹುಟ್ಟಿದ್ದು ಚಂಡೀಗಢದಲ್ಲಿ. 16ನೇ ವಯಸ್ಸಿನಲ್ಲಿ ಅವರು ಮುಂಬೈಗೆ ತೆರಳಿ ಸೆಟಲ್ ಆದರು. ಈಗ ಅವರಿಗೆ 22 ವರ್ಷ ವಯಸ್ಸು. ‘ಡ್ಯಾನ್ಸ್ ಇಂಡಿಯಾ ಡ್ಯಾನ್ಸ್​’, ‘ಡ್ಯಾನ್ಸ್ ದೀವಾನೆ ಮತ್ತು ಡ್ಯಾನ್ಸ್’ ಹಾಗೂ ‘ಡ್ಯಾನ್ಸ್ +’ ರಿಯಾಲಿಟಿ ಶೋಗಳಲ್ಲಿ ಶ್ವೇತಾ ಭಾಗವಹಿಸಿದ್ದರು. ಈ ಮೂಲಕ ತಾವು ಅದ್ಭುತ ಡ್ಯಾನ್ಸರ್ ಎಂಬುದನ್ನು ಸಾಬೀತು ಮಾಡಿಕೊಂಡಿದ್ದಾರೆ. ಅವರು ಕೊರಿಯೋಗ್ರಾಫರ್ ಆಗಿಯೂ ಕೆಲಸ ಮಾಡಿದ್ದಾರೆ.

ಶ್ವೇತಾ ಅವರಿಗೆ ತಂದೆ ಇಲ್ಲ. ಹೀಗಾಗಿ ತಾಯಿಯ ಆರೈಕೆಯಲ್ಲಿ ಬೆಳೆದವರು. ಅವರ ಮೇಲೆ ತಾಯಿಯ ಪ್ರಭಾವ ಸಾಕಷ್ಟಿದೆ. ಶ್ವೇತಾ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 4 ಲಕ್ಷ ಹಿಂಬಾಲಕರಿದ್ದಾರೆ. ಅವರ ಫಾಲೋವರ್ಸ್ ಸಂಖ್ಯೆ ಈಗ ಹೆಚ್ಚುತ್ತಿದೆ. ಅವರು ‘ಮಸ್ತ್ ಆಂಕೆ..’ ಸೇರಿ ಕೆಲವು ಮ್ಯೂಸಿಕ್ ವಿಡಿಯೋದಲ್ಲಿ ಹೆಜ್ಜೆ ಹಾಕಿದ್ದಾರೆ. ಶ್ವೇತಾ ಮಿಸ್ ಯೂನಿವರ್ಸ್ ಕಿರೀಟ ತೊಡಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

View this post on Instagram

A post shared by Miss Diva (@missdivaorg)

ಇದನ್ನೂ ಓದಿ: ಲಿವಾ ಮಿಸ್​ ದಿವಾ ಯೂನಿವರ್ಸ್​ 2022 ಕಿರೀಟವನ್ನು ಮುಡಿಗೇರಿಸಿಕೊಂಡ ಮಂಗಳೂರು ಮೂಲದ ದಿವಿತಾ ರೈ

ಮಾಡೆಲ್​ಗಳು ಚಿತ್ರರಂಗಕ್ಕೆ ಕಾಲಿಟ್ಟು ಮಿಂಚಿದ ಸಾಕಷ್ಟು ಉದಾಹರಣೆ ಇದೆ. ‘ಮಿಸ್ ದಿವಾ’, ‘ಮಿಸ್ ಯೂನಿವರ್ಸ್​’ ಆದವರಿಗೆ ಚಿತ್ರರಂಗದಲ್ಲಿ ಸುಲಭದಲ್ಲಿ ಅವಕಾಶ ದೊರೆಯುತ್ತದೆ. ಅದೇ ರೀತಿ ಶ್ವೇತಾ ಅವರಿಗೂ ಮುಂದಿನ ದಿನಗಳಲ್ಲಿ ಬಾಲಿವುಡ್​ನಿಂದ ಅವಕಾಶಗಳು ಸಿಗುವ ಸಾಧ್ಯತೆ ಇದೆ.

ಕರ್ನಾಟಕದ ತ್ರಿಶಾ ಶೆಟ್ಟಿ ಅವರಿಗೂ ಶುಭ ಹಾರೈಸಲಾಗುತ್ತಿದೆ. ಅವರಿಗೆ ಇನ್​​ಸ್ಟಾಗ್ರಾಮ್​ನಲ್ಲಿ 41 ಸಾವಿರ ಹಿಂಬಾಲಕರಿದ್ದಾರೆ. ಬಾಲಿವುಡ್ ನಟಿ ಪೂಜಾ ಹೆಗ್ಡೆ ಕೂಡ ತ್ರಿಶಾ ಅವರನ್ನು ಹಿಂಬಾಲಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:10 pm, Mon, 28 August 23

ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?
ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ; ಈ ವರ್ಷ ಅದೃಷ್ಟವೋ ಅದೃಷ್ಟ!
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ; ಈ ವರ್ಷ ಅದೃಷ್ಟವೋ ಅದೃಷ್ಟ!
ಬಾಗಲಕೋಟೆ: ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು
ಬಾಗಲಕೋಟೆ: ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು
ಮಕರ ರಾಶಿಯ ಮೇಲೆ ಗುರು ಸಂಚಾರದ ಪ್ರಭಾವ ಹೇಗಿರಲಿದೆ?
ಮಕರ ರಾಶಿಯ ಮೇಲೆ ಗುರು ಸಂಚಾರದ ಪ್ರಭಾವ ಹೇಗಿರಲಿದೆ?
ಸಂತೋಷ್ ಲಾಡ್​ಗೆ ತಮ್ಮ ಇಲಾಖೆಯಲ್ಲಿ ಏನು ನಡೆದಿದೆಯಂತ ಗೊತ್ತಿಲ್ಲ: ಪ್ರತಾಪ್
ಸಂತೋಷ್ ಲಾಡ್​ಗೆ ತಮ್ಮ ಇಲಾಖೆಯಲ್ಲಿ ಏನು ನಡೆದಿದೆಯಂತ ಗೊತ್ತಿಲ್ಲ: ಪ್ರತಾಪ್
ಪ್ರಧಾನಿ ಮೋದಿಗಾಗಿ ಸುಳ್ಯದಲ್ಲಿ ಕೊರಗಜ್ಜನಿಗೆ ಹರಕೆ ತೀರಿಸಿದ ವಿಜಯೇಂದ್ರ
ಪ್ರಧಾನಿ ಮೋದಿಗಾಗಿ ಸುಳ್ಯದಲ್ಲಿ ಕೊರಗಜ್ಜನಿಗೆ ಹರಕೆ ತೀರಿಸಿದ ವಿಜಯೇಂದ್ರ
ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದು ಸ್ಪರ್ಧೆ: ಡಿಕೆ ಸುರೇಶ್
ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದು ಸ್ಪರ್ಧೆ: ಡಿಕೆ ಸುರೇಶ್