ಮದುವೆಯಲ್ಲ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಅದಿತಿ ರಾವ್ ಹೈದರಿ-ಸಿದ್ಧಾರ್ಥ್
Siddharth-Aditi Hydari: ನಟ ಸಿದ್ಧಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ದೇವಾಲಯದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ ಎನ್ನಲಾಗಿತ್ತು. ಇದೀಗ ಅದಿತಿ ಚಿತ್ರ ಹಂಚಿಕೊಂಡಿದ್ದು ತಾವು ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.
ತಮಿಳು ನಟ ಸಿದ್ಧಾರ್ಥ್ (Siddharth) ಹಾಗೂ ತೆಲುಗು ನಟಿ ಅದಿತಿ ರಾವ್ ಹೈದರಿ (Aditi Rao Hydari) ಅವರು ವಿವಾಹವಾಗಿದ್ದಾರೆ ಎಂಬ ಸುದ್ದಿ ತುಸು ಜೋರಾಗಿ ಹರಿದಾಡಿತ್ತು. ಕಳೆದೆರಡು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಲಿವಿನ್ ರಿಲೇಷನ್ನಲ್ಲಿದ್ದರು. ಈ ಜೋಡಿ ಮಾರ್ಚ್ 27ರಂದು ದೇವಾಲಯವೊಂದರಲ್ಲಿ ವಿವಾಹವಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಅದಿತಿ ರಾವ್ ಹೈದಿರಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ತಾವು ಹಾಗೂ ಸಿದ್ಧಾರ್ಥ್ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.
ನಟ ಸಿದ್ಧಾರ್ಥ್ ಹಾಗೂ ತೆಲುಗು ನಟಿ ಅದಿತಿ ರಾವ್ ಹೈದರಿ ಅವರುಗಳು ತೆಲಂಗಾಣದ ವನಪರ್ತಿಯ ರಂಗನಾಥಸ್ವಾಮಿದೇವಾಲಯದಲ್ಲಿ ಇಬ್ಬರು ಮದುಗೆ ಆಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ದೇವಾಲಯದ ಸಿಬ್ಬಂದಿ ಸಹ ಆ ಇಬ್ಬರೂ ಇಲ್ಲಿ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗಿ ಖಾತ್ರಿ ಪಡಿಸಿದ್ದರು. ಅಲ್ಲದೆ, ಚಿತ್ರೀಕರಣ ಎಂದು ಹೇಳಿ ಮದುವೆ ಆಗಿದ್ದಾರೆ ಎಂದು ಆರೋಪವನ್ನು ಸಹ ಮಾಡಿದ್ದರು.
ಇದೀಗ ಅದಿತಿ ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮ ಹಾಗೂ ಸಿದ್ಧಾರ್ಥ್ನ ಚಿತ್ರ ಹಂಚಿಕೊಂಡು, ತಾವು ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಅದಿತಿ ಹಂಚಿಕೊಂಡಿರುವ ಚಿತ್ರದಲ್ಲಿ ಸಿದ್ಧಾರ್ಥ್ ಹಾಗೂ ಅದಿತಿ ಇಬ್ಬರೂ ಬೆರಳಿಗೆ ಉಂಗುರ ಹಾಕಿಕೊಂಡಿದ್ದಾರೆ. ‘ಸಿದ್ಧಾರ್ಥ್ ಒಪ್ಪಿಕೊಂಡುಬಿಟ್ಟ’ ಎಂದು ಚಿತ್ರಕ್ಕೆ ಕ್ಯಾಪ್ಷನ್ ನೀಡಿರುವ ಅದಿತಿ ‘ಎಂಗೇಜ್ಡ್’ ಎಂದು ಬರೆದುಕೊಂಡಿದ್ದಾರೆ. ಅಲ್ಲಿಗೆ ತಾವಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಖಾತ್ರಿ ಪಡಿಸಿದ್ದಾರೆ.
ಇದನ್ನೂ ಓದಿ:ಸಿಂಪಲ್ ಆಗಿ ಮದುವೆ ಆದ ಸಿದ್ದಾರ್ಥ್-ಅದಿತಿ ನಡುವಿನ ವಯಸ್ಸಿನ ಅಂತರವೆಷ್ಟು?
ಸಿದ್ಧಾರ್ಥ್ ಹಾಗೂ ಅದಿತಿ ಇಬ್ಬರಿಗೂ ಇದು ಎರಡನೇ ಮದುವೆ. ಇಬ್ಬರೂ ಸಹ ‘ಮಹಾಸಮುದ್ರಂ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಆಗಲೇ ಈ ಇಬ್ಬರ ನಡುವೆ ಪ್ರೀತಿ ಹುಟ್ಟಿದೆ. ಕಳೆದ ಒಂದೆರಡು ವರ್ಷಗಳಿಂದಲೂ ಈ ಜೋಡಿ ಲಿವಿನ್ ರಿಲೇಷನ್ಶಿಪ್ನಲ್ಲಿತ್ತು. ಹಲವು ಕಡೆಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇಬ್ಬರೂ ಮದುವೆ ಆಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಇದೀಗ ಈ ತಾರಾ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಶೀಘ್ರವೇ ವಿವಾಹವೂ ಆಗಲಿದ್ದಾರೆ.
44 ವರ್ಷದ ಸಿದ್ಧಾರ್ಥ್ಗೆ ಇದು ಎರಡನೇ ಮದುವೆ. 2003 ರಲ್ಲಿಯೇ ಸಿದ್ಧಾರ್ಥ್ ತಮ್ಮ ಬಾಲ್ಯದ ಗೆಳತಿ ಮೇಘನಾ ಎಂಬುವರನ್ನು ವಿವಾಹವಾಗಿದ್ದರು. ಅದಾದ ಬಳಿಕ 2006 ರಿಂದ ಈ ಜೋಡಿ ಪ್ರತ್ಯೇಕವಾಗಿ ಇರಲಾರಂಭಿಸಿದ್ದರು. ಕೊನೆಗೆ 2007 ರಲ್ಲಿ ಪರಸ್ಪರ ವಿಚ್ಛೇದನ ಪಡೆದುಕೊಂಡರು. ಆ ಬಳಿಕ ಸಿದ್ಧಾರ್ಥ್ ಹೆಸರು ಬಾಲಿವುಡ್ ನಟಿ ಸಾರಾ ಅಲಿ ಖಾನ್ ಜೊತೆ ಕೇಳಿ ಬಂದಿತ್ತು. ಸಮಂತಾ ಜೊತೆಗೂ ಕೆಲ ಕಾಲ ಸಿದ್ಧಾರ್ಥ್ ಹೆಸರು ಕೇಳಿ ಬಂದಿತ್ತು. ಇದೀಗ ಅಂತಿಮವಾಗಿ ಅದಿತಿ ಜೊತೆ ವಿವಾಹವಾಗಲಿದ್ದಾರೆ.
ನಟಿ ಅದಿತಿ ರಾವ್ ಹೈದರಿಗೂ ಸಹ ಇದು ಎರಡನೇ ಮದುವೆ. ಈಶಾನ್ ಹೈದರಿ ಹಾಗೂ ವಿದ್ಯಾ ರಾವ್ ಅವರ ಪುತ್ರಿ ಅದಿತಿ ರಾವ್ ಹೈದರಿ, ಆಮಿರ್ ಖಾನ್ರ ಮಾಜಿ ಪತ್ನಿ ಕಿರಣ್ ರಾವ್ರ ಹತ್ತಿರದ ಸಂಬಂಧಿ ಸಹ. ಅದಿತಿ ರಾವ್ ಹೈದರಿ ತಮ್ಮ 23ನೇ ವಯಸ್ಸಿನಲ್ಲಿಯೇ ನಟ, ವಕೀಲ ಸತ್ಯದೀಪ್ ಮಿಶ್ರಾ ವಿವಾಹವಾಗಿದ್ದರು. ಆದರೆ ತಮ್ಮ ಮದುವೆಯನ್ನು ಗುಟ್ಟಾಗಿರಿಸಿದ್ದರು. ಕೊನೆಗೆ 2013ರಲ್ಲಿ ಸತ್ಯದೀಪ್ ಮಿಶ್ರಾರಿಂದ ಅದಿತಿ ದೂರಾದರು. ಇದೀಗ ಸಿದ್ಧಾರ್ಥ್ ಜೊತೆಗೆ ವಿವಾಹವಾಗಿದ್ದಾರೆ. ಇಬ್ಬರಿಗೂ ಇದು ಎರಡನೇ ಮದುವೆ. ಅದಿತಿ ರಾವ್ರ ಮೊದಲ ಪತಿ ಸತ್ಯದೀಪ್ ಮಿಶ್ರಾ, ಮೀನಾ ಗುಪ್ತಾ, ವೀವ್ ರಿಚರ್ಡ್ಸ್ ಪುತ್ರಿ ಮಸಾಬಾ ಗುಪ್ತಾರನ್ನು ವಿವಾಹವಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ