ಫ್ಲೈಟ್ ಟಾಯ್ಲೆಟ್​ನಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಮೇಲೆ ಹಲ್ಲೆ? ವಿಡಿಯೋ ವೈರಲ್

ಸಿದ್ಧಾರ್ಥ್ ಮಲ್ಹೋತ್ರಾ ‘ಯೋಧ’ ಸಿನಿಮಾದಲ್ಲಿ ಸೇನಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಯೋತ್ಪಾದಕರು ಹೈಜಾಕ್ ಮಾಡಿದ ವಿಮಾನದಿಂದ ಪ್ರಯಾಣಿಕರನ್ನು ರಕ್ಷಿಸುತ್ತಾರೆ. ಚಿತ್ರದಲ್ಲಿನ ನಟನ ಪಾತ್ರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಚಿತ್ರದ ಟ್ರೇಲರ್ ಕೂಡ ಪ್ರೇಕ್ಷಕರಿಗೆ ಇಷ್ಟವಾಗಿತ್ತು.

ಫ್ಲೈಟ್ ಟಾಯ್ಲೆಟ್​ನಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಮೇಲೆ ಹಲ್ಲೆ? ವಿಡಿಯೋ ವೈರಲ್
ಸಿದ್ದಾರ್ಥ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 18, 2024 | 1:01 PM

ನಟ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರನ್ನು ಹಿಂಬಾಲಿಸೋರ ಸಂಖ್ಯೆ ದೊಡ್ಡದಿದೆ. ಈಗ ಅವರ ನಟನೆಯ ‘ಯೋಧ’ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಸಿನಿಮಾ ವಿಮರ್ಶೆಯಲ್ಲಿ ಮೆಚ್ಚುಗೆ ಪಡೆದ ಹೊರತಾಗಿಯೂ ಅಂದುಕೊಂಡಷ್ಟು ಗಳಿಕೆ ಮಾಡುತ್ತಿಲ್ಲ. ಈ ಸಿನಿಮಾ ಮೂರು ದಿನಕ್ಕೆ ಗಳಿಕೆ ಮಾಡಿದ್ದು ಕೇವಲ 13 ಕೋಟಿ ರೂಪಾಯಿ ಎನ್ನಲಾಗಿದೆ. ಈ ಮಧ್ಯೆ ವಿಮಾನದ ಟಾಯ್ಲೆಟ್​ನಲ್ಲಿ ಸಿದ್ದಾರ್ಥ್ ಮೇಲೆ ಹಲ್ಲೆ ನಡೆದಿದೆ ಎಂದು ವಿಡಿಯೋ ವೈರಲ್ ಆಗಿದೆ. ಆದರೆ, ಇದರ ಅಸಲಿಯತ್ತು ಬೇರೆಯೇ ಇದೆ.

ವಿಡಿಯೋದಲ್ಲಿ ವಿಮಾನದ ಟಾಯ್ಲೆಟ್​ನಲ್ಲಿ ಸಿದ್ದಾರ್ಥ್ ಮೇಲೆ ಹಲ್ಲೆ ನಡೆದಿರುವುದು ಕಂಡು ಬಂದಿದೆ. ನಟನ ಮೇಲೆ ದಾಳಿ ಕೂಡ ಮಾಡಲಾಗಿದೆ. ಅಂದಹಾಗೆ, ಇದು ‘ಯೋಧ’ ಸಿನಿಮಾದ ಒಂದು ದೃಶ್ಯ. ಇದನ್ನು ಶೂಟ್ ಮಾಡೋದು ಎಷ್ಟು ಕಷ್ಟ ಆಯಿತು ಎಂಬುದನ್ನು ಈ ವಿಡಿಯೋದಲ್ಲಿ ಹೇಳಲಾಗಿದೆ. ಸ್ವತಃ ಸಿದ್ದಾರ್ಥ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.

ಟ್ವಿಟರ್​ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ‘ನಾನು ಈ ಹಿಂದೆ ಹಲವು ಬಾರಿ ಸಾಹಸ ದೃಶ್ಯಗಳನ್ನು ಮಾಡಿದ್ದೇನೆ. ಆದರೆ ಮೊದಲ ಬಾರಿಗೆ ಟಾಯ್ಲೆಟ್ನಲ್ಲಿ ಸಾಹಸ ದೃಶ್ಯವನ್ನು ಶೂಟ್ ಮಾಡಿದ್ದೇನೆ. ಎದುರಿಗಿದ್ದ ವ್ಯಕ್ತಿ ಎತ್ತರವಾಗಿದ್ದ. ಹಾಗಾಗಿ ಈ ದೃಶ್ಯ ಶೂಟ್ ಮಾಡಲು ಕಷ್ಟಪಡುತ್ತಿದ್ದೆ’ ಎಂದು ಅವರು ಹೇಳಿದ್ದಾರೆ.

ಸಿದ್ಧಾರ್ಥ್ ಮಲ್ಹೋತ್ರಾ ‘ಯೋಧ’ ಸಿನಿಮಾದಲ್ಲಿ ಸೇನಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಯೋತ್ಪಾದಕರು ಹೈಜಾಕ್ ಮಾಡಿದ ವಿಮಾನದಿಂದ ಪ್ರಯಾಣಿಕರನ್ನು ರಕ್ಷಿಸುತ್ತಾರೆ. ಚಿತ್ರದಲ್ಲಿನ ನಟನ ಪಾತ್ರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಚಿತ್ರದ ಟ್ರೇಲರ್ ಕೂಡ ಪ್ರೇಕ್ಷಕರಿಗೆ ಇಷ್ಟವಾಗಿತ್ತು.

 ಕಲೆಕ್ಷನ್ ವಿವರ

‘ಯೋಧ’ ಸಿನಿಮಾಗೆ ಈ ಮೊದಲು ರಿಲೀಸ್ ಆದ ‘ಶೈತಾನ್’ ಠಕ್ಕರ್ ಕೊಡುತ್ತಿದೆ. ‘ಶೈತಾನ್’ ಸಿನಿಮಾ ಭಾನುವಾರ (ಮಾರ್ಚ್ 18) ಅಂದಾಜು 7 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಕಳೆದ ವಾರ ರಿಲೀಸ್ ಆದ ‘ಶೈತಾನ್’ ಭಾನುವಾರ (10ನೇ ದಿನ)  9.75 ಕೋಟಿ ರೂಪಾಯಿ ಬಾಚಿಕೊಂಡಿದೆ. ಅಜಯ್ ಚಿತ್ರ ಬಿಡುಗಡೆಯಾಗಿ 10 ದಿನ ಕಳೆದರೂ ಚಿತ್ರದ ಜಾದು ಮುಂದುವರಿದಿದ್ದು, ‘ಯೋಧ’ ಸಿನಿಮಾ ಮಂಕಾಗುತ್ತಿದೆ.

ಇದನ್ನೂ ಓದಿ: ‘ಒಂದೊಳ್ಳೆಯ ಹೈಜಾಕ್ ಸಿನಿಮಾ’; ‘ಯೋಧ’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು

ಎರಡೂ ಸಿನಿಮಾಗಳ ಒಟ್ಟು ಗಳಿಕೆಯ ಬಗ್ಗೆ ಮಾತನಾಡುವುದಾದರೆ, ಅಜಯ್ ಅವರ ‘ಶೈತಾನ್’ ದೇಶೀಯ ಮಾರುಕಟ್ಟೆಯಲ್ಲಿ 100+ ಕೋಟಿ ರೂಪಾಯಿ ಬಾಚಿದೆ. ‘ಯೋಧ’ ಸಿನಿಮಾ ಮೂರು ದಿನಗಳಲ್ಲಿ ಕೇವಲ 16.85 ಕೋಟಿ ವ್ಯವಹಾರ ಮಾಡಿದೆ. ‘ಶೈತಾನ್’ ಮೊದಲ ದಿನವೇ 14.75 ಕೋಟಿ ಕಲೆಕ್ಷನ್ ಮಾಡಿತ್ತು ಮತ್ತು ಮೂರು ದಿನಗಳಲ್ಲಿ ಈ ಅಂಕಿ ಅಂಶವು 54 ಕೋಟಿ ತಲುಪಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ