‘ಪದ್ಮಶ್ರೀ ಪ್ರಶಸ್ತಿ ಕೊಡೋಕೆ ಈಗ ಸಮಯ ಸಿಕ್ಕಿತೇ?’ ಸರ್ಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ ಸೋನು ನಿಗಮ್​

ಇಂಥದ್ದೊಂದು ಕರೆ ಬರುವ ನಿರೀಕ್ಷೆ ಸೋನು ನಿಗಮ್​ಗೆ ಇತ್ತು. ಹೀಗಾಗಿ, ಏನು ಹೇಳಬೇಕು ಎನ್ನುವ ಉತ್ತರವನ್ನು ಅವರು ಸಿದ್ಧಪಡಿಸಿಟ್ಟು ಕೊಂಡಿದ್ದರು ಮತ್ತು ಹಾಗೆಯೇ ಹೇಳಿದರು. ಈ ಬಗ್ಗೆ ಸೋನು ನಿಗಮ್​ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

‘ಪದ್ಮಶ್ರೀ ಪ್ರಶಸ್ತಿ ಕೊಡೋಕೆ ಈಗ ಸಮಯ ಸಿಕ್ಕಿತೇ?’ ಸರ್ಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ ಸೋನು ನಿಗಮ್​
ಸೋನು ನಿಗಮ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Feb 05, 2022 | 8:10 PM

ಗಾಯಕ ಸೋನು ನಿಗಮ್​​ (Sonu Nigam) ಅವರು ಸಂಗೀತ ಲೋಕ ಹಾಗೂ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಅವರಿಗೆ ಕಳೆದ ತಿಂಗಳು ಪದ್ಮಶ್ರೀ (Padma Shri) ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆರಂಭದಲ್ಲಿ ಸೋನು ನಿಗಮ್​​ ಅವರು ಈ ಪ್ರಶಸ್ತಿ ಸ್ವೀಕರಿಸದೇ ಇರಲು ನಿರ್ಧರಿಸಿದ್ದರು! ಪ್ರಶಸ್ತಿ ನೀಡುವುದರ ಕುರಿತು ಅಧಿಕಾರಿಗಳಿಂದ ಎದುರಾದ ಪ್ರಶ್ನೆಗೆ ಗರಂ ಆಗಿದ್ದ ಸೋನು ನಿಗಮ್​, ಈ ಬಗ್ಗೆ ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಈ ಬಗ್ಗೆ ಸೋನು ನಿಗಮ್​ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಈ ವಿಚಾರ ಕೇಳಿ ಅನೇಕರು ಅಚ್ಚರಿ ಹೊರಹಾಕಿದ್ದಾರೆ.

ಇಂಥದ್ದೊಂದು ಕರೆ ಬರುವ ನಿರೀಕ್ಷೆ ಸೋನು ನಿಗಮ್​ಗೆ ಇತ್ತು. ಹೀಗಾಗಿ, ಏನು ಹೇಳಬೇಕು ಎನ್ನುವ ಉತ್ತರವನ್ನು ಅವರು ಸಿದ್ಧಪಡಿಸಿಟ್ಟು ಕೊಂಡಿದ್ದರು. ‘ಸಂಗೀತ ಲೋಕಕ್ಕೆ ನನಗಿಂತ 15 ವರ್ಷ ತಡವಾಗಿ ಬಂದವರಿಗೆ 5 ವರ್ಷ ಮೊದಲೇ ಈ ಗೌರವ ಸಿಕ್ಕಿದೆ. ನನಗೆ ಪದ್ಮಶ್ರೀ ನೀಡೋಕೆ ತಡವಾಯಿತು ಎಂದು ನಿಮಗೆ ಅನ್ನಿಸುವುದಿಲ್ಲವೇ ಎಂದು’ ಹೇಳಲು ಅವರು ನಿರ್ಧರಿಸಿದ್ದರು ಮತ್ತು ಹಾಗೆಯೇ ಹೇಳಿದರು.

‘ಪದ್ಮಶ್ರೀ ಪ್ರಶಸ್ತಿ ನೀಡಿದರೆ ನೀವು ಅದನ್ನು ಸ್ವೀಕರಿಸುತ್ತೀರಾ?’ ಎನ್ನುವ ಪ್ರಶ್ನೆಯನ್ನು ಸೋನು ನಿಗಮ್​ಗೆ ಸರ್ಕಾರಿ ಅಧಿಕಾರಿಗಳು ಕೇಳಿದರು. ಇದಕ್ಕೆ ಉತ್ತರಿಸಿದ್ದ ಅವರು, ‘ನೀವು ಈಗ ನನಗೆ ಪದ್ಮಶ್ರೀ ನೀಡುತ್ತೀರಾ? ನನ್ನನ್ನು ನೀವು ಬಹಳ ಸಮಯದಿಂದ ಗೇಲಿ ಮಾಡಿದ್ದೀರಿ. ನಾವು ಕೂಡ ಮನುಷ್ಯರು. ಹೀಗಾಗಿ ನಮಗೂ ಆಸೆಗಳಿರುತ್ತವೆ. ಪ್ರಶಸ್ತಿ ನೀಡಿದರೆ ಅದನ್ನು ಇಷ್ಟಪಡದ ವ್ಯಕ್ತಿ ಯಾರಾದರೂ ಇದ್ದಾರೆಯೇ? ಪ್ರಶಸ್ತಿ ಸಿಗದೆ ಇದ್ದವರು ಹಾಗೆ ಹೇಳಬಹುದು. ಸರಿಯಾದ ಸಮಯದಲ್ಲಿ ಮೆಚ್ಚುಗೆ ಮತ್ತು ಮನ್ನಣೆಯನ್ನು ನೀಡುವುದು ಉತ್ತಮ. ತಡವಾಗಿ ನೀಡಿದ ನ್ಯಾಯವನ್ನು ನ್ಯಾಯ ಎಂದು ಕರೆಯಲು ಸಾಧ್ಯವಿಲ್ಲ. ಹೀಗಾಗಿ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ಈಗ ತಡವಾಗಿದೆ. ನಾನು ಆ ಆಸೆಯನ್ನು ಯಾವಾಗಲೋ ಬಿಟ್ಟಿದ್ದೇನೆ ಎಂದು ಹೇಳಿದ್ದೆ’ ಎಂದಿದ್ದರು.

10 ನಿಮಿಷ ಮಾತುಕತೆ ನಡೆದೇ ಇತ್ತು. ಆ ಬಳಿಕ ಸೋನುಗೆ ಒಂದು ವಿಚಾರ ಅರಿವಾಗಿತ್ತು. ‘ಈ ರೀತಿಯ ಪ್ರಶಸ್ತಿಗಾಗಿ ಲಾಬಿಗಳು ನಡೆಯುತ್ತವೆ. ಹಿಂದೆ ಎರಡ್ಮೂರು ಬಾರಿ ಕೆಲವರು ನನಗೆ ಇದನ್ನು ಮಾಡಿದ್ದರು. ಆದರೆ, ಈ ಪ್ರಶಸ್ತಿ ಪಡೆಯಲು ನಾನು ಯಾವುದೇ ಲಾಬಿ ಮಾಡಿಲ್ಲ ಎಂಬುದು ನನಗೆ ಅರಿವಾಯಿತು. ಹೀಗಾಗಿ, ನಾನು ಪ್ರಶಸ್ತಿ ಒಪ್ಪಿಕೊಂಡೆ’ ಎಂದಿದ್ದಾರೆ ಅವರು.

‘ಪದ್ಮಶ್ರೀ ಪ್ರಶಸ್ತಿಗೆ ನನ್ನ ಹೆಸರನ್ನು ಯಾರು ನಾಮನಿರ್ದೇಶನ ಮಾಡಿದ್ದಾರೆಂದು ನನಗೆ ತಿಳಿದಿದೆ. ಅವರು ಖ್ಯಾತ ಗಾಯಕ. ಅವರ ಹೆಸರನ್ನು ನಾನು ಸಾರ್ವಜನಿಕವಾಗಿ ಹೇಳಬಹುದೇ ಅಥವಾ ಬೇಡವೆ ಎಂಬ ಬಗ್ಗೆ ನಾನು ಒಂದು ದಿನ ಅವರನ್ನೇ ಕೇಳುತ್ತೇನೆ’ ಎಂದಿದ್ದಾರೆ ಸೋನು.

ಇದನ್ನೂ ಓದಿ: Sonu Nigam: ಖ್ಯಾತ ಗಾಯಕ ಸೋನು ನಿಗಮ್​ ಸಾಧನೆಗೆ ಒಲಿಯಿತು ಪದ್ಮಶ್ರೀ ಪ್ರಶಸ್ತಿಯ ಗರಿ

Sonu Nigam: ‘ಒಂದು ವೇಳೆ ಅವರಿದ್ದಿದ್ದರೆ..’; ಪದ್ಮಶ್ರೀ ಪ್ರಶಸ್ತಿಯನ್ನು ತಾಯಿಗೆ ಅರ್ಪಿಸಿ ಸೋನು ನಿಗಮ್ ಮಾತು

Published On - 8:08 pm, Sat, 5 February 22

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ