AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆ ಹಾಡನ್ನು ನಾನು ಹಾಡಬೇಕಿತ್ತು’; ಬೇಸರ ಮಾಡಿಕೊಂಡ ಸೋನು ನಿಗಮ್

ಸಲೀಂ ಮರ್ಚಂಟ್ ಅವರಿಗೆ ಸೋನು ನಿಗಮ್ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಸಲೀಂ ಅವರು ಸೋನು ನಿಗಮ್​ಗೆ ಒಂದು ಪ್ರಶ್ನೆ ಇಟ್ಟಿದ್ದರು. ‘ಒಂದು ಹಾಡನ್ನು ನೀವು ಹಾಡಿಲ್ಲ ಮತ್ತು ಆ ಹಾಡನ್ನು ನಿಮಗೆ ಹಾಡಬೇಕು ಎಂದು ಯಾವಾಗಲೂ ಅನಿಸುತ್ತದೆ ಎಂದರೆ ಅದು ಯಾವ ಹಾಡು’ ಎಂದು ಕೇಳಲಾಯಿತು. ಇದಕ್ಕೆ ಸೋನು ಉತ್ತರಿಸಿದ್ದರು.

‘ಆ ಹಾಡನ್ನು ನಾನು ಹಾಡಬೇಕಿತ್ತು’; ಬೇಸರ ಮಾಡಿಕೊಂಡ ಸೋನು ನಿಗಮ್
ಸೋನು ನಿಗಮ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 20, 2024 | 8:08 AM

Share

ಸೋನು ನಿಗಮ್ ಅವರು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರು ಹಾಡಿದ ಹಾಡುಗಳು ಸೂಪರ್ ಹಿಟ್ ಆಗಿವೆ. ಕನ್ನಡದ ‘ಮಾಯಾವಿ..’ ಹಾಡನ್ನು ಹಾಡಿ ಅವರು ಮತ್ತೆ ಸುದ್ದಿ ಆಗಿದ್ದಾರೆ. ಈ ಹಾಡನ್ನು ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಸೋನು ನಿಗಮ್ ಹಾಗೂ ಸಂಜಿತ್ ಹೆಗಡೆ ಜುಗಲ್​ಬಂದಿ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಸೋನು ನಿಗಮ್ ಅವರು ‘ಮಾಯಾವಿ..’ ಹಾಡಿನ ಬಗ್ಗೆ ಸಂದರ್ಶನ ನೀಡುವಾಗ ಒಂದು ವಿಚಾರ ರಿವೀಲ್ ಮಾಡಿದ್ದಾರೆ.

ಸಲೀಂ ಮರ್ಚಂಟ್ ಅವರಿಗೆ ಸೋನು ನಿಗಮ್ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಸಲೀಂ ಅವರು ಸೋನು ನಿಗಮ್​ಗೆ ಒಂದು ಪ್ರಶ್ನೆ ಇಟ್ಟಿದ್ದರು. ‘ಒಂದು ಹಾಡನ್ನು ನೀವು ಹಾಡಿಲ್ಲ ಮತ್ತು ಆ ಹಾಡನ್ನು ನಿಮಗೆ ಹಾಡಬೇಕು ಎಂದು ಯಾವಾಗಲೂ ಅನಿಸುತ್ತದೆ ಎಂದರೆ ಅದು ಯಾವ ಹಾಡು’ ಎಂದು ಕೇಳಲಾಯಿತು. ‘ಆ ರೀತಿಯ ಬಹಳಷ್ಟು ಹಾಡುಗಳು ಇವೆ’ ಎಂದರು ಸೋನು ನಿಗಮ್.

ಆದರೆ, ಸೋನು ನಿಗಮ್​ಗೆ ಒಂದು ಹಾಡಿನ ಬಗ್ಗೆ ವಿಶೇಷ ಪ್ರೀತಿ ಇತ್ತು. ಆ ಬಗ್ಗೆ ಹೇಳಿಕೊಂಡರು. ‘ಖುದಾ ಜಾನೆ. ಇದು ನನ್ನ ಫೇವರಿಟ್ ಹಾಡು. ಅದು ನನಗೆ ಸಿಕ್ಕರೆ ಖುಷಿ ಆಗುತ್ತಿತ್ತು. ಆದರೆ, ಕೆಕೆ ಇದನ್ನು ಚೆನ್ನಾಗಿ ಹಾಡಿದ್ದಾರೆ. ನನಗೆ ಸಿಕ್ಕರೆ ನಾನು ಹಾಡುತ್ತಿದ್ದೆ. ಆದರೆ, ಕೆಕೆ ಅಷ್ಟು ಉತ್ತಮವಾಗಿ ಆ ಹಾಡು ಮೂಡಿ ಬರಲು ಸಾಧ್ಯವಾಗುತ್ತಲೇ ಇರಲಿಲ್ಲ’ ಎಂದಿದ್ದಾರೆ ಸೋನು ನಿಗಮ್.

ಇದನ್ನೂ ಓದಿ: ಸಂಜಿತ್ ಹೆಗಡೆ-ಸೋನು ನಿಗಮ್ ಸಮ್ಮಿಲನ; ‘ಮಾಯಾವಿ..’ ಹಾಡು ಸಖತ್ ಇಂಪು

ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಬಚನಾ ಯೇ ಹಸೀ’ ಚಿತ್ರದ ಹಾಡು ಇದಾಗಿದೆ. ಖ್ಯಾತ ಗಾಯಕ ಕೆಕೆ ಈ ಹಾಡನ್ನು ಹಾಡಿದ್ದರು. ಈ ಹಾಡು ಭರ್ಜರಿ ಹಿಟ್ ಆಗಿತ್ತು. ಕೆಕೆ ಅವರು ಇಂದು ನಮ್ಮ ಜೊತೆ ಇಲ್ಲ ಅನ್ನೋದು ಬೇಸರದ ವಿಚಾರ. ಅವರು ಕೋಲ್ಕತ್ತಾದಲ್ಲಿ ಕಾನ್ಸರ್ಟ್ ನಡೆಸಿದ್ದರು. ವೇದಿಕೆ ಮೇಲೆ ಹಾಡುವಾಗಲೇ ಅವರಿಗೆ ಸಮಸ್ಯೆ ಉಂಟಾಯಿತು. ಆ ಬಳಿಕ ಅವರು ನಿಧನ ಹೊಂದಿದರು. ಈ ವೇಳೆ ಸೋನು ನಿಗಮ್ ಬೇಸರ ಹೊರಹಾಕಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ