- Kannada News Photo gallery Bhavya Gowda faced Karma In Bigg Boss Kannada house Entertainment News In Kannada
Bhavya Gowda: ಭವ್ಯಾಗೆ ಸುತ್ತಿಬಂತು ಕರ್ಮ; ಮಾಡಿದ್ದುಣ್ಣೋ ಮಹರಾಯ
ದೊಡ್ಮನೆಯಲ್ಲಿ ಕ್ಯಾಪ್ಟನ್ ಆದವರು ಎಲ್ಲಾ ನಿಯಮಗಳು ಪಾಲನೆ ಆಗುವಂತೆ ನೋಡಿಕೊಳ್ಳಬೇಕು. ಒಂದೊಮ್ಮೆ ಯಾರಾದರೂ ನಿಯಮ ಮೀರಿದರೆ ಅವರಿಗೆ ಶಿಕ್ಷೆ ಕೊಡುವ ಅಧಿಕಾರ ಕ್ಯಾಪ್ಟನ್ಗೆ ಇರುತ್ತದೆ. ಈ ವಾರ ಭವ್ಯಾಗೆ ಆ ವಿಶೇಷ ಅಧಿಕಾರ ಇತ್ತು. ಅವರು ಕೂಡ ನಿಯಮ ಮೀರಿದ್ದಾರೆ.
Updated on: Nov 20, 2024 | 7:40 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಅವರು ಉತ್ತಮ ಆಟ ಪ್ರದರ್ಶನ ನೀಡುತ್ತಿದ್ದಾರೆ. ಅವರು ಈ ವಾರದ ಕ್ಯಾಪ್ಟನ್ ಆಗಿಯೂ ಆಯ್ಕೆ ಆಗಿದ್ದಾರೆ. ಈಗ ಅವರಿಗೆ ಕರ್ಮ ಸುತ್ತಿಕೊಂಡಿದೆ. ಮಾಡಿದ ತಪ್ಪಿಗೆ ಅವರು ಶಿಕ್ಷೆ ಅನುಭವಿಸಿದ್ದಾರೆ.

ದೊಡ್ಮನೆಯಲ್ಲಿ ಕ್ಯಾಪ್ಟನ್ ಆದವರು ಎಲ್ಲಾ ನಿಯಮಗಳು ಪಾಲನೆ ಆಗುವಂತೆ ನೋಡಿಕೊಳ್ಳಬೇಕು. ಒಂದೊಮ್ಮೆ ಯಾರಾದರೂ ನಿಯಮ ಮೀರಿದರೆ ಅವರಿಗೆ ಶಿಕ್ಷೆ ಕೊಡುವ ಅಧಿಕಾರ ಕ್ಯಾಪ್ಟನ್ಗೆ ಇರುತ್ತದೆ. ಈ ವಾರ ಭವ್ಯಾಗೆ ಆ ವಿಶೇಷ ಅಧಿಕಾರ ಇದೆ.

ರಜತ್ ಅವರು ದೊಡ್ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದಾರೆ. ಅವರು ಮೊದಲ ದಿನವೇ ಎಡವಿದ್ದಾರೆ. ಅವರು ಮೈಕ್ ಹಾಕೋದನ್ನು ಮರೆತಿದ್ದರು. ಈ ಕಾರಣಕ್ಕೆ ಭವ್ಯಾ ಶಿಕ್ಷೆ ನೀಡಿದರು. ಮಾಡಿದ ತಪ್ಪಿಗೆ ದೇವರ ಕೋಣೆ ಎದರು ನಿಂತು 10 ಉಟಾಬಸ್ ತೆಗೆದಿದ್ದರು.

ಈಗ ಕ್ಯಾಪ್ಟನ್ ಆಗಿ ಭವ್ಯಾ ಅವರೇ ಮೈಕ್ ಹಾಕುವುದನ್ನು ಮರೆತಿದ್ದಾರೆ. ಇದನ್ನು ಬಿಗ್ ಬಾಸ್ ಘೋಷಣೆ ಮಾಡಿದ್ದಾರೆ. ‘ಭವ್ಯಾ ನಿಮ್ಮ ಮೈಕ್ನ ಧರಿಸಿ’ ಎಂದರು ಬಿಗ್ ಬಾಸ್. ಈ ವಿಚಾರ ಕೇಳುತ್ತಿದ್ದಂತೆ ಇಡೀ ಮನೆಯವರ ಕಿವಿ ನೆಟ್ಟಗಾಗಿದೆ.

ಭವ್ಯಾ ಗೌಡ ಅವರನ್ನು ದೇವರ ಮನೆಯ ಎದುರು ಕರೆಸಿ 10 ಉಟಾಬಸ್ ತೆಗೆಸಲಾಗಿದೆ. ‘ಕರ್ಮ ಯಾರನ್ನೂ ಬಿಡುವುದಿಲ್ಲ’ ಎಂದು ಅನೇಕರು ಮಾತನಾಡಿಕೊಂಡಿದ್ದಾರೆ.



















