ಗೋಶಾಲೆಗಾಗಿ ಲಕ್ಷಾಂತರ ಹಣ ದೇಣಿಗೆ ನೀಡಿದ ನಟ
Sonu Sood social service: ಸೋನು ಸೂದ್ ಅವರು ಕೋವಿಡ್ ಸಮಯದಲ್ಲಿ ಮಾಡಿದ ಸೇವೆ ಲಕ್ಷಾಂತರ ಜನರಿಗೆ ಸಹಾಯ ಆಗಿತ್ತು. ಆಗ ಅವರನ್ನು ‘ಮಸೀಹ’ (ದೇವರು) ಎಂದು ಕರೆದಿದ್ದರು ದೇಶದ ಜನ. ಕೋವಿಡ್ ಬಳಿಕವೂ ಸೋನು ಸೂದ್ ತಮ್ಮ ಸಮಾಜ ಸೇವೆಯನ್ನು ಮುಂದುವರೆಸಿದ್ದು, ನಾನಾ ರೀತಿಯ ಜನರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. ಇದೀಗ ಸೋನು ಸೂದ್ ಅವರು ಗೋಸೇವೆಗೂ ಇಳಿದಿದ್ದು, ಗೋಶಾಲೆಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದಾರೆ.

ಸೋನು ಸೂದ್ (Sonu Sood), ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವುದು ವಿಲನ್ ಪಾತ್ರದಲ್ಲಿ ಆದರೆ ನಿಜ ಜೀವನದಲ್ಲಿ ಅಪ್ಪಟ ಹೀರೋ. ಸೋನು ಸೂದ್ ಅವರು ಕೋವಿಡ್ ಸಮಯದಲ್ಲಿ ಮಾಡಿದ ಸೇವೆ ಲಕ್ಷಾಂತರ ಜನರಿಗೆ ಸಹಾಯ ಆಗಿತ್ತು. ಆಗ ಅವರನ್ನು ‘ಮಸೀಹ’ (ದೇವರು) ಎಂದು ಕರೆದಿದ್ದರು ದೇಶದ ಜನ. ಕೋವಿಡ್ ಬಳಿಕವೂ ಸೋನು ಸೂದ್ ತಮ್ಮ ಸಮಾಜ ಸೇವೆಯನ್ನು ಮುಂದುವರೆಸಿದ್ದು, ನಾನಾ ರೀತಿಯ ಜನರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. ಇದೀಗ ಸೋನು ಸೂದ್ ಅವರು ಗೋಸೇವೆಗೂ ಇಳಿದಿದ್ದು, ಗೋಶಾಲೆಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದಾರೆ.
ಸೋನು ಸೂದ್ ಅವರು ಗುಜರಾತ್ನ ಗೋಶಾಲೆಯೊಂದಕ್ಕೆ ಬರೋಬ್ಬರಿ 22 ಲಕ್ಷ ರೂಪಾಯಿ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಗುಜರಾತಿನ ವಾರಾಹಿಯ ಗೋಶಾಲೆಯೊಂದಕ್ಕೆ ಭೇಟಿ ನೀಡಿದ್ದ ನಟ ಸೋನು ಸೂದ್, 7000 ಗೋವುಗಳಿರುವ ಆ ಗೋಶಾಲೆಗೆ ಬರೋಬ್ಬರಿ 22 ಲಕ್ಷ ರೂಪಾಯಿ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಗೋಶಾಲೆಯು ಗೋವುಗಳಿಗೆ ಆಶ್ರಯ, ಶುಶ್ರೂಶೆ ನೀಡುವ ಜೊತೆಗೆ ಆರೈಕೆ ಸಹ ಮಾಡುತ್ತದೆ. ವಿಶೇಷವಾಗಿ ಅನಾಥ ಗೋವುಗಳು, ಗಾಯಗೊಂಡ ಗೋವುಗಳು, ಅಂಗವಿಕಲ ಗೋವುಗಳು, ಮುದಿ ಗೋವುಗಳನ್ನು ಹುಡುಕಿ ಅವುಗಳ ರಕ್ಷಣೆ ಮಾಡುವ ಕಾರ್ಯವನ್ನು ಈ ಗೋಶಾಲೆ ಮಾಡುತ್ತಿದೆ.
ನನಗೆ ಇಲ್ಲಿ ಸಿಕ್ಕ ಪ್ರೀತಿ ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆ ತಂದಿತು. ನಾನು ಇಲ್ಲಿಗೆ ಬರುತ್ತಲೇ ಇರುತ್ತೇನೆ. ಇಲ್ಲಿ ಗೋರಕ್ಷಣೆಯನ್ನು ಅದ್ಭುತ ರೀತಿಯಲ್ಲಿ ಮಾಡುವ ವಿಧಾನವನ್ನು ಭಾರತದಾದ್ಯಂತ ಜಾರಿಗೆ ತರಬೇಕು. ಗೋವುಗಳು ನಮ್ಮಿಂದ ಏನನ್ನೂ ಕೇಳುವುದಿಲ್ಲ, ಕೇವಲ ಕಾಳಜಿಯನ್ನು ಮಾತ್ರ ಕೇಳುತ್ತವೆ. ನಮ್ಮ ಹಸುಗಳು ಮತ್ತು ಗೋ ಆಶ್ರಯತಾಣಗಳ ಜೊತೆಗೆ ನಿಲ್ಲೋಣ ಎಂದಿದ್ದಾರೆ ನಟ ಸೋನು ಸೂದ್.
ಇದನ್ನೂ ಓದಿ:ಸೋನು ಸೂದ್ ಜನ್ಮದಿನ; ನಟನೆ ಕಡಿಮೆ ಮಾಡಿದರೂ ತಗ್ಗಿಲ್ಲ ನಟನ ಆಸ್ತಿ
ಸೋನು ಸೂದ್ ಅವರು ಹಲವು ವರ್ಷಗಳಿಂದಲೂ ಈ ರೀತಿಯ ಸಾಮಾಜಿಕ ಸೇವೆಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಅವರು ಮಾಡಿದ ಸೇವೆಯನ್ನು ರಾಜ್ಯಪಾಲರೇ ಗುರುತಿಸಿ ಬೆನ್ನುತಟ್ಟಿದ್ದರು. ಕೋವಿಡ್ ಲಾಕ್ಡೌನ್ ಇಂದಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಜನರನ್ನು ತಮ್ಮ ಮನೆಗಳಿಗೆ ತಲುಪಲು ಸೋನು ಸೂದ್ ಸಹಾಯ ಮಾಡಿದ್ದರು. ಮಾತ್ರವಲ್ಲದೆ ಆಕ್ಸಿಜನ್ ಸಪ್ಲೈ, ತ್ವರಿತ ಆಸ್ಪತ್ರೆ ನಿರ್ಮಾಣಕ್ಕೆ ದೇಣಿಗೆ, ಕಾರ್ಮಿಕರುಗಳಿಗೆ ಊಟದ ವ್ಯವಸ್ಥೆ ಇನ್ನೂ ಅನೇಕ ರೀತಿಯ ಸಹಾಯವನ್ನು ಸೋನು ಸೂದ್ ಆಗ ಮಾಡಿದ್ದರು.
ಕೋವಿಡ್ ಬಳಿಕವೂ ತಮ್ಮ ಸೇವೆ ಮುಂದುವರೆಸಿದ ಸೋನು ಸೂದ್, ಬಡವರ ಮಕ್ಕಳ ಶಿಕ್ಷಣಕ್ಕೆ, ಮದುವೆಗೆ, ಆರೋಗ್ಯಕ್ಕೆ ಹೀಗೆ ಹಲವಾರು ರೀತಿಯಲ್ಲಿ ಸೇವೆಯನ್ನು ಮುಂದುವರೆಸುತ್ತಲೇ ಇದ್ದಾರೆ. ಸೋನು ಸೂದ್ ಅವರೇ ಒಮ್ಮೆ ಹೇಳಿದ್ದಂತೆ ಪ್ರತಿ ದಿನವೂ ಅವರಿಗೆ ಸಾವಿರಾರು ಕೋರಿಕೆ ಪತ್ರಗಳು, ಸಂದೇಶಗಳು ಬರುತ್ತವೆಯಂತೆ. ಇದೀಗ ಸೋನು ಸೂದ್ ಅವರು ಬಾಲಿವುಡ್ ಸೇರಿದಂತೆ ದಕ್ಷಿಣದ ಕೆಲ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




