AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣ ಭಾರತದ ಈ ಸೆಲೆಬ್ರಿಟಿ ದಂಪತಿ ಮಧ್ಯೆ ಇದೆ 10 ವರ್ಷ ವಯಸ್ಸಿನ ಅಂತರ

ವಯಸ್ಸಿನ ಅಂತರದ ವಿಚಾರ ಇಟ್ಟುಕೊಂಡು ಅನೇಕರು ಟೀಕೆ ಮಾಡಿರುತ್ತಾರೆ. ಅವರೆಲ್ಲರ ಬಾಯಿ ಮುಚ್ಚಿಸುವ ರೀತಿಯಲ್ಲಿ ಬದುಕಿ ತೋರಿಸಿದ ಅನೇಕ ಸೆಲೆಬ್ರಿಟಿಗಳಿದ್ದಾರೆ. ಹಾಗಾದರೆ ಯಾವ ಯಾವ ಸೆಲೆಬ್ರಿಟಿಗಳು ತಮ್ಮ ವಯಸ್ಸಿಗಿಂತ 10 ವರ್ಷ ಅಥವಾ ಅದಕ್ಕಿಂತ ಹಿರಿಯ ಪಾರ್ಟ್ನರ್​ನ ಮದುವೆ ಆಗಿದ್ದಾರೆ ಎನ್ನುವ ಬಗ್ಗೆ ಈ ಸ್ಟೋರಿಯಲ್ಲಿದೆ ಉತ್ತರ.

ದಕ್ಷಿಣ ಭಾರತದ ಈ ಸೆಲೆಬ್ರಿಟಿ ದಂಪತಿ ಮಧ್ಯೆ ಇದೆ 10 ವರ್ಷ ವಯಸ್ಸಿನ ಅಂತರ
ಈ ಸೆಲೆಬ್ರಿಟಿ ದಂಪತಿ ಮಧ್ಯೆ ಇದೆ 10 ವರ್ಷ ವಯಸ್ಸಿನ ಅಂತರ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Aug 31, 2023 | 8:15 AM

ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿರುವ ಅನೇಕರು ತಮ್ಮದೇ ಕ್ಷೇತ್ರದವರನ್ನು ಮದುವೆ ಆದ ಉದಾಹರಣೆ ಸಾಕಷ್ಟಿದೆ. ಕೆಲ ಸೆಲೆಬ್ರಿಟಿ ಜೋಡಿ ಇರುವ ವಯಸ್ಸಿನ ಅಂತರ ಕೂಡ ದೊಡ್ಡದೇ ಇರುತ್ತದೆ. ಮದುವೆ ಆಗುವುದಕ್ಕೂ ಮೊದಲು ವಯಸ್ಸಿನ ಅಂತರದ ವಿಚಾರ ಇಟ್ಟುಕೊಂಡು ಅನೇಕರು ಟೀಕೆ ಮಾಡಿರುತ್ತಾರೆ. ಅವರೆಲ್ಲರ ಬಾಯಿ ಮುಚ್ಚಿಸುವ ರೀತಿಯಲ್ಲಿ ಬದುಕಿ ತೋರಿಸಿದ ಅನೇಕ ಸೆಲೆಬ್ರಿಟಿಗಳಿದ್ದಾರೆ. ಹಾಗಾದರೆ ಯಾವ ಯಾವ ಸೆಲೆಬ್ರಿಟಿಗಳು (Celebrity) ತಮ್ಮ ವಯಸ್ಸಿಗಿಂತ 10 ವರ್ಷ ಅಥವಾ ಅದಕ್ಕಿಂತ ಹಿರಿಯ ಪಾರ್ಟ್ನರ್​ನ ಮದುವೆ ಆಗಿದ್ದಾರೆ ಎನ್ನುವ ಬಗ್ಗೆ ಈ ಸ್ಟೋರಿಯಲ್ಲಿದೆ ಉತ್ತರ.

ಫಹಾದ್ ಫಾಸಿಲ್-ನಜ್ರಿಯಾ

ಮಲಯಾಳಂ ಚಿತ್ರರಂಗದ ಕ್ಯೂಟ್ ಕಪಲ್​ಗಳಲ್ಲಿ ಫಹಾದ್ ಫಾಸಿಲ್ ಹಾಗೂ ನಜ್ರಿಯಾ ಕೂಡ ಒಬ್ಬರು. ಇವರ ನಡುವಿನ ವಯಸ್ಸಿನ ಅಂತರ ಬರೋಬ್ಬರಿ 12 ವರ್ಷ! ಹೌದು, ಮದುವೆ ಆಗುವಾಗ ನಜ್ರಿಯಾಗೆ ಕೇವಲ 19 ವರ್ಷ ವಯಸ್ಸು. ಇವರದ್ದು ಲವ್ ಮ್ಯಾರೇಜ್​. ಇಬ್ಬರೂ ‘ಬೆಂಗಳೂರು ಡೇಸ್​’ ಸೇರಿ ಅನೇಕ ಸಿನಿಮಾಗಳಲ್ಲಿ ಒಟ್ಟಾಗಿ ತೆರೆ ಹಂಚಿಕೊಂಡಿದ್ದಾರೆ. ವಯಸ್ಸಿನ ಅಂತರ ಇವರ ಪ್ರೀತಿಗೆ ಅಡ್ಡಿ ಆಗಿಲ್ಲ.

ಆರ್ಯ-ಸಯೇಶಾ ಸೈಘಲ್

ಆರ್ಯ ಅವರು ತಮಿಳಿನ ಸ್ಟಾರ್ ಹೀರೋ. ಸಯೇಶಾ ತಮಿಳು, ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪುನೀತ್ ನಟನೆಯ ‘ಯುವರತ್ನ ಸಿನಿಮಾದಲ್ಲಿ ಅವರು ಬಣ್ಣ ಹಚ್ಚಿದ್ದರು. ಆರ್ಯ ಹಾಗೂ ಸಯೇಶಾ ಮಧ್ಯೆ 16 ವರ್ಷ ವಯಸ್ಸಿನ ಅಂತರ ಇದೆ! ಇವರ ಸಂಬಂಧವನ್ನು ಅನೇಕರು ತಂದೆ-ಮಗಳ ಸಂಬಂಧಕ್ಕೆ ಹೋಲಿಕೆ ಮಾಡಿದ್ದಿದೆ. ಆದರೆ, ಇದಕ್ಕೆಲ್ಲ ಅವರು ತಲೆಕೆಡಿಸಿಕೊಂಡಿಲ್ಲ. 2021ರಲ್ಲಿ ಅವರು ತಾಯಿ ಆದರು. ಮಗುವಿಗೆ ಅರಿಯಾನಾ ಎಂದು ಹೆಸರು ಇಡಲಾಗಿದೆ.

ಅಕ್ಕಿನೇನಿ ನಾಗಾರ್ಜುನ-ಅಮಲಾ

ಅಕ್ಕಿನೇನಿ ನಾಗಾರ್ಜುನ ಅವರು ಅಮಲಾನ ಮದುವೆ ಆದರು. ನಾಗಾರ್ಜುನಗೆ ಇದು ಎರಡನೇ ಮದುವೆ. ಇವರ ಮಧ್ಯೆ 9 ವರ್ಷ ವಯಸ್ಸಿನ ಅಂತರ ಇದೆ. ಇವರು ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಈ ದಂಪತಿಗೆ ಅಖಿಲ್ ಹೆಸರಿನ ಮಗ ಇದ್ದಾನೆ.

ಅಜಿತ್-ಶಾಲಿನಿ

ಕಾಲಿವುಡ್​ನ ಸ್ಟಾರ್ ಹೀರೋ ಅಜಿತ್. ಇವರು ಶಾಲಿನಿ ಅವರನ್ನು  ಮದುವೆ ಆಗಿದ್ದಾರೆ. ಶಾಲಿನಿ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಮದುವೆ ಬಳಿಕ ನಟನೆಯಿಂದ ದೂರ ಉಳಿದರು. ಈ ದಂಪತಿ ಮಧ್ಯೆ 10 ವರ್ಷ ವಯಸ್ಸಿನ ಅಂತರ ಇದೆ. ಆದರೆ, ಇದು ಇವರ ದಾಂಪತ್ಯಕ್ಕೆ ಅಡ್ಡಿ ಆಗಿಲ್ಲ.

ಜೂನಿಯರ್ ಎನ್​ಟಿಆರ್-ಪ್ರಣತಿ

ಜೂನಿಯರ್ ಎನ್​ಟಿಆರ್ ಅವರದ್ದು ಸಿನಿಮಾ ಹಿನ್ನೆಲೆ ಇರುವ ಕುಟುಂಬ. ಅವರ ತಾತನ ಕಾಲದಿಂದಲೂ ಅನೇಕರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಅವರು ಪ್ರಣತಿ ಲಕ್ಷ್ಮಿ ಅವರನ್ನು ಮದುವೆ ಆದರು. ಜೂನಿಯರ್ ಎನ್​ಟಿಆರ್​ಗಿಂತ ಪ್ರಣತಿ ವಯಸ್ಸಿನಲ್ಲಿ 10 ವರ್ಷ ಸಣ್ಣವರು ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.

ಪ್ರಕಾಶ್ ರಾಜ್-ಪೊನಿ ವರ್ಮಾ

ಪ್ರಕಾಶ್ ರಾಜ್ ಅವರು ಸದಾ ವಿವಾದ ಮೂಲಕ ಸುದ್ದಿ ಆಗುತ್ತಾರೆ. ಅವರ ಮದುವೆ ವಿಚಾರ ಕೂಡ ಸುದ್ದಿ ಆಗಿತ್ತು. 2010ರಲ್ಲಿ ಪ್ರಕಾಶ್ ರಾಜ್ ಮದುವೆ ಆದರು. ಅಚ್ಚರಿ ಎಂದರೆ, ಪ್ರಕಾಶ್ ರಾಜ್ ಹಾಗೂ ಪೊನಿ ವಯಸ್ಸಿನ ಅಂತರ 12 ವರ್ಷ. ಇವರು ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಇತ್ತೀಚೆಗೆ ಅವರು ಪತ್ನಿ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಸಾಕಷ್ಟು ಸುದ್ದಿ ಆಗಿತ್ತು.

ದಿಲೀಪ್-ಕಾವ್ಯಾ ಮಾಧವನ್

ದಿಲೀಪ್ ಹಾಗೂ ಕಾವ್ಯಾ ಮಾಧವನ್ ಅವರು ತೆರೆಮೇಲೆ ಗಮನ ಸೆಳೆದವರು. ಇವರು ಮದುವೆ ಆಗುವ ಮೂಲಕ ಅಭಿಮಾನಿಗಳಿಗೆ ಸರ್​ಪ್ರೈಸ್ ನೀಡಿದರು. ಇವರ ಮಧ್ಯೆ 16 ವರ್ಷ ವಯಸ್ಸಿನ ಅಂತರ ಇದೆ.

ದೇವಿಕಾ-ಮುಕೇಶ್

ಮಲಯಾಳಂ ನಟ ಮುಕೇಶ್ ಅವರ ವಯಸ್ಸು 66. ಅವರು ದೇವಿಕಾರನ್ನು ಮದುವೆ ಆದರು. ಅವರ ವಯಸ್ಸು 46.  ಇಬ್ಬರ ಮಧ್ಯೆ ಸುಮಾರು 20 ವರ್ಷ ವಯಸ್ಸಿನ ಅಂತರ ಇದೆ.

ದಿಲ್ ರಾಜು-ತೇಜಸ್ವಿನಿ

ದಿಲ್ ರಾಜು ಹಾಗೂ ತೇಜಸ್ವಿನಿ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇವರ ಮಧ್ಯೆ 23 ವರ್ಷ ವಯಸ್ಸಿನ ಅಂತರ ಇದೆ! ದಿಲ್ ರಾಜುಗೆ ಇದು ಎರಡನೇ ಮದುವೆ. ದಿಲ್ ರಾಜು ಅವರು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ರಾಜಮೌಳಿ ನಟನೆ? ಹಿರಿದಾಗುತ್ತಿದೆ ಪ್ರಭಾಸ್​ ಸಿನಿಮಾದ ಪಾತ್ರವರ್ಗ

ನರೇಶ್-ಪವಿತ್ರಾ ಲೋಕೇಶ್

ಇತ್ತೀಚೆಗೆ ಭರ್ಜರಿ ಚರ್ಚೆಯಲ್ಲಿರುವ ಜೋಡಿ ಎಂದರೆ ಅದು ನರೇಶ್ ಹಾಗೂ ಪವಿತ್ರಾ ಲೋಕೇಶ್. ಇವರ ಮಧ್ಯೆ 19 ವರ್ಷ ವಯಸ್ಸಿನ ಅಂತರ ಇದೆ. ಇವರ ಮದುವೆ ವಿಚಾರ ಸಾಕಷ್ಟು ಸುದ್ದಿ ಆಗಿದೆ. ಇತ್ತೀಚೆಗೆ ಮಾತನಾಡಿದ್ದ ನರೇಶ್ ಮಗ, ‘ನನ್ನ ತಂದೆ ತಪ್ಪು ಮಾಡಿದರು’ ಎಂದಿದ್ದರು. ಪವಿತ್ರಾ ಜೊತೆಗಿನ ಪ್ರೀತಿ ಆಧರಿಸಿ ನರೇಶ್ ‘ಮತ್ತೆ ಮದುವೆ’ ಹೆಸರಿನ ಸಿನಿಮಾ ಕೂಡ ನಿರ್ಮಾಣ ಮಾಡಿದರು. ನರೇಶ್ ಹಾಗೂ ಪವಿತ್ರಾ ಇದರಲ್ಲಿ ನಟಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ