ಅಪ್ರಾಪ್ತೆಯರ ಎದುರು ಗುಪ್ತಾಂಗ ಪ್ರದರ್ಶಿಸಿದ 46 ವರ್ಷದ ಮಲಯಾಳಂ ನಟ ಅರೆಸ್ಟ್​  

| Updated By: ರಾಜೇಶ್ ದುಗ್ಗುಮನೆ

Updated on: Jul 07, 2022 | 3:47 PM

ಶ್ರೀಜಿತ್ ಅವರು ಕಾರಿನಿಂದ ಇಳಿದು ಅವರ ಎದುರು ತಮ್ಮ ಗುಪ್ತಾಂಗ ಪ್ರದರ್ಶಿಸಿದ್ದಾರೆ. ಶ್ರೀಜಿತ್ ಅವರು ಹಿರಿಯ ನಟ ಟಿಜಿ ರವಿ ಅವರ ಮಗನಾಗಿದ್ದು, ಈ ಘಟನೆಯಿಂದ ಕುಟುಂಬಕ್ಕೆ ಶ್ರೀಜಿತ್ ಮುಜುಗರ ತಂದಿದ್ದಾರೆ.  

ಅಪ್ರಾಪ್ತೆಯರ ಎದುರು ಗುಪ್ತಾಂಗ ಪ್ರದರ್ಶಿಸಿದ 46 ವರ್ಷದ ಮಲಯಾಳಂ ನಟ ಅರೆಸ್ಟ್​  
ಶ್ರೀಜಿತ್
Follow us on

ಮಲಯಾಳಂ ನಟ (Malayalam Hero) ಶ್ರೀಜಿತ್ ರವಿ ಅವರ ಬಂಧನ ಆಗಿದೆ. ಇಬ್ಬರು ಅಪ್ರಾಪ್ತ ಬಾಲಕಿಯರ ಎದುರು ಶ್ರೀಜಿತ್ (Sreejith Ravi) ತಮ್ಮ ಗುಪ್ತಾಂಗ ಪ್ರದರ್ಶಿಸಿದ ಆರೋಪ ಎದುರಿಸುತ್ತಿದ್ದಾರೆ. ಈ ಕಾರಣಕ್ಕೆ ಅವರನ್ನು ಬಂಧನಕ್ಕೆ ಒಳಪಡಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ. ಪೋಕ್ಸೋ ಕಾಯ್ದೆ ಅಡಿಯಲ್ಲಿ ಅವರ ವಿರುದ್ಧ ಕೇಸ್ ದಾಖಲಾಗಿದೆ. ಈ ಘಟನೆ ಜುಲೈ 4ರಂದು ನಡೆದಿದ್ದು, ಜುಲೈ 7ರಂದು ಅವರನ್ನು ಬಂಧಿಸಲಾಗಿದೆ ಎಂದು ವರದಿ ಆಗಿದೆ.

ತ್ರಿಶೂರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಶ್ರೀಜಿತ್ ಅವರು ತಮ್ಮ ಕಾರಿನಲ್ಲಿ ಕೂತಿದ್ದರು. ಈ ವೇಳೆ ಇಬ್ಬರು ಅಪ್ರಾಪ್ತೆಯರು ಕಾರಿನ ಬಳಿ ಬಂದಿದ್ದಾರೆ. ಶ್ರೀಜಿತ್ ಅವರು ಕಾರಿನಿಂದ ಇಳಿದು ಅವರ ಎದುರು ತಮ್ಮ ಗುಪ್ತಾಂಗ ಪ್ರದರ್ಶಿಸಿದ್ದಾರೆ. ಶ್ರೀಜಿತ್ ಅವರು ಹಿರಿಯ ನಟ ಟಿಜಿ ರವಿ ಅವರ ಮಗನಾಗಿದ್ದು, ಈ ಘಟನೆಯಿಂದ ಕುಟುಂಬಕ್ಕೆ ಶ್ರೀಜಿತ್ ಮುಜುಗರ ತಂದಿದ್ದಾರೆ.

ಪೊಲೀಸರು ಸದ್ಯ ಈ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದಾರೆ. ವಾಹನ ನೋಂದಣಿ ಸಂಖ್ಯೆ ಆಧರಿಸಿ ಪೊಲೀಸರು ಶ್ರೀಜಿತ್ ಅವರನ್ನು ಪತ್ತೆ ಹಚ್ಚಿದ್ದಾರೆ. ವಿಚಾರಣೆ ವೇಳೆ ಶ್ರೀಜಿತ್ ಈ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ, ತಮಗೆ ಮಾನಸಿಕ ಸಮಸ್ಯೆ ಇದ್ದು ಈ ಕಾರಣದಿಂದ ಈ ರೀತಿ ಆಗಿದೆ ಎಂಬುದನ್ನು ಅವರು ಹೇಳಿಕೊಂಡಿದ್ದಾರೆ.  ಶ್ರೀಜಿತ್ ಅವರ ವಿರುದ್ಧ ಈ ರೀತಿಯ ಪ್ರಕರಣ ದಾಖಲಾಗುತ್ತಿರುವುದು ಇದೇ ಮೊದಲೇನು ಅಲ್ಲ. ಕೆಲ ವರ್ಷಗಳ ಹಿಂದೆ ಅವರ ವಿರುದ್ಧ ಇದೇ ರೀತಿಯ ಕೇಸ್ ದಾಖಲಾಗಿತ್ತು.

ಇದನ್ನೂ ಓದಿ
ಆತ್ಮಹತ್ಯೆ ಮಾಡಿಕೊಂಡ ಮಲಯಾಳಂ ನಟ; ನೇಣು ಬಿಗಿದ ಸ್ಥಿತಿಯಲ್ಲಿ ಪ್ರಸಾದ್ ಶವ ಪತ್ತೆ
Tyson: ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್​ ಜತೆ ಹೊಸ ಸಿನಿಮಾ ಘೋಷಿಸಿದ ಹೊಂಬಾಳೆ ಫಿಲ್ಮ್ಸ್​
Sheshagiri Basavaraj: ವಂಚನೆ, ಹಲ್ಲೆ, ಅತ್ಯಾಚಾರದ ಆರೋಪ; ಸ್ಯಾಂಡಲ್​ವುಡ್ ಖಳನಟನ ಬಂಧನ

2016ರಲ್ಲಿ ಶ್ರೀಜಿತ್ ವಿರುದ್ಧ ಕೇಸ್ ಒಂದು ದಾಖಲಾಗಿತ್ತು. ಪಾಲಕ್ಕಾಡ್​ನಲ್ಲಿ 14 ವಿದ್ಯಾರ್ಥಿನಿಯರ ಎದುರು ಅವರು ಬೆತ್ತಲಾಗಿದ್ದರು. ಈ ಸಂಬಂಧ ವಿದ್ಯಾರ್ಥಿನಿಯರು ದೂರು ನೀಡಿದ್ದರಿಂದ ಕೇಸ್ ದಾಖಲಾಗಿತ್ತು. ನಂತರ ಅವರನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಆದರೆ, ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲೇ ಇಲ್ಲ. ಸರಿಯಾದ ಸಾಕ್ಷಿಗಳನ್ನು ಕಲೆ ಹಾಕದೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ಬಾಲಕಿಯರ ಪಾಲಕರು ಆರೋಪಿಸಿದ್ದರು.

2005ರಲ್ಲಿ ಶ್ರೀಜಿತ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಅದೇ ವರ್ಷ ಅವರಿಗೆ ದೊಡ್ಡ ಬ್ರೇಕ್ ಸಿಕ್ಕಿತು. ‘ಮಿಷನ್ 90 ಡೇಸ್​’ ಸೇರಿ ಅನೇಕ ಹಿಟ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ತಮಿಳಿನಲ್ಲೂ ಅವರು ನಟಿಸಿದ್ದಾರೆ. ‘ವೆಟ್ಟೈ’, ‘ಕುಮಕಿ’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಇದನ್ನೂ ಓದಿ: ‘ಸಲಾರ್ ಚಿತ್ರದಲ್ಲಿ ನಾನೂ ನಟಿಸುತ್ತಿದ್ದೇನೆ’; ಬ್ರೇಕಿಂಗ್ ನ್ಯೂಸ್ ನೀಡಿದ ನಟ ಪೃಥ್ವಿರಾಜ್​ ಸುಕುಮಾರನ್

ಆತ್ಮಹತ್ಯೆ ಮಾಡಿಕೊಂಡ ಮಲಯಾಳಂ ನಟ; ನೇಣು ಬಿಗಿದ ಸ್ಥಿತಿಯಲ್ಲಿ ಪ್ರಸಾದ್ ಶವ ಪತ್ತೆ