‘ಕರುಪ್ಪು’ ಸಿನಿಮಾಗಾಗಿ ಕೊನೆ ಕ್ಷಣದಲ್ಲಿ ಸಾಲ ಮಾಡಿದ್ದ ನಟ ಸೂರ್ಯ

ಆರ್‌ಜೆ ಬಾಲಾಜಿ ನಿರ್ದೇಶನದ 'ಕರುಪ್ಪು' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಯಶಸ್ಸು ಕಂಡಿದೆ. ಆದರೆ ಈ ಚಿತ್ರದ ಬಿಡುಗಡೆಗೂ ಮುನ್ನ ಎದುರಾದ ಆರ್ಥಿಕ ಬಿಕ್ಕಟ್ಟನ್ನು ನೀಗಿಸಲು ನಟ ಸೂರ್ಯ ಕೊನೆ ಕ್ಷಣದಲ್ಲಿ ಸಾಲ ಮಾಡಿದ್ದರು. ಹೆಂಡತಿ ಜ್ಯೋತಿಕಾ ಬೆಂಬಲದಿಂದಲೇ ಈ ಕಷ್ಟದಿಂದ ಹೊರಬಂದಿದ್ದಾಗಿ ಸೂರ್ಯ ಹೇಳಿದ್ದಾರೆ.

ಕರುಪ್ಪು ಸಿನಿಮಾಗಾಗಿ ಕೊನೆ ಕ್ಷಣದಲ್ಲಿ ಸಾಲ ಮಾಡಿದ್ದ ನಟ ಸೂರ್ಯ
ಸೂರ್ಯ
Edited By:

Updated on: Aug 05, 2026 | 7:55 AM

ಸ್ಟಾರ್ ನಟ ಸೂರ್ಯ ಅಭಿನಯದ ‘ಕರುಪ್ಪು’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೃಷ್ಟಿಸಿದ ದಾಖಲೆ ಸಣ್ಣದೇನಲ್ಲ. ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಬಾಚಿದ ಈ ಚಿತ್ರ ಭಾರೀ ಯಶಸ್ಸು ಕಂಡಿತು. ಆದರೆ ಈ ಸಿನಿಮಾದ ಬಿಡುಗಡೆ ಮುನ್ನ ಎದುರಾದ ಆರ್ಥಿಕ ಸಂಕಷ್ಟ ಸಣ್ಣದಲ್ಲ. ಕೊನೆ ಕ್ಷಣದ ಸಾಲದ ಸುಳಿಗೆ ಸಿಲುಕಿದ್ದ ಸೂರ್ಯ, ಆ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಕೊನೆ ಕ್ಷಣದ ಆರ್ಥಿಕ ಬಿಕ್ಕಟ್ಟು

ಸಿನಿಮಾ ಬಿಡುಗಡೆಗೆ ಒಂದು ದಿನ ಬಾಕಿ ಇರುವಾಗ ದೊಡ್ಡ ಆರ್ಥಿಕ ಸಮಸ್ಯೆ ಎದುರಾಗಿತ್ತು. ಇದರಿಂದಾಗಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಒಂದು ದಿನ ಮುಂದೂಡಬೇಕಾಯಿತು. ಎಲ್ಲಾ ತೊಂದರೆಗಳನ್ನು ಬಗೆಹರಿಸಿ ಮೇ 15 ರಂದು ಚಿತ್ರವನ್ನು ಯಶಸ್ವಿಯಾಗಿ ರಿಲೀಸ್ ಮಾಡಲಾಯಿತು.

ಸಾಲದ ಹೊರೆ ಹೊತ್ತ ಸೂರ್ಯ

ಇತ್ತೀಚಿನ ಸಂದರ್ಶನದಲ್ಲಿ ಸೂರ್ಯ ಈ ಕಷ್ಟದ ಸಮಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಆ ಸಮಯದಲ್ಲಿ ತಮಗೆ ಹೆಂಡತಿ ಜ್ಯೋತಿಕಾ ನೀಡಿದ ಬೆಂಬಲವನ್ನು ಸ್ಮರಿಸಿದ್ದಾರೆ. ಕೊನೆ ಕ್ಷಣದಲ್ಲಿ ಸಾಲ ಪಡೆಯಲು ಜ್ಯೋತಿಕಾ ಧೈರ್ಯ ನೀಡಿದ್ದರು. ಈ ನಿರ್ಧಾರ ತಪ್ಪಾಗಿದ್ದರೆ ಕುಟುಂಬಕ್ಕೆ ದೊಡ್ಡ ಕಷ್ಟ ಎದುರಾಗುತ್ತಿತ್ತು.

ಕುಟುಂಬದ ಬೆಂಬಲ ಮತ್ತು ನಂಬಿಕೆ

ಚಿತ್ರರಂಗದಲ್ಲಿ ಎಷ್ಟೇ ವರ್ಷ ಅನುಭವ ಇದ್ದರೂ ಇಂತಹ ಕಷ್ಟಗಳು ಎದುರಾಗುತ್ತವೆ. ಆ ಸಮಯದಲ್ಲಿ ನಂಬಿಕೆಯೇ ನಮಗೆ ದೊಡ್ಡ ಶಕ್ತಿಯಾಯಿತು. ಕುಟುಂಬದ ಬೆಂಬಲ ಇದ್ದಿದ್ದರಿಂದಲೇ ಸಾಲ ಮಾಡಿ ಸಿನಿಮಾವನ್ನು ಹೊರತನ್ನಲು ಸಾಧ್ಯವಾಯಿತು.

ಇದನ್ನೂ ಓದಿ: ಶತಕೋಟಿ ಕ್ಲಬ್ ಸೇರಿದ ತಮಿಳು ನಟ ಸೂರ್ಯ; 100 ಕೋಟಿ ರೂಪಾಯಿ ಸಂಭಾವನೆ

ಒಗ್ಗಟ್ಟಿನಿಂದ ಸಿಕ್ಕ ಯಶಸ್ಸು

ಇದು ಕೇವಲ ತಮ್ಮೊಬ್ಬರ ಶ್ರಮವಲ್ಲ ಎಂದು ಸೂರ್ಯ ಸ್ಪಷ್ಟಪಡಿಸಿದ್ದಾರೆ. ಹಣಕಾಸುದಾರರು ಮತ್ತು ಥಿಯೇಟರ್ ಮಾಲೀಕರು ನಮಗೆ ಸಾಥ್ ನೀಡಿದರು. ಶೇಕಡಾ 25 ರಿಂದ 30 ರಷ್ಟು ಹಣವನ್ನು ಆಮೇಲೆ ಪಡೆಯಲು ಒಪ್ಪಿಕೊಂಡರು. ಎಲ್ಲರ ಸಹಕಾರದಿಂದ ಸಿನಿಮಾ ಯಶಸ್ವಿಯಾಗಿ ಬಿಡುಗಡೆಯಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us