ಹೀರೋಯಿನ್ಗಳ ಜೊತೆ ಡೇಟ್ ಮಾಡೋದೆ ಸಿದ್ದಾರ್ಥ್ ಕೆಲಸವಾಗಿತ್ತು? ಆದ ಬ್ರೇಕಪ್ಗಳೆಷ್ಟು?
Siddharth Birthday: ಸಿದ್ದಾರ್ಥ್ ಕೇವಲ ನಟನೆ ಜೊತೆಗೆ ನಿರ್ಮಾಪಕ, ಚಿತ್ರಕಥೆಗಾರ ಹಾಗೂ ಗಾಯಕ ಕೂಡ ಹೌದು. ಅವರು ಸುಲಭದಲ್ಲಿ ಪಾತ್ರ ಮಾಡುತ್ತಾರೆ. ಅವರು ವೈಯಕ್ತಿಕ ವಿಚಾರಕ್ಕೆ ಸುದ್ದಿ ಆಗುತ್ತಾ ಇರುತ್ತಾರೆ. 2003ರಲ್ಲಿ ಸಿದ್ದಾರ್ಥ್ ಅವರು ತಮ್ಮ ಬಾಲ್ಯದ ಗೆಳತಿ ಮೇಘನಾ ಅವರನ್ನು ಮದುವೆ ಆದರು. ಆ ಬಳಿಕ ವಿಚ್ಛೇದನ ಪಡೆದರು. ನಂತರ ಹಲವರ ಜೊತೆ ಅವರು ಸುತ್ತಾಡಿದರು.

ತಮಿಳು ನಟ ಸಿದ್ದಾರ್ಥ್ (Siddharth) ಅವರಿಗೆ ಇಂದು (ಏಪ್ರಿಲ್ 17) ಬರ್ತ್ಡೇ. ಅವರಿಗೆ ಎಲ್ಲರೂ ವಿಶ್ ತಿಳಿಸುತ್ತಿದ್ದಾರೆ. ಇತ್ತೀಚೆಗೆ ಸಿದ್ದಾರ್ಥ್ ಅವರು ನಟಿ ಅದಿತಿ ರಾವ್ ಹೈದರಿ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಬಳಿಕ ಅವರ ಮೊದಲ ಬರ್ಥ್ಡೇ. ಇಷ್ಟು ವರ್ಷ ಅದಿತಿ ಅವರು ಲವರ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ತಿಳಿಸುತ್ತಿದ್ದರು. ಈಗ ಭಾವಿ ಪತ್ನಿಯಾಗಿ ಅವರು ಶುಭಾಶಯ ಕೋರಲಿದ್ದಾರೆ. ಈ ವರ್ಷ ಪತಿಯ ಜೊತೆ ಅವರು ಬರ್ತ್ಡೇ ಆಚರಿಸಿಕೊಳ್ಳಲಿದ್ದಾರೆ. ತಮಿಳು ಸಿನಿಮಾಗಳಲ್ಲಿ ನಟಿಸಿ ಸಿದ್ದಾರ್ಥ್ ಗಮನ ಸೆಳೆದಿದ್ದಾರೆ. ಪ್ರೀತಿ ವಿಚಾರಕ್ಕೆ ಸಿದ್ದಾರ್ಥ್ ಸಾಕಷ್ಟು ಸುದ್ದಿ ಆಗಿದ್ದರು.
ಸಿದ್ದಾರ್ಥ್ ಕೇವಲ ನಟ ಮಾತ್ರ ಅಲ್ಲ. ಅವರು ನಿರ್ಮಾಪಕ, ಚಿತ್ರಕಥೆಗಾರ ಹಾಗೂ ಗಾಯಕ. ಅವರು ಸುಲಭದಲ್ಲಿ ಪಾತ್ರದ ಒಳಗೆ ಹೋಗುತ್ತಾರೆ. ಅವರು ವೈಯಕ್ತಿಕ ವಿಚಾರಕ್ಕೆ ಆಗಗ ಸುದ್ದಿ ಆಗುತ್ತಲೇ ಇರುತ್ತಾರೆ. 2003ರಲ್ಲಿ ಸಿದ್ದಾರ್ಥ್ ಅವರು ತಮ್ಮ ಬಾಲ್ಯದ ಗೆಳತಿ ಮೇಘನಾ ಅವರನ್ನು ಮದುವೆ ಆದರು. ಅವರು ದೆಹಲಿ ಮೂಲದವರು. 2007ರಲ್ಲಿ ಇಬ್ಬರೂ ಬೇರೆ ಆದರು. ಇದಕ್ಕೆ ಕಾರಣ ರಿವೀಲ್ ಆಗಿಲ್ಲ. ಸಿದ್ದಾರ್ಥ್ ಸೋಹಾ ಅಲಿ ಖಾನ್, ಶ್ರುತಿ ಹಾಸನ್ ಹಾಗೂ ಸಮಂತಾ ಜೊತೆ ಡೇಟ್ ಮಾಡಿ ಸುದ್ದಿ ಆಗಿದ್ದರು.
ಸೋಹಾ ಅಲಿ ಖಾನ್
ಸಿದ್ದಾರ್ಥ್ ಹಾಗೂ ಮೇಘನಾ ಬೇರೆ ಆಗಲು ಸೋಹಾ ಅಲಿ ಖಾನ್ ಕಾರಣ ಎನ್ನಲಾಗಿತ್ತು. ಸಿದ್ದಾರ್ಥ್ ಹಾಗೂ ಸೋಹಾ ಒಟ್ಟಾಗಿ ಸುತ್ತಾಡಿದ್ದರು ಎನ್ನಲಾಗಿದೆ. ‘ರಂಗ್ ದೇ ಬಸಂತಿ’ ಸಿನಿಮಾದಲ್ಲಿ ಸಿದ್ದಾರ್ಥ್ ಹಾಗೂ ಸೋಹಾ ಒಟ್ಟಾಗಿ ನಟಿಸಿದ್ದರು. ಆದರೆ, ಈ ವಿಚಾರವನ್ನು ಅವರು ಒಪ್ಪಿಕೊಂಡಿಲ್ಲ. ಆ ಬಳಿಕ ಸೋಹಾ ಜೊತೆ ಬ್ರೇಕಪ್ ಮಾಡಿಕೊಂಡರು.
ಶ್ರುತಿ ಹಾಸನ್
ಕಮಲ್ ಹಾಸನ್ ಮಗಳು ಶ್ರುತಿ ಹಾಸನ್ ಸಾಕಷ್ಟು ದೊಡ್ಡ ಮೊಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಅವರ ಜೊತೆಗೂ ಸಿದ್ದಾರ್ಥ್ ಡೇಟಿಂಗ್ ಮಾಡಿದ್ದರು. ಸೋಹಾ ಜೊತೆ ಸಿದ್ದಾರ್ಥ್ ಬ್ರೇಕಪ್ ಮಾಡಿಕೊಂಡ ಬಳಿಕ ಸಿದ್ದಾರ್ಥ್ಗೆ ಶ್ರುತಿ ಹಾಸನ್ ಸಿಕ್ಕರು. ಬ್ರೇಕಪ್ ಆದ ಕೆಲವೇ ತಿಂಗಳಲ್ಲಿ ಸಿದ್ದಾರ್ಥ್ ಅವರು ಶ್ರುತಿ ಹಾಸನ್ ಜೊತೆ ಕಾಣಿಸಿಕೊಳ್ಳಲು ಆರಂಭಿಸಿದರು. 2010ರಲ್ಲಿ ಇವರ ಪರಿಚಯ ಆಯಿತು. ಒಂದು ವರ್ಷ ಇಬ್ಬರೂ ಸುತ್ತಾಡಿದರು. 2011ರ ಮೇ ತಿಂಗಳಲ್ಲಿ ಸಿದ್ದಾರ್ಥ್ ಹಾಗೂ ಶ್ರುತಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಆರಂಭಿಸಿದರು. ಶ್ರುತಿ ತಂದೆ ಕಮಲ್ ಹಾಸನ್ ಕೂಡ ಖುಷಿಯಾಗಿದ್ದರು. ನಂತರ ಕೆಲವೇ ತಿಂಗಳಲ್ಲಿ ಸಿದ್ದಾರ್ಥ್ ಹಾಗೂ ಶ್ರುತಿ ಬೇರೆ ಆದರು. ಅಕ್ಟೋಬರ್ನಲ್ಲಿ ಇವರ ಬ್ರೇಕಪ್ ಆಯಿತು.
ಇದನ್ನೂ ಓದಿ: ಮತ್ತಷ್ಟು ಬೋಲ್ಡ್ ಆದ ನಟಿ ಸಮಂತಾ ರುತ್ ಪ್ರಭು; ಫೋಟೋ ವೈರಲ್
ಸಮಂತಾ
ಸಮಂತಾ ಜೊತೆಯೂ ಸಿದ್ದಾರ್ಥ್ ಸುತ್ತಾಟ ನಡೆಸಿದ್ದರು. ‘ಜಬರ್ದಸ್ತ್’ ಸಿನಿಮಾದ ಸಂದರ್ಭದಲ್ಲಿ ಇವರ ಭೇಟಿ ಆಯಿತು. ಇವರ ರಿಲೇಶನ್ಶಿಪ್ ಎರಡೂವರೆ ವರ್ಷ ಇತ್ತು. ಆದರೆ, ದಿನ ಕಳೆದಂತೆ ಸಿದ್ದಾರ್ಥ್ ಅಸಲಿ ಬಣ್ಣ ಅವರಿಗೆ ತಿಳಿಯಿತು. ಅವರು ಸರಿ ಇಲ್ಲ ಎನ್ನುವ ವಿಚಾರ ತಿಳಿಯಿತು. ಆ ಬಳಿಕ ಬ್ರೇಕಪ್ ಮಾಡಿಕೊಂಡರು. ಸಮಂತಾ ವಿಚ್ಛೇದನ ಪಡೆದುಕೊಂಡ ಬಳಿಕ ಅವರನ್ನು ಟೀಕಿಸಿದ್ದರು ಸಿದ್ದಾರ್ಥ್.
ಮದುವೆ
ಹಲವು ವರ್ಷಗಳ ಕಾಲ ಅದಿತಿ ರಾವ್ ಹೈದರಿ ಹಾಗೂ ಸಿದ್ದಾರ್ಥ್ ಪ್ರೀತಿಸುತ್ತಿದ್ದರು. ಇಬ್ಬರ ಎಂಗೇಜ್ಮೆಂಟ್ ನಡೆದಿದೆ. ಸಿದ್ದಾರ್ಥ್ ಅವರ ಸಂಪೂರ್ಣ ಹಿನ್ನೆಲೆ ತಿಳಿದ ಬಳಿಕವೂ ಅವರು ಯಾವುದೇ ಅಂಜಿಕೆ ಇಲ್ಲದೆ ಮದುವೆ ಆಗಲು ರೆಡಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:49 am, Wed, 17 April 24



