ತಮಿಳಿನ ಖ್ಯಾತ ನಟ ಸಿಂಬು ಆಸ್ಪತ್ರೆಗೆ ದಾಖಲು; ಅಭಿಮಾನಿಗಳಲ್ಲಿ ಆತಂಕ
ಸಿಂಬು ಅವರಿಗೆ ಇಂದು ಅನಾರೋಗ್ಯ ಕಾಡಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊವಿಡ್ ಕಾಣಿಸಿಕೊಂಡಿರಬಹುದು ಎಂದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ವರದಿ ನೆಗೆಟಿವ್ ಬಂದಿದೆ.

ತಮಿಳಿನ ಖ್ಯಾತ ನಟ ಸಿಂಬು ಅವರು ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು (ಡಿಸೆಂಬರ್ 11) ಅವರನ್ನು ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರಿಗೆ ಕೊವಿಡ್ ಅಂಟಿದೆಯೇ ಎನ್ನುವ ಭಯ ಅವರ ಅಭಿಮಾನಿಗಳಲ್ಲಿ ಕಾಡಿತ್ತು. ಆದರೆ, ಕೊವಿಡ್ ಪರೀಕ್ಷೆಯಲ್ಲಿ ಅವರ ವರದಿ ನೆಗೆಟಿವ್ ಬಂದಿದೆ. ಅವರಿಗೆ ವೈರಲ್ ಇನ್ಫೆಕ್ಷನ್ ಆಗಿದೆ ಎಂದು ತಿಳಿದು ಬಂದಿದೆ. ಅವರ ಆರೋಗ್ಯದ ಬಗ್ಗೆ ಆಸ್ಪತ್ರೆ ಕಡೆಯಿಂದ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.
ಸಿಂಬು ಅವರಿಗೆ ಇಂದು ಅನಾರೋಗ್ಯ ಕಾಡಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊವಿಡ್ ಕಾಣಿಸಿಕೊಂಡಿರಬಹುದು ಎಂದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ವರದಿ ನೆಗೆಟಿವ್ ಬಂದಿದೆ. ಆ ಬಳಿಕ ಅವರಿಗೆ ವೈರಲ್ ಇನ್ಫೆಕ್ಷನ್ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಕೋರುತ್ತಿದ್ದಾರೆ.
#SilambarasanTR hospitalised in Chennai, due to a viral infection. It’s not Covid related. Wishing @SilambarasanTR_ a speedy recovery.
— Sreedhar Pillai (@sri50) December 11, 2021
ಕಣ್ಣೀರು ಹಾಕಿದ್ದ ಸಿಂಬು..
ಇತ್ತೀಚೆಗೆ ‘ಮಾನಾಡು’ ಸಿನಿಮಾ ರಿಲೀಸ್ ಆಗಿತ್ತು. ಇದಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾ ರಿಲೀಸ್ ಆಗುವುದಕ್ಕೂ ಮೊದಲೇ ಅವರು ಕಣ್ಣೀರು ಹಾಕಿದ್ದರು. ವೇದಿಕೆಯಲ್ಲಿ ಮಾತು ಆರಂಭಿಸುವಾಗಲೇ ಸಿಂಬು ಎಮೋಷನಲ್ ಆಗಿದ್ದರು. ‘ನಾನು ತುಂಬ ಸಮಸ್ಯೆ ಎದುರಿಸಿದ್ದೇನೆ. ಅವರು ತೊಂದರೆ ಕೊಡುತ್ತಲೇ ಇದ್ದಾರೆ. ಅವೆಲ್ಲವನ್ನೂ ನಾನು ಪರಿಹರಿಸಿಕೊಳ್ಳುತ್ತೇನೆ. ನೀವು ನನ್ನ ಕಾಳಜಿ ವಹಿಸಿ’ ಎಂದು ಅಭಿಮಾನಿಗಳಲ್ಲಿ ಸಿಂಬು ಮನವಿ ಮಾಡಿಕೊಂಡಿದ್ದರು.
ಸಿಂಬು ನಟಿಸಿರುವ ‘ಮಾನಾಡು’ ಚಿತ್ರದಲ್ಲಿ ಟೈಮ್ ಟ್ರಾವೆಲಿಂಗ್ ಕಥೆ ಇದೆ. ಜೊತೆಗೆ ಇಂದಿನ ಕಾಲಘಟ್ಟದ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಕೂಡ ಈ ಚಿತ್ರದಲ್ಲಿ ಆಗಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಕಲ್ಯಾಣಿ ಪ್ರಿಯದರ್ಶನ್, ಎಸ್.ಜೆ. ಸೂರ್ಯ ಮುಂತಾದವರು ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.
ಇದನ್ನೂ ಓದಿ: ಯಾವ ಸ್ಥಿತಿಯಲ್ಲಿದೆ ನೋಡಿ ಡಾ. ರಾಜ್ ಬೆಳೆದ ಮನೆ; ಇದರ ಬಗ್ಗೆ ಪುನೀತ್ ಕಂಡಿದ್ದರು ಕನಸು
Puneeth Rajkumar: ಪುನೀತ್ ಮುಂದಿನ ಚಿತ್ರದ ವಿಡಿಯೋ ತುಣುಕು ರಿಲೀಸ್; ಭಾವುಕರಾದ ಫ್ಯಾನ್ಸ್
Published On - 7:32 pm, Sat, 11 December 21