Deepa Suicide: 29ನೇ ವಯಸ್ಸಿಗೆ ಆತ್ಮಹತ್ಯೆ ಮಾಡಿಕೊಂಡ ನಟಿ ದೀಪಾ; ಫ್ಲಾಟ್​ನಲ್ಲಿ ಪತ್ತೆ ಆಯ್ತು ಮೃತದೇಹ

Actress Deepa Death: ಹಲವು ಬಾರಿ ಫೋನ್​ ಮಾಡಿದಾಗ ದೀಪಾ ಅವರು ಕರೆ ಸ್ವೀಕರಿಸಲಿಲ್ಲ. ಕುಟುಂಬದವರಿಗೆ ಅನುಮಾನ ಬಂದು ನೋಡಿದಾಗ ಅವರ ಮೃತದೇಹ ಕಾಣಿಸಿತು.

Deepa Suicide: 29ನೇ ವಯಸ್ಸಿಗೆ ಆತ್ಮಹತ್ಯೆ ಮಾಡಿಕೊಂಡ ನಟಿ ದೀಪಾ; ಫ್ಲಾಟ್​ನಲ್ಲಿ ಪತ್ತೆ ಆಯ್ತು ಮೃತದೇಹ
ನಟಿ ದೀಪಾ
TV9kannada Web Team

| Edited By: Madan Kumar

Sep 19, 2022 | 8:12 AM

ಚಿತ್ರರಂಗದಲ್ಲಿ ಸಾಧನೆ ಮಾಡಬೇಕು ಎಂದು ಕನಸು ಕಟ್ಟಿಕೊಂಡಿದ್ದ ಯುವ ನಟಿ ದೀಪಾ (Actress Deepa) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರಿಗೆ 29 ವರ್ಷ ವಯಸ್ಸಾಗಿತ್ತು. ಚೆನ್ನೈ ಹೊರವಲಯದ ಅಪಾರ್ಟ್​ಮೆಂಟ್​ನಲ್ಲಿ ಶನಿವಾರ (ಸೆ.17) ಅವರ ಮೃತದೇಹ ಪತ್ತೆ ಆಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ವರದಿಗಾಗಿ ನಿರೀಕ್ಷಿಸಲಾಗುತ್ತಿದೆ. ದೀಪಾ ಅವರ ಮೂಲ ಹೆಸರು ಪಾಲಿನ್​ ಜೆಸ್ಸಿಕಾ (Pauline Jessica). ಆದರೆ ಚಿತ್ರರಂಗದಲ್ಲಿ ಅವರು ದೀಪಾ ಎಂದು ಗುರುತಿಸಿಕೊಂಡಿದ್ದರು. ಹಲವು ಸಿನಿಮಾಗಳಲ್ಲಿ ಅಭಿನಯಿಸಿ ಗುರುತಿಸಿಕೊಳ್ಳುತ್ತಿದ್ದರು. ಆದರೆ ಈಗ ಅವರು ಆತ್ಮಹತ್ಯೆ (Deepa Suicide) ಮಾಡಿಕೊಂಡಿರುವುದು ನೋವಿನ ಸಂಗತಿ.

ಕಳೆದ ಕೆಲವು ದಿನಗಳಿಂದ ದೀಪಾ ಅವರು ತಮ್ಮ ಅಪಾರ್ಟ್​ಮೆಂಟ್​ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಮೂಲಗಳ ಪ್ರಕಾರ, ಪ್ರೀತಿ-ಪ್ರೇಮದ ವಿಚಾರವೇ ಅವರ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ. ದೀಪಾ ಬರೆದಿರುವ ಸೂಸೈಡ್​​ ನೋಟ್​ ಕೂಡ ಪತ್ತೆ ಆಗಿದೆ. ಆದರೆ ಯಾರ ಹೆಸರನ್ನೂ ಅದರಲ್ಲಿ ಅವರು ಪ್ರಸ್ತಾಪಿಸಿಲ್ಲ ಎಂದು ಹೇಳಲಾಗುತ್ತಿದೆ. ಅವರು ಯಾರನ್ನು ಪ್ರೀತಿಸುತ್ತಿದ್ದರು ಎಂಬುದನ್ನು ತಿಳಿಯಲಾಗುತ್ತಿದೆ.

ಹಲವು ಬಾರಿ ಫೋನ್​ ಮಾಡಿದಾಗ ದೀಪಾ ಅವರು ಕರೆ ಸ್ವೀಕರಿಸಲಿಲ್ಲ. ಆಗ ಕುಟುಂಬದವರಿಗೆ ಅನುಮಾನ ಬಂತು. ಅಪಾರ್ಟ್​ಮೆಂಟ್​ಗೆ ಬಂದು ನೋಡಿದಾಗ ಅವರ ಮೃತದೇಹ ಕಾಣಿಸಿತು. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅವರ ಸಾವಿಗೆ ಕಾರಣ ಏನೆಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ತಮಿಳು ಚಿತ್ರರಂಗದಲ್ಲಿ ದೀಪಾ ಅವರು ಈಗತಾನೇ ಗುರುತಿಸಿಕೊಳ್ಳುತ್ತಿದ್ದರು. ಅವರ ಜೊತೆ ಕೆಲಸ ಮಾಡಿದ ಎಲ್ಲರಿಗೂ ಈ ಸಾವಿನ ಸುದ್ದಿ ಶಾಕ್​ ನೀಡಿದೆ. ಅನೇಕ ಆಫರ್​ಗಳು ದೀಪಾ ಅವರ ಕೈಯಲ್ಲಿದ್ದವು ಎಂದು ಹೇಳಲಾಗುತ್ತಿದೆ. ವೈಯಕ್ತಿಕ ಕಾರಣದಿಂದಾಗಿ ಅವರು ಜೀವನ ಅಂತ್ಯ ಮಾಡಿಕೊಂಡಿರುವುದು ಎಲ್ಲರಲ್ಲೂ ಬೇಸರ ಮೂಡಿಸಿದೆ.

ಮಿಸ್ಕಿನ್​ ನಿರ್ದೇಶನದ ‘ತುಪ್ಪರಿವಾಲನ್​’ ಸಿನಿಮಾದಲ್ಲಿ ದೀಪಾ ಅವರು ಒಂದು ಪಾತ್ರ ಮಾಡಿದ್ದರು. ಇದಲ್ಲದೇ ಅನೇಕ ಸಿನಿಮಾಗಳಲ್ಲಿ ಅವರು ಚಿಕ್ಕ-ಪುಟ್ಟ ಪಾತ್ರಗಳನ್ನು ನಿಭಾಯಿಸಿದ್ದರು. ರಿಲೇಷನ್​ಶಿಪ್​ ವಿಚಾರದಲ್ಲಿ ನೊಂದಿದ್ದರಿಂದ ಅವರು ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದರು. ಅದರಿಂದ ಅವರು ಈ ರೀತಿ ಕೆಟ್ಟ ನಿರ್ಧಾರ ತೆಗೆದುಕೊಂಡಿರಬಹುದು ಎನ್ನಲಾಗುತ್ತಿದೆ.

ಬಣ್ಣದ ಲೋಕದಲ್ಲಿ ಬಾಳಿ ಬದುಕಬೇಕಾಗಿದ್ದ ದೀಪಾ ಅವರ ನಿಧನದ ಸುದ್ದಿ ತಿಳಿದು ಇಡೀ ತಮಿಳು ಚಿತ್ರರಂಗಕ್ಕೆ ಆಘಾತ ಆಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಈ ರೀತಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.

ಇದನ್ನೂ ಓದಿ

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada