ಪತಿ ರವೀಂದರ್​ ಚಂದ್ರಶೇಖರನ್​​ ಜತೆ ಮಹಾಲಕ್ಷ್ಮಿ ಹೊಸ ಫೋಟೋ ವೈರಲ್​; ನೆಗೆಟಿವ್​ ಕಮೆಂಟ್​ಗಳ ರಾಶಿ

Mahalakshmi | Ravindar Chandrasekaran: ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್​ ಚಂದ್ರಶೇಖರನ್​ ಅವರ ಫೋಟೋ ವೈರಲ್​ ಆಗಿದೆ. ಇದನ್ನು ಕಂಡು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.

ಪತಿ ರವೀಂದರ್​ ಚಂದ್ರಶೇಖರನ್​​ ಜತೆ ಮಹಾಲಕ್ಷ್ಮಿ ಹೊಸ ಫೋಟೋ ವೈರಲ್​; ನೆಗೆಟಿವ್​ ಕಮೆಂಟ್​ಗಳ ರಾಶಿ
ರವೀಂದರ್ ಚಂದ್ರಶೇಖರನ್, ಮಹಾಲಕ್ಷ್ಮಿ
Follow us
TV9 Web
| Updated By: ಮದನ್​ ಕುಮಾರ್​

Updated on:Jan 17, 2023 | 7:20 PM

ತಮಿಳು ನಟಿ ಮಹಾಲಕ್ಷ್ಮಿ (Mahalakshmi) ಅವರು ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಆಗಾಗ ಟ್ರೋಲ್​ ಆಗುತ್ತಲೇ ಇರುತ್ತಾರೆ. ಅವರು ಮದುವೆ ಆದಾಗಿನಿಂದ ಈ ಸಮಸ್ಯೆ ಶುರುವಾಗಿದೆ. ನಿರ್ಮಾಪಕ ರವೀಂದರ್​ ಚಂದ್ರಶೇಖರನ್​​ (Ravindar Chandrasekaran) ಜೊತೆ 2022ರಲ್ಲಿ ಮಹಾಲಕ್ಷ್ಮಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರ ಜೋಡಿ ಹೊಂದಿಕೆ ಆಗುತ್ತಿಲ್ಲ ಎಂಬ ಕಾರಣ ಅನೇಕರು ಅವರನ್ನು ಟ್ರೋಲ್​ (Ravindar Chandrasekaran Troll) ಮಾಡುತ್ತಿದ್ದಾರೆ. ಹಾಗಂತ ಅದಕ್ಕೆಲ್ಲ ಮಹಾಲಕ್ಷ್ಮಿ ತಲೆ ಕೆಡಿಸಿಕೊಂಡಿಲ್ಲ. ಒಂದಷ್ಟು ಹೊಸ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಲೇ ಇದ್ದಾರೆ. ಆದರೆ ನೆಗೆಟಿವ್​ ಕಮೆಂಟ್​ ಮಾಡುವ ಮಂದಿ ಮಾತ್ರ ಸುಮ್ಮನಾಗಿಲ್ಲ. ಟ್ರೋಲ್​ ಹಾವಳಿ ಮತ್ತೆ ಮರುಕಳಿಸಿದೆ.

ಅನೇಕ ರೀತಿಯಲ್ಲಿ ಮಹಾಲಕ್ಷ್ಮಿ ಮತ್ತು ರವೀಂದರ್​ ಚಂದ್ರಶೇಖರನ್​​ ಅವರು ಫೋಟೋಶೂಟ್​ ಮಾಡಿಸುತ್ತಾರೆ. ಇತ್ತೀಚೆಗೆ ಅವರು ಹಂಚಿಕೊಂಡ ಹೊಸ ಫೋಟೋ ಕೂಡ ಗಮನ ಸೆಳೆಯಿತು. ‘We are not made for each other. We are mad for each other’ ಎಂದು ಕ್ಯಾಪ್ಷನ್​ ನೀಡಿದರು. ಅದನ್ನು ಕಂಡು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್​ ಮಾಡಿದ್ದಾರೆ. ಬಳಿಕ ಮಹಾಲಕ್ಷ್ಮಿ ಅವರು ಈ ಫೋಟೋವನ್ನು ಡಿಲೀಟ್​ ಮಾಡಿದರು. ಆದರೆ ಅನೇಕ ಬೇರೆ ಬೇರೆ ಖಾತೆಗಳಲ್ಲಿ ನೆಟ್ಟಿಗರು ಆ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ
Image
ಖ್ಯಾತ ನಿರ್ಮಾಪಕನ ಜತೆ ಮದುವೆ ಆದ ಕಿರುತೆರೆ ನಟಿ ಮಹಾಲಕ್ಷ್ಮೀ; ‘ನಿಜವಾದ ವಿವಾಹವೇ?’ ಎಂದ ಫ್ಯಾನ್ಸ್
Image
ಯಾಕೆ ನೀನಿನ್ನೂ ಮದುವೆ ಆಗಿಲ್ಲ…ವಿಡಿಯೋ ಮೂಲಕ ಉತ್ತರ ಕೊಟ್ಟ ನಟಿ ರಮ್ಯಾ
Image
Priya Anand: ನಿತ್ಯಾನಂದ ಜತೆ ಮದುವೆ ಆಗ್ತೀನಿ ಅಂತ ‘ಜೇಮ್ಸ್​’ ನಟಿ ಪ್ರಿಯಾ ಆನಂದ್​ ಹೇಳಿದ್ದೇಕೆ?
Image
Pavitra Lokesh: ‘ಸುಚೇಂದ್ರ ಪ್ರಸಾದ್​ ಜತೆ ನನ್ನ ಮದುವೆ ಆಗಿಲ್ಲ, 11 ವರ್ಷ ಒಟ್ಟಿಗೆ ಇದ್ದೆ ಅಷ್ಟೇ’: ನಟಿ ಪವಿತ್ರಾ ಲೋಕೇಶ್​

ಇದನ್ನೂ ಓದಿ: Mahalakshmi: ಮುದ್ದಿನ ಪತ್ನಿ ಮಹಾಲಕ್ಷ್ಮಿಗೆ ದುಬಾರಿ ಗಿಫ್ಟ್​ ನೀಡಿದ್ರಾ ಪತಿ ರವೀಂದರ್ ಚಂದ್ರಶೇಖರನ್​?

ಹಣಕ್ಕಾಗಿಯೇ ರವೀಂದರ್​ ಚಂದ್ರಶೇಖರನ್​​ ಅವರನ್ನು ಮಹಾಲಕ್ಷ್ಮಿ ಮದುವೆ ಆಗಿದ್ದಾರೆ ಎಂದು ಅನೇಕರು ಕಾಲೆಳೆಯುತ್ತಿದ್ದಾರೆ. ‘ದುಡ್ಡಿದ್ದರೆ ಏನು ಬೇಕಾದರೂ ಆಗುತ್ತದೆ’ ಎಂದು ಹಲವರು ಕಮೆಂಟ್​ ಮಾಡಿದ್ದಾರೆ. ಅನೇಕ ಮೀಮ್​ ಪೇಜ್​ಗಳಲ್ಲೂ ಈ ಜೋಡಿಯ ಫೋಟೋ ಬಳಕೆ ಆಗುತ್ತಿದೆ.

ಇದನ್ನೂ ಓದಿ: ‘ನನ್ನ ಗಂಡನಿಗೆ ಅವಮಾನ ಮಾಡಬೇಡಿ’; ಲೈವ್​ ಬಂದು ಟ್ರೋಲಿಗರ ಬಳಿ ಮನವಿ ಮಾಡಿಕೊಂಡ ಮಹಾಲಕ್ಷ್ಮಿ

ಮಹಾಲಕ್ಷ್ಮಿ ಹಾಗೂ ರವೀಂದರ್​ ಚಂದ್ರಶೇಖರನ್​ ಅವರಿಗೆ ಇದು ಎರಡನೇ ಮದುವೆ. ಇಬ್ಬರೂ ಪರಸ್ಪರ ಕೈ ಹಿಡಿಯುವ ಮೂಲಕ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ರವೀಂದರ್​ ಅವರು ಹೆಚ್ಚು ದಪ್ಪ ಇದ್ದಾರೆ ಎಂಬ ಕಾರಣಕ್ಕೆ ಅವರನ್ನು ಒಂದು ವರ್ಗದ ನೆಟ್ಟಿಗರು ಟ್ರೋಲ್​ ಮಾಡುತ್ತಿರುವುದು ಬೇಸರದ ಸಂಗತಿ. ಆ ಬಗ್ಗೆ ಮಹಾಲಕ್ಷ್ಮಿ ಅವರಿಗೆ ಬೇಸರ ಇದೆ. ‘ನನ್ನ ಗಂಡನಿಗೆ ಅವಮಾನ ಮಾಡಬೇಡಿ’ ಎಂದು ಅವರು ಈ ಹಿಂದೆ ಮನವಿ ಮಾಡಿಕೊಂಡಿದ್ದರು.

ಮಹಾಲಕ್ಷ್ಮಿ ಮತ್ತು ರವೀಂದರ್ ಚಂದ್ರಶೇಖರನ್​ ಅವರು ಪರಸ್ಪರ ಪ್ರೀತಿಸುತ್ತಿದ್ದರು ಎಂಬ ವಿಚಾರ ಯಾರಿಗೂ ತಿಳಿದಿರಲಿಲ್ಲ. ಏಕಾಏಕಿ ಮದುವೆ ಆಗುವ ಮೂಲಕ ಕಳೆದ ವರ್ಷ ಅವರಿಬ್ಬರು ಸರ್ಪ್ರೈಸ್​ ನೀಡಿದರು. ಮಹಾಲಕ್ಷ್ಮಿ ಅವರಿಗೆ 32 ವರ್ಷ ವಯಸ್ಸು. 38ರ ಪ್ರಾಯದ ರವೀಂದರ್ ಚಂದ್ರಶೇಖರ್​ ಜತೆ ಅವರ ಕಲ್ಯಾಣ ನೆರವೇರಿದ್ದು, ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:20 pm, Tue, 17 January 23

ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ