‘ನನ್ನ ಗಂಡನಿಗೆ ಅವಮಾನ ಮಾಡಬೇಡಿ’; ಲೈವ್​ ಬಂದು ಟ್ರೋಲಿಗರ ಬಳಿ ಮನವಿ ಮಾಡಿಕೊಂಡ ಮಹಾಲಕ್ಷ್ಮಿ

Mahalakshmi | Ravindar Chandrasekaran: ಮಹಾಲಕ್ಷ್ಮಿ ಹಾಗೂ ರವೀಂದರ್​ ಚಂದ್ರಶೇಖರನ್​ ಅವರು ಬದುಕಿನಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ರವೀಂದರ್​ ಅವರನ್ನು ಒಂದು ವರ್ಗದ ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.

‘ನನ್ನ ಗಂಡನಿಗೆ ಅವಮಾನ ಮಾಡಬೇಡಿ’; ಲೈವ್​ ಬಂದು ಟ್ರೋಲಿಗರ ಬಳಿ ಮನವಿ ಮಾಡಿಕೊಂಡ ಮಹಾಲಕ್ಷ್ಮಿ
ಮಹಾಲಕ್ಷ್ಮೀ, ರವೀಂದರ್ ಚಂದ್ರಶೇಖರನ್
Follow us
TV9 Web
| Updated By: ಮದನ್​ ಕುಮಾರ್​

Updated on: Sep 13, 2022 | 1:11 PM

ತಮಿಳು ನಟಿ-ನಿರೂಪಕಿ ಮಹಾಲಕ್ಷ್ಮಿ (Mahalakshmi) ಹಾಗೂ ನಿರ್ಮಾಪಕ ರವೀಂದರ್​ ಚಂದ್ರಶೇಖರನ್​ (Ravindar Chandrasekaran) ಮದುವೆಯ ಸುದ್ದಿ ಹಾಟ್​ ಟಾಪಿಕ್​ ಆಗಿದೆ. ಕೆಲವೇ ದಿನಗಳ ಹಿಂದೆ ಈ ಜೋಡಿಯ ಕಲ್ಯಾಣ ನೆರವೇರಿತು. ಸೋಶಿಯಲ್​ ಮೀಡಿಯಾದಲ್ಲಿ ಮದುವೆ ಫೋಟೋಗಳು ಸಖತ್​ ವೈರಲ್​ ಆದವು. ಫೋಟೋ ನೋಡಿದ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಅನೇಕ ಮೀಮ್ಸ್​ (Ravindar Chandrasekaran Memes) ಹರಿದಾಡುತ್ತಿವೆ. ಎಲ್ಲದರಲ್ಲೂ ರವೀಂದರ್​ ಚಂದ್ರಶೇಖರನ್​ ಅವರಿಗೆ ಅವಮಾನ ಮಾಡಲಾಗಿದೆ. ಇದು ಮಹಾಲಕ್ಷ್ಮಿ ಅವರ ಗಮನಕ್ಕೂ ಬಂದಿದೆ. ಹಾಗಾಗಿ ಇನ್​ಸ್ಟಾಗ್ರಾಮ್​ನಲ್ಲಿ ಲೈವ್​ ಬಂದಿರುವ ಅವರು ‘ನನ್ನ ಗಂಡನಿಗೆ ಅವಮಾನ ಮಾಡಬೇಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ. ಯಾವ ವ್ಯಕ್ತಿಯನ್ನೂ ಹೀಯಾಳಿಸಬಾರದು ಎಂದು ಮಹಾಲಕ್ಷ್ಮಿ ಹೇಳಿದ್ದಾರೆ.

ಮಹಾಲಕ್ಷ್ಮಿ ಹಾಗೂ ರವೀಂದರ್​ ಚಂದ್ರಶೇಖರನ್​ ಅವರಿಗೆ ಇದು ಎರಡನೇ ಮದುವೆ. ಇಬ್ಬರೂ ಪರಸ್ಪರ ಕೈ ಹಿಡಿಯುವ ಮೂಲಕ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ರವೀಂದರ್​ ಅವರು ಹೆಚ್ಚು ದಪ್ಪ ಇದ್ದಾರೆ ಎಂಬ ಕಾರಣಕ್ಕೆ ಅವರನ್ನು ಒಂದು ವರ್ಗದ ನೆಟ್ಟಿಗರು ಟ್ರೋಲ್​ ಮಾಡುತ್ತಿರುವುದು ಬೇಸರದ ಸಂಗತಿ. ಈ ದಂಪತಿ ಹಂಚಿಕೊಂಡಿರುವ ಫೋಟೋಗಳಿಗೆ ಬಹುತೇಕ ನೆಗೆಟಿವ್​ ಕಮೆಂಟ್​ಗಳು ಬರುತ್ತಿವೆ.

ಮಹಾಲಕ್ಷ್ಮಿ ಮತ್ತು ರವೀಂದರ್ ಚಂದ್ರಶೇಖರನ್​ ಅವರು ಪರಸ್ಪರ ಪ್ರೀತಿಸುತ್ತಿದ್ದರು ಎಂಬ ವಿಚಾರ ಯಾರಿಗೂ ತಿಳಿದಿರಲಿಲ್ಲ. ಏಕಾಏಕಿ ಮದುವೆ ಆಗುವ ಮೂಲಕ ಅವರಿಬ್ಬರು ಸರ್ಪ್ರೈಸ್​ ನೀಡಿದ್ದಾರೆ. ಮಹಾಲಕ್ಷ್ಮಿ ಅವರಿಗೆ 32 ವರ್ಷ ವಯಸ್ಸು. 38ರ ಪ್ರಾಯದ ರವೀಂದರ್ ಚಂದ್ರಶೇಖರ್​ ಜತೆ ಅವರ ಕಲ್ಯಾಣ ನೆರವೇರಿದೆ. ಈಗ ಅವರು ಖಾಸಗಿ ವಿಮಾನದಲ್ಲಿ ಹನಿಮೂನ್​ಗೆ ತೆರಳಿದ್ದಾರೆ ಎಂಬ ಬಗ್ಗೆಯೂ ಸುದ್ದಿ ಹರಿದಾಡುತ್ತಿದೆ. ಆದರೆ ‘ನಾವು ಹೋಗಿದ್ದು ಹನಿಮೂನ್​ಗೆ ಅಲ್ಲ. ದೇವಸ್ಥಾನಕ್ಕೆ ಹೋಗಿದ್ವಿ’ ಎಂದು ರವೀಂದರ್​ ಚಂದ್ರಶೇಖರನ್​ ಹೇಳಿದ್ದಾರೆ.

ಇದನ್ನೂ ಓದಿ
Image
ಖ್ಯಾತ ನಿರ್ಮಾಪಕನ ಜತೆ ಮದುವೆ ಆದ ಕಿರುತೆರೆ ನಟಿ ಮಹಾಲಕ್ಷ್ಮೀ; ‘ನಿಜವಾದ ವಿವಾಹವೇ?’ ಎಂದ ಫ್ಯಾನ್ಸ್
Image
ಯಾಕೆ ನೀನಿನ್ನೂ ಮದುವೆ ಆಗಿಲ್ಲ…ವಿಡಿಯೋ ಮೂಲಕ ಉತ್ತರ ಕೊಟ್ಟ ನಟಿ ರಮ್ಯಾ
Image
Priya Anand: ನಿತ್ಯಾನಂದ ಜತೆ ಮದುವೆ ಆಗ್ತೀನಿ ಅಂತ ‘ಜೇಮ್ಸ್​’ ನಟಿ ಪ್ರಿಯಾ ಆನಂದ್​ ಹೇಳಿದ್ದೇಕೆ?
Image
Pavitra Lokesh: ‘ಸುಚೇಂದ್ರ ಪ್ರಸಾದ್​ ಜತೆ ನನ್ನ ಮದುವೆ ಆಗಿಲ್ಲ, 11 ವರ್ಷ ಒಟ್ಟಿಗೆ ಇದ್ದೆ ಅಷ್ಟೇ’: ನಟಿ ಪವಿತ್ರಾ ಲೋಕೇಶ್​

ಪತ್ನಿ ಮಹಾಲಕ್ಷ್ಮಿಗೆ ರವೀಂದರ್ ಚಂದ್ರಶೇಖರ್​ ಅವರು ದುಬಾರಿ ಗಿಫ್ಟ್​ಗಳನ್ನು ನೀಡಿದ್ದಾರೆ ಎಂಬ ಕುರಿತು ಗುಸುಗುಸು ಕೇಳಿಬರುತ್ತಿದೆ. ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಭರಣ, ಸೀರೆ, ಬಂಗಲೆಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ ಎಂದು ಕೆಲವು ಕಡೆ ಸುದ್ದಿ ಬಿತ್ತರ ಆಗಿದೆ. ಆದರೆ ಈ ವಿಚಾರಗಳ ಬಗ್ಗೆ ಮಹಾಲಕ್ಷ್ಮಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

‘ಫಸ್ಟ್​ಲುಕ್​’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಮಹಾಲಕ್ಷ್ಮಿ ನಟಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರು ಸಕ್ರಿಯರಾಗಿದ್ದಾರೆ. ಪತಿಯ ಜೊತೆ ಇರುವ ಹಲವು ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಿದ್ದಾರೆ. ಮನಸ್ಸಿಗೆ ಬಂದಂತೆ ಟ್ರೋಲ್​ ಮಾಡುವವರ ಬಗ್ಗೆ ಅವರು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.