Emmy Awards 2022: ಯಾರಿಗೆಲ್ಲ ಒಲಿದಿದೆ ಎಮಿ ಅವಾರ್ಡ್ಸ್? ಇಲ್ಲಿದೆ ಪ್ರಮುಖರ ಲಿಸ್ಟ್
Emmy Awards Winners List: ಹಲವು ವಿಭಾಗಗಳಲ್ಲಿ ‘ಎಮಿ ಅವಾರ್ಡ್ಸ್’ ನೀಡಲಾಗಿದೆ. ಲೀ ಜಂಗ್ ಜೇ, ಜೇಸನ್ ಸಡೇಕಿಸ್, ಝಿಂಡೆಯಾ ಮುಂತಾದವರು ಪ್ರಶಸ್ತಿ ಪಡೆದು ಬೀಗಿದ್ದಾರೆ.
ಪ್ರತಿಷ್ಠಿತ ಎಮಿ ಅವಾರ್ಡ್ಸ್ (Emmy Awards 2022) ಸಮಾರಂಭ ಅದ್ದೂರಿಯಾಗಿ ನಡೆದಿದೆ. ಲಾಸ್ ಎಂಜಲೀಸ್ನ ಮೈಕ್ರೋಸಾಫ್ಟ್ ಥಿಯೇಟರ್ನಲ್ಲಿ ಸೋಮವಾರ (ಸೆ.12) ಜರುಗಿದ ಈ ಕಾರ್ಯಕ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಹಲವು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದೆ. ಕಿರುತೆರೆ ಲೋಕದ ಕಲಾವಿದರು ಮತ್ತು ತಂತ್ರಜ್ಞರಿಗೆ ನೀಡುವ ಎಮಿ ಪ್ರಶಸ್ತಿಗೆ (Emmy Awards) ಆಸ್ಕರ್ ರೀತಿಯೇ ಜನಪ್ರಿಯತೆ ಇದೆ. ಈ ಬಾರಿ ಎಚ್ಬಿಒ ವಾಹಿನಿಯ ಕಾರ್ಯಕ್ರಮಗಳಿಗೆ ಹೆಚ್ಚು ಪ್ರಶಸ್ತಿಗಳು ಒಲಿದಿವೆ. ಕಳೆದ 8 ವರ್ಷಗಳಲ್ಲಿ ಎಚ್ಬಿಒ ವಾಹಿನಿ ಈ ರೀತಿ ಹೆಗ್ಗಳಿಕೆಗೆ ಪಾತ್ರವಾಗಿರುವುದು ಇದು ಆರನೇ ಬಾರಿ ಎಂಬುದು ವಿಶೇಷ. ‘ಸಕ್ಸೆಷನ್’ಗೆ ಅತ್ಯುತ್ತಮ ಡ್ರಾಮಾ ಸೀರಿಸ್ ಪ್ರಶಸ್ತಿ ನೀಡಲಾಗಿದೆ. ‘ಟೆಡ್ ಲಾಸೋ’ ಅತ್ಯುತ್ತಮ ಕಾಮಿಡಿ ಸೀರಿಸ್ ಪ್ರಶಸ್ತಿ ಪಡೆದುಕೊಂಡಿದೆ. ‘ಯುಫೋರಿಯಾ’ ಸೀರಿಸ್ನಲ್ಲಿನ ನಟನೆಗಾಗಿ ನಟಿ ಝಿಂಡೆಯಾ (Zendaya) ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ.
30ಕ್ಕೂ ಅಧಿಕ ವಿಭಾಗಗಳಲ್ಲಿ ‘ಎಮಿ ಅವಾರ್ಡ್ಸ್’ ನೀಡಲಾಗಿದೆ. ಡ್ರಾಮಾ ಸೀರಿಸ್ನ ಅತ್ಯುತ್ತಮ ನಟ ಪ್ರಶಸ್ತಿಯನ್ನು ಲೀ ಜಂಗ್ ಜೇ (ಸ್ಕ್ವಿಡ್ ಗೇಮ್) ಪಡೆದುಕೊಂಡಿದ್ದಾರೆ. ಅತ್ಯುತ್ತಮ ಆಂಥಾಲಜಿ ಸೀರಿಸ್ ಪ್ರಶಸ್ತಿಯು ‘ದಿ ವೈಟ್ ಲೋಟಸ್’ ಪಾಲಾಗಿದೆ. ಎಂಜೆ ಡಿಲೇನಿ ಅವರು ಅತ್ಯುತ್ತಮ ಕಾಮಿಡಿ ಸೀರಿಸ್ ನಿರ್ದೇಶನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕಾಮಿಡಿ ಸೀರಿಸ್ನ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಜೀನ್ ಸ್ಮಾರ್ಟ್ ಅವರಿಗೆ ನೀಡಲಾಗಿದೆ.
‘ಸ್ಕ್ವಿಡ್ ಗೇಮ್’ ನಿರ್ದೇಶನಕ್ಕಾಗಿ ‘ಅತ್ಯುತ್ತಮ ಡ್ರಾಮಾ ಸೀರಿಸ್ ನಿರ್ದೇಶಕ’ ಪ್ರಶಸ್ತಿಯನ್ನು ಹ್ವಾಂಗ್ ಡಾಂಗ್ ಹ್ಯೂಕ್ ಅವರು ಪಡೆದುಕೊಂಡಿದ್ದಾರೆ. ಕಾಮಿಡಿ ಸೀರಿಸ್ನ ಅತ್ಯುತ್ತಮ ನಟ ಪ್ರಶಸ್ತಿಯು ಜೇಸನ್ ಸಡೇಕಿಸ್ (ಟೆಡ್ ಲಾಸೋ) ಪಾಲಾಗಿದೆ.
Congratulations to the #Succession cast and crew for their 4 #EmmyAwards wins. pic.twitter.com/R3p9F0ICqj
— Succession (@succession) September 13, 2022
HISTORY MADE ‼️ Hwang Dong-hyuk wins the #Emmy Award for Outstanding Directing For A Drama Series for #SquidGame
? via @GettyImages #Emmys2022 pic.twitter.com/cAmuH6c5iN
— Squid Game (@squidgame) September 13, 2022
‘ಟೆಡ್ ಲಾಸೋ’ ಕಾಮಿಡಿ ಸೀರಿಸ್ನಲ್ಲಿನ ನಟನೆಗಾಗಿ ಬ್ರೆಟ್ ಗೋಲ್ಡ್ಸ್ಟೀನ್ ಅವರು ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಶೆರ್ಲಿ ಲೀ ರಾಲ್ಫ್ ಅವರು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಡ್ರಾಮಾ ಸೀರಿಸ್ನ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯು ಮ್ಯಾಥೀವ್ ಮೆಕ್ಫೆಡೀನ್ (ಸಕ್ಸೆಷನ್) ಅವರಿಗೆ ಸಿಕ್ಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.