ತಮಿಳು ನಟಿ ಮಹಾಲಕ್ಷ್ಮಿ (Mahalakshmi) ಅವರು ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಆಗಾಗ ಟ್ರೋಲ್ ಆಗುತ್ತಲೇ ಇರುತ್ತಾರೆ. ಅವರು ಮದುವೆ ಆದಾಗಿನಿಂದ ಈ ಸಮಸ್ಯೆ ಶುರುವಾಗಿದೆ. ನಿರ್ಮಾಪಕ ರವೀಂದರ್ ಚಂದ್ರಶೇಖರನ್ (Ravindar Chandrasekaran) ಜೊತೆ 2022ರಲ್ಲಿ ಮಹಾಲಕ್ಷ್ಮಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರ ಜೋಡಿ ಹೊಂದಿಕೆ ಆಗುತ್ತಿಲ್ಲ ಎಂಬ ಕಾರಣ ಅನೇಕರು ಅವರನ್ನು ಟ್ರೋಲ್ (Ravindar Chandrasekaran Troll) ಮಾಡುತ್ತಿದ್ದಾರೆ. ಹಾಗಂತ ಅದಕ್ಕೆಲ್ಲ ಮಹಾಲಕ್ಷ್ಮಿ ತಲೆ ಕೆಡಿಸಿಕೊಂಡಿಲ್ಲ. ಒಂದಷ್ಟು ಹೊಸ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಲೇ ಇದ್ದಾರೆ. ಆದರೆ ನೆಗೆಟಿವ್ ಕಮೆಂಟ್ ಮಾಡುವ ಮಂದಿ ಮಾತ್ರ ಸುಮ್ಮನಾಗಿಲ್ಲ. ಟ್ರೋಲ್ ಹಾವಳಿ ಮತ್ತೆ ಮರುಕಳಿಸಿದೆ.
ಅನೇಕ ರೀತಿಯಲ್ಲಿ ಮಹಾಲಕ್ಷ್ಮಿ ಮತ್ತು ರವೀಂದರ್ ಚಂದ್ರಶೇಖರನ್ ಅವರು ಫೋಟೋಶೂಟ್ ಮಾಡಿಸುತ್ತಾರೆ. ಇತ್ತೀಚೆಗೆ ಅವರು ಹಂಚಿಕೊಂಡ ಹೊಸ ಫೋಟೋ ಕೂಡ ಗಮನ ಸೆಳೆಯಿತು. ‘We are not made for each other. We are mad for each other’ ಎಂದು ಕ್ಯಾಪ್ಷನ್ ನೀಡಿದರು. ಅದನ್ನು ಕಂಡು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ಬಳಿಕ ಮಹಾಲಕ್ಷ್ಮಿ ಅವರು ಈ ಫೋಟೋವನ್ನು ಡಿಲೀಟ್ ಮಾಡಿದರು. ಆದರೆ ಅನೇಕ ಬೇರೆ ಬೇರೆ ಖಾತೆಗಳಲ್ಲಿ ನೆಟ್ಟಿಗರು ಆ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Mahalakshmi: ಮುದ್ದಿನ ಪತ್ನಿ ಮಹಾಲಕ್ಷ್ಮಿಗೆ ದುಬಾರಿ ಗಿಫ್ಟ್ ನೀಡಿದ್ರಾ ಪತಿ ರವೀಂದರ್ ಚಂದ್ರಶೇಖರನ್?
ಹಣಕ್ಕಾಗಿಯೇ ರವೀಂದರ್ ಚಂದ್ರಶೇಖರನ್ ಅವರನ್ನು ಮಹಾಲಕ್ಷ್ಮಿ ಮದುವೆ ಆಗಿದ್ದಾರೆ ಎಂದು ಅನೇಕರು ಕಾಲೆಳೆಯುತ್ತಿದ್ದಾರೆ. ‘ದುಡ್ಡಿದ್ದರೆ ಏನು ಬೇಕಾದರೂ ಆಗುತ್ತದೆ’ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಅನೇಕ ಮೀಮ್ ಪೇಜ್ಗಳಲ್ಲೂ ಈ ಜೋಡಿಯ ಫೋಟೋ ಬಳಕೆ ಆಗುತ್ತಿದೆ.
ಇದನ್ನೂ ಓದಿ: ‘ನನ್ನ ಗಂಡನಿಗೆ ಅವಮಾನ ಮಾಡಬೇಡಿ’; ಲೈವ್ ಬಂದು ಟ್ರೋಲಿಗರ ಬಳಿ ಮನವಿ ಮಾಡಿಕೊಂಡ ಮಹಾಲಕ್ಷ್ಮಿ
ಮಹಾಲಕ್ಷ್ಮಿ ಹಾಗೂ ರವೀಂದರ್ ಚಂದ್ರಶೇಖರನ್ ಅವರಿಗೆ ಇದು ಎರಡನೇ ಮದುವೆ. ಇಬ್ಬರೂ ಪರಸ್ಪರ ಕೈ ಹಿಡಿಯುವ ಮೂಲಕ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ರವೀಂದರ್ ಅವರು ಹೆಚ್ಚು ದಪ್ಪ ಇದ್ದಾರೆ ಎಂಬ ಕಾರಣಕ್ಕೆ ಅವರನ್ನು ಒಂದು ವರ್ಗದ ನೆಟ್ಟಿಗರು ಟ್ರೋಲ್ ಮಾಡುತ್ತಿರುವುದು ಬೇಸರದ ಸಂಗತಿ. ಆ ಬಗ್ಗೆ ಮಹಾಲಕ್ಷ್ಮಿ ಅವರಿಗೆ ಬೇಸರ ಇದೆ. ‘ನನ್ನ ಗಂಡನಿಗೆ ಅವಮಾನ ಮಾಡಬೇಡಿ’ ಎಂದು ಅವರು ಈ ಹಿಂದೆ ಮನವಿ ಮಾಡಿಕೊಂಡಿದ್ದರು.
ಮಹಾಲಕ್ಷ್ಮಿ ಮತ್ತು ರವೀಂದರ್ ಚಂದ್ರಶೇಖರನ್ ಅವರು ಪರಸ್ಪರ ಪ್ರೀತಿಸುತ್ತಿದ್ದರು ಎಂಬ ವಿಚಾರ ಯಾರಿಗೂ ತಿಳಿದಿರಲಿಲ್ಲ. ಏಕಾಏಕಿ ಮದುವೆ ಆಗುವ ಮೂಲಕ ಕಳೆದ ವರ್ಷ ಅವರಿಬ್ಬರು ಸರ್ಪ್ರೈಸ್ ನೀಡಿದರು. ಮಹಾಲಕ್ಷ್ಮಿ ಅವರಿಗೆ 32 ವರ್ಷ ವಯಸ್ಸು. 38ರ ಪ್ರಾಯದ ರವೀಂದರ್ ಚಂದ್ರಶೇಖರ್ ಜತೆ ಅವರ ಕಲ್ಯಾಣ ನೆರವೇರಿದ್ದು, ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:20 pm, Tue, 17 January 23