AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತ ನಿರ್ದೇಶಕ ಲಿಂಗುಸ್ವಾಮಿಗೆ 6 ತಿಂಗಳು ಜೈಲು ಶಿಕ್ಷೆ; ಮಾಡಿದ ಅಪರಾಧವೇನು?

Lingusamy | Imprisonment: ಹಲವು ವರ್ಷಗಳಿಂದ ಲಿಂಗುಸ್ವಾಮಿ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ.

ಖ್ಯಾತ ನಿರ್ದೇಶಕ ಲಿಂಗುಸ್ವಾಮಿಗೆ 6 ತಿಂಗಳು ಜೈಲು ಶಿಕ್ಷೆ; ಮಾಡಿದ ಅಪರಾಧವೇನು?
ನಿರ್ದೇಶಕ ಲಿಂಗುಸ್ವಾಮಿ
TV9 Web
| Edited By: |

Updated on:Aug 23, 2022 | 7:27 AM

Share

ಕೋಟ್ಯಂತರ ರೂಪಾಯಿ ವಹಿವಾಟು ನಡೆಯುವ ಚಿತ್ರೋದ್ಯಮದಲ್ಲಿ ಕೆಲವೊಮ್ಮೆ ವ್ಯವಹಾರದಲ್ಲಿ ಎಡವಟ್ಟು ಆಗುತ್ತದೆ. ಅದರಿಂದ ಕಾನೂನಿನ ಸಂಕಷ್ಟ ಕೂಡ ಎದುರಾಗುವ ಸಾಧ್ಯತೆ ಇರುತ್ತದೆ. ಈಗ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಲಿಂಗುಸ್ವಾಮಿ (Lingusamy) ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋಟ್ಯಂತರ ರೂಪಾಯಿ ಸಾಲ ಪಡೆದು, ಹಣ ಹಿಂದಿರುಗಿಸದೇ ಅವರು ಕಿರಿಕ್​ ಮಾಡಿಕೊಂಡಿದ್ದಾರೆ. ಚೆಕ್​ ಬೌನ್ಸ್​ (Cheque Bounce) ಪ್ರಕರಣದಲ್ಲಿ ಅವರು ಅಪರಾಧ ಮಾಡಿರುವುದು ಸಾಬೀತಾಗಿದ್ದು, 6 ತಿಂಗಳು ಜೈಲು ಶಿಕ್ಷೆ (Imprisonment) ವಿಧಿಸಲಾಗಿದೆ. ಅವರ ಜೊತೆಗೆ ಸಹೋದರ ಸುಭಾಷ್​ ಚಂದ್ರ ಬೋಸ್​ ಅವರಿಗೂ ಅದೇ ಶಿಕ್ಷೆ ಪ್ರಕಟಿಸಲಾಗಿದೆ. ಮೆಟ್ರೋಪಾಲಿಟನ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ ನೀಡಿರುವ ಈ ತೀರ್ಪನ್ನು ಪ್ರಶ್ನಿಸಿ ನಿರ್ದೇಶಕ ಲಿಂಗುಸ್ವಾಮಿ ಅವರು ಮೇಲ್ಮನವಿ ಸಲ್ಲಿಸಲಿದ್ದಾರೆ ಎಂಬುದು ತಿಳಿದುಬಂದಿದೆ.

ಹಲವು ವರ್ಷಗಳಿಂದ ಲಿಂಗುಸ್ವಾಮಿ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಸಹೋದರನ ಜೊತೆಗೂಡಿ ಅವರು ಸಿನಿಮಾ ನಿರ್ಮಾಣ ಸಂಸ್ಥೆಯನ್ನೂ ನಡೆಸುತ್ತಿದ್ದಾರೆ. ‘ಆನಂದಂ’, ‘ರನ್​’, ‘ಸಂಡಕೋಳಿ’, ‘ಭೀಮ’, ‘ಪೈಯಾ’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇತ್ತೀಚೆಗೆ ಅವರು ನಿರ್ದೇಶನ ಮಾಡಿದ ‘ದಿ ವಾರಿಯರ್​’ ಚಿತ್ರ ಕೂಡ ಗಮನ ಸೆಳೆದಿದೆ. ಇದರ ನಡುವೆ ಅವರ ವೃತ್ತಿಜೀವನಕ್ಕೆ ಚೆಕ್​ ಬೌನ್ಸ್​ ಪ್ರಕರಣದಿಂದ ಕಪ್ಪು ಚುಕ್ಕಿ ಬಿದ್ದಂತಾಗಿದೆ.

‘ಎನ್ನಿ ಏಳು ನಾಲ್​’ ಸಿನಿಮಾ ಸಲುವಾಗಿ ಲಿಂಗುಸ್ವಾಮಿ ಮತ್ತು ಸುಭಾಷ್​ ಚಂದ್ರ ಬೋಸ್​ ಅವರು ಪಿವಿಪಿ ಎಂಬ ಕಂಪನಿಯಿಂದ 1.03 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಸಾಲ ವಾಪಸ್​ ನೀಡುವಾಗ 35 ಲಕ್ಷ ರೂಪಾಯಿ ಚೆಕ್​ ನೀಡಿದ್ದರು. ಆದರೆ ಅವರ ಬ್ಯಾಂಕ್​ ಖಾತೆಯಲ್ಲಿ ಅಗತ್ಯ ಹಣ ಇಲ್ಲದ ಕಾರಣ ಚೆಕ್​ ಬೌನ್ಸ್​ ಆಗಿದೆ. ಈ ಸಂಬಂಧ ಪಿವಿಪಿ ಕಂಪನಿಯವರು ಕೋರ್ಟ್​ ಮೆಟ್ಟಲು ಏರಿದರು. ಈ ಪ್ರಕರಣದ ತೀರ್ಪು ಬಂದಿದ್ದು, ಲಿಂಗುಸ್ವಾಮಿ ಮತ್ತು ಅವರ ಸಹೋದರನಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.

ಇದನ್ನೂ ಓದಿ
Image
ರಜನಿಕಾಂತ್ ಪತ್ನಿ ಲತಾಗೆ ಎದುರಾಯ್ತು ಸಂಕಷ್ಟ; ಫೋರ್ಜರಿ ಕೇಸ್ ಮುಂದುವರಿಸಲು ಕರ್ನಾಟಕ ಹೈಕೋರ್ಟ್ ಅಸ್ತು
Image
RGV: ತಮ್ಮ ಸಹಿ ಫೋರ್ಜರಿ ಮಾಡಲಾಗಿದೆ ಎಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ ರಾಮ್ ಗೋಪಾಲ್ ವರ್ಮಾ; ಏನಿದು ಪ್ರಕರಣ?
Image
ರಮೇಶ್ ಜಾರಕಿಹೊಳಿಗೆ ಮತ್ತೊಂದು ಸಂಕಷ್ಟ: ಚೆಕ್​ ಬೌನ್ಸ್​ ಕೇಸ್​ಗೆ ಮರುಜೀವ
Image
ಹಿರಿಯ ನಟಿ ಪದ್ಮಜಾ ರಾವ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ

ಲಿಂಗುಸ್ವಾಮಿ ಅವರು ‘ತಿರುಪತಿ ಬ್ರದರ್ಸ್​’ ಎಂಬ ಸಂಸ್ಥೆಯನ್ನು ಹೊಂದಿದ್ದಾರೆ. ಇದರ ಮೂಲಕ ಅನೇಕ ಸಿನಿಮಾಗಳನ್ನು ನಿರ್ಮಿಸಿದ್ದಾರೆ ಮತ್ತು ವಿತರಣೆ ಮಾಡಿದ್ದಾರೆ. ಕೆಲವು ಸಿನಿಮಾಗಳಿಂದ ಅವರಿಗೆ ನಷ್ಟ ಆಯಿತು. ಈಗ ಲಿಂಗುಸ್ವಾಮಿ ಅವರಿಗೆ ಜೈಲುವಾಸದ ಭೀತಿ ಎದುರಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:27 am, Tue, 23 August 22