Sign In

By signing in or creating an account, you agree with Associated Broadcasting Company's Terms & Conditions and Privacy Policy.

Daali Dhananjay: ಬರ್ತ್​ಡೇ ಹುಡುಗ ಧನಂಜಯ್ ಕೈಯಲ್ಲಿವೆ ಏಳು ಚಿತ್ರಗಳು; ಎಲ್ಲವೂ ಒಂದಕ್ಕಿಂತ ಒಂದು ಭಿನ್ನ

Dhananjay Birthday: ಧನಂಜಯ್ ‘ಜಯನಗರ 4th ಬ್ಲಾಕ್’ ಶಾರ್ಟ್​ ಮೂವೀ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಇದರಿಂದ ಅವರಿಗೆ ಜನಪ್ರಿಯತೆ ಸಿಕ್ಕಿತು. ‘ಡೈರೆಕ್ಟರ್ಸ್ ಸ್ಪೆಷಲ್’ ಸಿನಿಮಾ ಮೂಲಕ ಧನಂಜಯ್ ಹಿರಿತೆರೆಗೆ ಕಾಲಿಟ್ಟರು. ನಂತರ ಅವರು ಹಲವು ಚಿತ್ರಗಳಲ್ಲಿ ನಟಿಸಿದರು.

Daali Dhananjay: ಬರ್ತ್​ಡೇ ಹುಡುಗ ಧನಂಜಯ್ ಕೈಯಲ್ಲಿವೆ ಏಳು ಚಿತ್ರಗಳು; ಎಲ್ಲವೂ ಒಂದಕ್ಕಿಂತ ಒಂದು ಭಿನ್ನ
ಧನಂಜಯ್
Follow us
TV9 Web
| Updated By: ಮದನ್​ ಕುಮಾರ್​

Updated on: Aug 23, 2022 | 7:32 AM

ಡಾಲಿ ಧನಂಜಯ್ (Dhananjay) ಅವರು ಇಂದು (ಆಗಸ್ಟ್ 23) 36ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರು ಈ ಬಾರಿ ಸಾರ್ವಜನಿಕವಾಗಿ ಬರ್ತ್​​ಡೇ (Dhananjay Birthday) ಆಚರಿಸಿಕೊಳ್ಳುತ್ತಿಲ್ಲ. ಧನಂಜಯ್ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ನೆಚ್ಚಿನ ನಟನಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಹಲವು ಸೆಲೆಬ್ರಿಟಿಗಳು ಡಾಲಿಗೆ ಬರ್ತ್​ಡೇ ಶುಭಾಶಯ ತಿಳಿಸುತ್ತಿದ್ದಾರೆ. ಸದ್ಯ ಧನಂಜಯ್ ಕೈಯಲ್ಲಿ ಏಳಕ್ಕೂ ಹೆಚ್ಚು ಸಿನಿಮಾಗಳು ಇವೆ. ಸ್ಯಾಂಡಲ್​ವುಡ್​ನ ಬ್ಯುಸಿ ಹೀರೋಗಳ ಪೈಕಿ ಧನಂಜಯ್ ಮುಂಚೂಣಿಯಲ್ಲಿ ಇದ್ದಾರೆ.

ಧನಂಜಯ್ ‘ಜಯನಗರ 4th ಬ್ಲಾಕ್’ ಶಾರ್ಟ್​ ಮೂವಿ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಇದರಿಂದ ಅವರಿಗೆ ಜನಪ್ರಿಯತೆ ಸಿಕ್ಕಿತು. ‘ಡೈರೆಕ್ಟರ್ಸ್ ಸ್ಪೆಷಲ್’ ಸಿನಿಮಾ ಮೂಲಕ ಧನಂಜಯ್ ಹಿರಿತೆರೆಗೆ ಕಾಲಿಟ್ಟರು. ನಂತರ ಅವರು ಹಲವು ಚಿತ್ರಗಳಲ್ಲಿ ನಟಿಸಿದರು. ಸುಮಾರು ಐದು ವರ್ಷಗಳ ಕಾಲ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸಿದರು.

2018ರಲ್ಲಿ ತೆರೆಗೆ ಬಂದ ‘ಟಗರು’ ಚಿತ್ರದಲ್ಲಿ ಧನಂಜಯ್ ವಿಲನ್ ಪಾತ್ರ ಮಾಡಿದರು. ಈ ಚಿತ್ರದ ಮೂಲಕ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ಧನಂಜಯ್ ಅವರು ಡಾಲಿ ಎಂದೇ ಫೇಮಸ್ ಆದರು. 2021ರಲ್ಲಿ ಅವರ ನಟನೆಯ 6 ಸಿನಿಮಾಗಳು ರಿಲೀಸ್ ಆದವು ಅನ್ನೋದು ವಿಶೇಷ. ‘ಪುಷ್ಪ’ ಚಿತ್ರದ ಮೂಲಕ ಅವರು ಟಾಲಿವುಡ್​ನಲ್ಲಿ ಸಖತ್ ಜನಪ್ರಿಯತೆ ಪಡೆದರು.

ಇದನ್ನೂ ಓದಿ
Image
ರವಿಚಂದ್ರನ್​ ಬಳಿಕ ರಚಿತಾ ರಾಮ್​ ಕಿಡ್ನಾಪ್​; ಈ ಡ್ರಾಮಾದ ಹೊಣೆ ಹೊತ್ತುಕೊಂಡ ಹಿರಿಯ ನಟಿ ಲಕ್ಷ್ಮೀ
Image
‘ಮ್ಯಾಟ್ನಿ’ ಶೂಟಿಂಗ್​ ಸೆಟ್​​ನಲ್ಲಿ ಸತೀಶ್​ ‘ನೀನಾಸಂ’, ರಚಿತಾ ರಾಮ್​; ಇಲ್ಲಿವೆ ಫೋಟೋಗಳು
Image
‘ನನಗೆ ಐಪಿಎಸ್​ ಮಾಡಬೇಕು ಎನ್ನುವ ಆಸೆ ಇತ್ತು’; ರಚಿತಾ ರಾಮ್​
Image
‘ಪ್ರೀತಿ ತೋರಿಸೋ ನಮಗೆ ಬೆನ್ನಿಗೆ ಚೂರಿ ಹಾಕೋ ಕೆಲಸ ಮಾಡ್ದಾಗ ಬೇಜಾರಾಗತ್ತೆ’: ರಚಿತಾ ರಾಮ್​

ಸದ್ಯ ಏಳು ಸಿನಿಮಾಗಳಲ್ಲಿ ಧನಂಜಯ್ ಬ್ಯುಸಿ ಇದ್ದಾರೆ. ಎಲ್ಲಾ ಸಿನಿಮಾಗಲ್ಲಿ ಅವರ ಪಾತ್ರ ಒಂದಕ್ಕಿಂತ ಒಂದು ಭಿನ್ನವಾಗಿದೆ. ಡಾಲಿ ನಟನೆಯ ‘ಹೆಡ್​ ಬುಷ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದಲ್ಲಿ ಡಾನ್ ಜಯರಾಜ್ ಪಾತ್ರವನ್ನು ಅವರು ಮಾಡುತ್ತಿದ್ದಾರೆ. ‘ಹೊಯ್ಸಳ’, ‘ಪುಷ್ಪ 2’ ಮೊದಲಾದ ಸಿನಿಮಾಗಳಲ್ಲಿ ಧನಂಜಯ್ ಬ್ಯುಸಿ ಇದ್ದಾರೆ.

ಇದನ್ನೂ ಓದಿ: ‘ರಾಷ್ಟ್ರ ಪ್ರಶಸ್ತಿ’ ಪುರಸ್ಕೃತ ‘ಡೊಳ್ಳು’ ಚಿತ್ರದ ಮೊದಲ ಹಾಡು ರಿಲೀಸ್​ ಮಾಡಿದ ಡಾಲಿ ಧನಂಜಯ್​

ಹುಟ್ಟುಹಬ್ಬ ಆಚರಣೆ ಇಲ್ಲ:

ಪುನೀತ್ ರಾಜ್​ಕುಮಾರ್ ನಿಧನ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಇನ್ನೂ ಸೂತಕದ ಛಾಯೆ ಇದೆ. ಈ ಕಾರಣಕ್ಕೆ ಧನಂಜಯ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ‘ಬರ್ತ್​ಡೇಗೂ ಮೊದಲೇ ಸೆಲೆಬ್ರೇಷನ್ ಆರಂಭಿಸುತ್ತೀರಿ. ಬೇರೆಬೇರೆ ಕಡೆ ನನ್ನ ಹೆಸರಲ್ಲಿ ಸಾಮಾಜಿಕ ಕೆಲಸ ಮಾಡುತ್ತಿದ್ದೀರಿ. ಕಳೆದ ಎರಡು ವರ್ಷಗಳಿಂದ ಕೊವಿಡ್ ಕಾರಣಕ್ಕೆ ಬರ್ತ್​​ಡೇ ಆಚರಣೆ ಸಾಧ್ಯವಾಗಿಲ್ಲ. ಈ ವರ್ಷವೂ ಬರ್ತ್​​ಡೇ ಆಚರಿಸಿಕೊಳ್ಳುವ ಸ್ಥಿತಿಯಲ್ಲಿ ನಾನು ಇಲ್ಲ. ಅಪ್ಪು ಅಗಲಿ ಒಂದು ವರ್ಷವೂ ಆಗಿಲ್ಲ. ಶಿವಣ್ಣ ಕೂಡ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಈ ವರ್ಷವೂ ಆಚರಿಸಲು ಆಗುತ್ತಿಲ್ಲ, ದಯವಿಟ್ಟು ಕ್ಷಮಿಸಿಬಿಡಿ. ಒಳ್ಳೆಯ ಕೆಲಸಗಳ ಮೂಲಕ ನನ್ನ ಹುಟ್ಟುಹಬ್ಬ ಆಚರಿಸಿ. ಎಲ್ಲಿ ಇದ್ದೀರೋ ಅಲ್ಲಿಂದಲೇ ಹರಿಸಿ. ನನ್ನ ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ದುಡ್ಡನ್ನು ಒಳ್ಳೆಯ ಕೆಲಸಕ್ಕೆ ಬಳಸಿ’ ಎಂದು ಕೋರಿದ್ದಾರೆ ಅವರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಲಾರಿಗೆ ಡಿಕ್ಕಿ ಹೊಡೆದ ಮುಂಬೈ- ಅಮರಾವತಿ ಎಕ್ಸ್​ಪ್ರೆಸ್​ ರೈಲು
ಲಾರಿಗೆ ಡಿಕ್ಕಿ ಹೊಡೆದ ಮುಂಬೈ- ಅಮರಾವತಿ ಎಕ್ಸ್​ಪ್ರೆಸ್​ ರೈಲು
ಮಹಿಳೆಯೊಂದಿಗೆ ಕಿರಿಕ್​:ಪುಂಡರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ ಪೊಲೀಸ್
ಮಹಿಳೆಯೊಂದಿಗೆ ಕಿರಿಕ್​:ಪುಂಡರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ ಪೊಲೀಸ್
ಚಿಕ್ಕಬಳ್ಳಾಪುರ: ಹೊತ್ತಿ ಉರಿದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು
ಚಿಕ್ಕಬಳ್ಳಾಪುರ: ಹೊತ್ತಿ ಉರಿದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು
ನಿಂತುಹೋಗಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಕೋರಿದೆ: ರೇಣುಕಾಚಾರ್ಯ
ನಿಂತುಹೋಗಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಕೋರಿದೆ: ರೇಣುಕಾಚಾರ್ಯ
ವಿದ್ಯಾರ್ಥಿಗಳ ಕಳಪೆ ಪ್ರದರ್ಶನ, ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡ ಶಿಕ್ಷಕರು
ವಿದ್ಯಾರ್ಥಿಗಳ ಕಳಪೆ ಪ್ರದರ್ಶನ, ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡ ಶಿಕ್ಷಕರು
ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಯಾ ಇಲಾಖೆ ಅಧಿಕಾರಿಗಳು ಜವಾಬ್ದಾರರು:ಖಾದರ್
ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಯಾ ಇಲಾಖೆ ಅಧಿಕಾರಿಗಳು ಜವಾಬ್ದಾರರು:ಖಾದರ್
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್
ಕಾರಿಗೆ ಸಿಲುಕಿ ಮಹಿಳೆ ಮೃತಪಟ್ಟರೂ ಪಶ್ಚಾತಾಪವಿಲ್ಲದೆ ದರ್ಪ ತೋರಿದ ಯುವಕ
ಕಾರಿಗೆ ಸಿಲುಕಿ ಮಹಿಳೆ ಮೃತಪಟ್ಟರೂ ಪಶ್ಚಾತಾಪವಿಲ್ಲದೆ ದರ್ಪ ತೋರಿದ ಯುವಕ