ಜೂ ಎನ್​ಟಿಆರ್ ವಿರುದ್ಧ ಚಂದ್ರಬಾಬು ನಾಯ್ಡು ಶಿಷ್ಯನ ಹೇಳಿಕೆ

ಜೂ ಎನ್​ಟಿಆರ್ ತಾವಾಯಿತು ತನ್ನ ಸಿನಿಮಾಗಳಾಯಿತು ಎಂದು ಆರಾಮವಾಗಿದ್ದಾರೆ. ಆದರೆ ಅವರ ಹೆಸರು ಮಾತ್ರ ಆಂಧ್ರ ರಾಜಕೀಯದಲ್ಲಿ ಪದೇ ಪದೇ ಚರ್ಚೆಗೆ ಬರುತ್ತಲೇ ಇರುತ್ತದೆ. ಇದೀಗ ಚಂದ್ರಬಾಬು ನಾಯ್ಡು ಆಪ್ತರೊಬ್ಬರು ಜೂ ಎನ್​ಟಿಆರ್​ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಜೂ ಎನ್​ಟಿಆರ್ ವಿರುದ್ಧ ಚಂದ್ರಬಾಬು ನಾಯ್ಡು ಶಿಷ್ಯನ ಹೇಳಿಕೆ
Follow us
ಮಂಜುನಾಥ ಸಿ.
|

Updated on: Aug 22, 2024 | 7:05 PM

ನಟ ಜೂ ಎನ್​ಟಿಆರ್, ತಾವಾಯಿತು ತಮ್ಮ ಸಿನಿಮಾ ಕೆಲಸವಾಯಿತು ಎಂದು ಆರಾಮವಾಗಿದ್ದಾರೆ. ರಾಜಕೀಯದಿಂದ ದೂರವೇ ಉಳಿದು ಬಿಟ್ಟಿದ್ದಾರೆ. ಹಾಗಿದ್ದರೂ ಸಹ ಆಂಧ್ರ ಪ್ರದೇಶ ರಾಜಕೀಯದಲ್ಲಿ ಜೂ ಎನ್​ಟಿಆರ್ ಹೆಸರು ಜೋರಾಗಿ ಕೇಳಿ ಬರುತ್ತಲೇ ಇರುತ್ತದೆ. ನಂದಮೂರಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಬಂದಮೇಲಂತೂ ಆಗೆಲ್ಲ ಜೂ ಎನ್​ಟಿಆರ್ ಅನ್ನು ಹೆಗಲ ಮೇಲೆ ಹೊತ್ತು ಮೆರೆಸಿದವರೇ ಈಗ ಜೂ ಎನ್​ಟಿಆರ್ ವಿರುದ್ಧ ಮಾತನಾಡಲು ಆರಂಭಿಸಿದ್ದಾರೆ.

ಟಿಡಿಪಿ ಮುಖಂಡ ಹಾಗೂ ಮಾಜಿ ಎಂಎಲ್​ಸಿ, ಚಂದ್ರಬಾಬು ನಾಯ್ಡು ಅವರ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳುವ ಬುದ್ಧ ವೆಂಕನ್ನ, ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ಜೂ ಎನ್​ಟಿಆರ್​ಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ಮಾತ್ರವಲ್ಲದೆ ‘ಸೀನಿಯರ್​ ಎನ್​ಟಿಆರ್​ ಗೆ ಬಹಳ ಮಂದಿ ಮೊಮ್ಮಕ್ಕಳಿದ್ದಾರೆ’ ಎಂದು ಹೇಳಿದ್ದಾರೆ. ಆ ಮೂಲಕ ಜೂ ಎನ್​ಟಿಆರ್, ನಂದಮೂರಿ ಕುಟುಂಬಕ್ಕೆ ಸೇರಿದವರಲ್ಲ ಎಂಬರ್ಥದ ಮಾತುಗಳನ್ನಾಡಿದ್ದಾರೆ.

ಸಂದರ್ಶನದಲ್ಲಿ ಮಾತನಾಡುತ್ತಾ, ತಾವು ನಂದಮೂರಿ ಕುಟುಂಬದ ಬೆಂಬಲಿಗನಾಗಿರುತ್ತೇನೆ ಎಂದ ಬುದ್ಧ ವೆಂಕನ್ನ, ‘ಚಂದ್ರಬಾಬು ನಾಯ್ಡು ನಾಯಕತ್ವ, ನಾರಾ ಲೋಕೇಶ್ ನಾಯಕತ್ವ, ಭುವನೇಶ್ವರಿ ನಾಯಕತ್ವ, ಬ್ರಹ್ಮಿಣಿ ಅವರ ನಾಯಕತ್ವವನ್ನು ಒಪ್ಪುತ್ತೇನೆ’ ಎಂದರು. ಆಗ ಸಂದರ್ಶಕ ‘ಜೂ ಎನ್​ಟಿಆರ್ ನಾಯಕತ್ವ?’ ಎಂದು ಪ್ರಶ್ನೆ ಮಾಡಿದ್ದಕ್ಕೆ, ‘ನಾನು, ಜೂ ಎನ್​ಟಿಆರ್ ನಾಯಕತ್ವ ಒಪ್ಪುವುದಿಲ್ಲ’ ಎಂದಿದ್ದಾರೆ. ಆಗ ಸಂದರ್ಶಕ, ‘ಅದೇಕೆ? ಅವರೂ ಸಹ ಟಿಡಿಪಿ ಪಕ್ಷದ ವ್ಯವಸ್ಥಾಪಕ, ಸೀನಿಯರ್ ಎನ್​ಟಿಆರ್ ಅವರ ಮೊಮ್ಮಗ’ ಎಂದಿದ್ದಾರೆ. ‘ಸೀನಿಯರ್ ಎನ್​ಟಿಆರ್ ಅವರಿಗೆ ಬಹಳ ಜನ ಮೊಮ್ಮಕ್ಕಳಿದ್ದಾರೆ’ ಎಂದಿದ್ದಾರೆ. ಆ ಮೂಲಕ ಪಕ್ಷಕ್ಕೆ, ಕುಟುಂಬಕ್ಕೆ ಜೂ ಎನ್​ಟಿಆರ್ ಅವಶ್ಯಕತೆ ಇಲ್ಲವೆಂದು ಪರೋಕ್ಷವಾಗಿ ಹೇಳಿದ್ದಾರೆ.

ಇದನ್ನೂ ಓದಿ:ಜೂ ಎನ್​ಟಿಆರ್ ಕೈಯಲ್ಲಿರುವ ಈ ವಾಚ್​ ಬೆಲೆಗೆ ಒಂದು ಸಿನಿಮಾ ನಿರ್ಮಿಸಬಹುದು

ಈ ಹಿಂದೆಯೂ ಸಹ ಹಲವು ಟಿಡಿಪಿ ನಾಯಕರು ಜೂ ಎನ್​ಟಿಆರ್ ವಿರುದ್ಧ ನಾನಾ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಸ್ವತಃ ನಂದಮೂರಿ ಬಾಲಕೃಷ್ಣ ಸಹ ಕೆಲವು ಬಾರಿ ಜೂ ಎನ್​ಟಿಆರ್​ಗೆ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದಿದೆ. ಅಲ್ಲದೆ, ಕುಟುಂಬದ ಕಾರ್ಯಕ್ರಮಕ್ಕೂ ಸಹ ಜೂ ಎನ್​ಟಿಆರ್​ಗೆ ಆಹ್ವಾನ ನೀಡದೆ ಅವಮಾನಿಸಿದ್ದೂ ಇದೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಜೂ ಎನ್​ಟಿಆರ್ ಅಭಿಮಾನಿಗಳಿಗೆ ನಿರ್ಬಂಧ ಹೇರಿದ್ದ ಘಟನೆಗಳು ಸಹ ನಡೆದಿವೆ.

ಹಿಂದೆ ಜೂ ಎನ್​ಟಿಆರ್, ಟಿಡಿಪಿ ಪಕ್ಷದ ಸ್ಟಾರ್ ಪ್ರಚಾರ ಆಗಿದ್ದರು. ಭಾರಿ ಜನಪ್ರಿಯತೆ ಆಂಧ್ರದಲ್ಲಿ ಆಗಲೂ ಇತ್ತು, ಈಗ ಅದು ಇನ್ನೂ ಹೆಚ್ಚಾಗಿದೆ. ಆದರೆ ಚಂದ್ರಬಾಬು ನಾಯ್ಡು, ತಮ್ಮ ಪುತ್ರ ನಾರಾ ಲೋಕೇಶ್ ಅನ್ನು ಟಿಡಿಪಿ ಪಕ್ಷದ ಸ್ಟಾರ್ ಆಗಿ ಬೆಳೆಸುವ ಕಾರಣಕ್ಕೆ ಜೂ ಎನ್​ಟಿಆರ್ ಅನ್ನು ಪಕ್ಷದಿಂದ ದೂರ ಇರಿಸಿದ್ದಾರೆ ಎನ್ನಲಾಗುತ್ತಿದೆ. ಜೂ ಎನ್​ಟಿಆರ್ ಈ ಬಗ್ಗೆ ಎಲ್ಲೂ ಮೌನ ಮುರಿದಿಲ್ಲ. ಬದಲಿಗೆ ತಮ್ಮ ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರೋಡೆಕೋರನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ
ದರೋಡೆಕೋರನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ
ರಾಜ್ಯಾಧ್ಯಕ್ಷನ ಚುನಾವಣೆಯನ್ನು ಶಿವರಾಜ್ ಚೌಹಾನ್ ನೋಡಿಕೊಳ್ಳುತ್ತಾರೆ: ಅಶೋಕ
ರಾಜ್ಯಾಧ್ಯಕ್ಷನ ಚುನಾವಣೆಯನ್ನು ಶಿವರಾಜ್ ಚೌಹಾನ್ ನೋಡಿಕೊಳ್ಳುತ್ತಾರೆ: ಅಶೋಕ
ವರಿಷ್ಠರು ದೆಹಲಿಗೆ ತೆರಳಬೇಕಿದ್ದರಿಂದ ಬೇಗ ಭಾಷಣ ಮುಗಿಸಿದ ಸಿದ್ದರಾಮಯ್ಯ
ವರಿಷ್ಠರು ದೆಹಲಿಗೆ ತೆರಳಬೇಕಿದ್ದರಿಂದ ಬೇಗ ಭಾಷಣ ಮುಗಿಸಿದ ಸಿದ್ದರಾಮಯ್ಯ
ಪ್ರಧಾನ ಮಂತ್ರಿ ಹುದ್ದೆಯನ್ನೇ ಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು: ಖರ್ಗೆ
ಪ್ರಧಾನ ಮಂತ್ರಿ ಹುದ್ದೆಯನ್ನೇ ಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು: ಖರ್ಗೆ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ