ಬಿಗ್ ಬಾಸ್​ನಿಂದ ಹೊರ ನಡೆಯಲು ನಿರ್ಧರಿಸಿದ ಆರ್ಯವರ್ಧನ್ ಗುರೂಜಿ; ಈ ವೀಕೆಂಡ್​ನಲ್ಲೇ ಎಲಿಮಿನೇಷನ್​?

ಸದ್ಯ ಆರ್ಯವರ್ಧನ್ ಅವರ ಹೇಳಿಕೆ ಸಾಕಷ್ಟು ಕುತೂಹಲ ಮೂಡಿಸಿದೆ. ವೀಕೆಂಡ್ ಎಲಿಮಿನೇಷ​ನ್​ನಲ್ಲಿ ಸುದೀಪ್ ಬಳಿ ಆರ್ಯವರ್ಧನ್ ಈ ವಿಚಾರ ಪ್ರಸ್ತಾಪ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಬಿಗ್ ಬಾಸ್​ನಿಂದ ಹೊರ ನಡೆಯಲು ನಿರ್ಧರಿಸಿದ ಆರ್ಯವರ್ಧನ್ ಗುರೂಜಿ; ಈ ವೀಕೆಂಡ್​ನಲ್ಲೇ ಎಲಿಮಿನೇಷನ್​?
ಆರ್ಯವರ್ಧನ್
Edited By:

Updated on: Oct 11, 2022 | 3:52 PM

‘ಬಿಗ್ ಬಾಸ್ ಕನ್ನಡ ಸೀಸನ್ 8’ಕ್ಕೆ (BBK 8) ನಟಿ ವೈಜಯಂತಿ ಅಡಿಗ ಅವರು ವೈಲ್ಡ್ ಕಾರ್ಡ್​ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಬಂದಿದ್ದರು. ದೊಡ್ಮನೆಗೆ ಬಂದ ಕೆಲವೇ ದಿನಗಳಲ್ಲಿ ಅವರು ಹೊರ ನಡೆದಿದ್ದರು. ಆ ವಾರ ಶಮಂತ್ ಬ್ರೋ ಗೌಡ ಅವರು ಎಲಿಮಿನೇಟ್ ಆಗಬೇಕಿತ್ತು. ಆದರೆ, ಅವರನ್ನು ಉಳಿಸಿ ವೈಜಯಂತಿ ಅವರು ಸ್ವ ಇಚ್ಛೆಯಿಂದ ಹೊರ ಬಂದರು. ಈ ಬಾರಿ ಆರ್ಯವರ್ಧನ್ ಗುರೂಜಿ ಅವರು ಇದೇ ರೀತಿಯಲ್ಲಿ ಬಿಗ್ ಬಾಸ್​ನಿಂದ ಹೊರ ಬರಲು ನಿರ್ಧರಿಸಿದಂತಿದೆ. ರೂಪೇಶ್ ಶೆಟ್ಟಿ (Roopesh Shetty) ಬಳಿ ಈ ವಿಚಾರವನ್ನು ಆರ್ಯವರ್ಧನ್ ಹಂಚಿಕೊಂಡಿದ್ದಾರೆ. ಇದನ್ನು ಕೇಳಿ ರೂಪೇಶ್ ಶೆಟ್ಟಿ ಅಚ್ಚರಿಗೊಂಡಿದ್ದಾರೆ.

ಈ ವಾರ ಆರ್ಯವರ್ಧನ್ ಅವರು ಕ್ಯಾಪ್ಟನ್ ಆಗಿದ್ದಾರೆ. ಹೀಗಾಗಿ, ಅವರ ಹೆಸರನ್ನು ನಾಮಿನೇಷನ್​ಗೆ ತೆಗೆದುಕೊಳ್ಳುವಂತಿರಲಿಲ್ಲ. ಈ ವಾರ ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರ್ಗಿ, ದರ್ಶ್ ಚಂದ್ರಪ್ಪ, ದಿವ್ಯಾ ಉರುಡುಗ, ಮಯೂರಿ, ವಿನೋದ್ ಗೊಬ್ಬರಗಾಲ, ದೀಪಿಕಾ ದಾಸ್, ರೂಪೇಶ್ ಶೆಟ್ಟಿ, ಅಮೂಲ್ಯ ಗೌಡ ಹಾಗೂ ಅನುಪಮಾ ಗೌಡ ಅವರು ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ. ಈ ಪೈಕಿ ಅತಿ ಕಡಿಮೆ ವೋಟ್ ಪಡೆದ ಒಬ್ಬರು ಮನೆಯಿಂದ ಹೊರ ಹೋಗಲಿದ್ದಾರೆ. ಆದರೆ, ಈ ವಾರ ಗುರೂಜಿ ತಾವು ಮನೆಯಿಂದ ಹೊರ ಹೋಗಲು ನಿರ್ಧರಿಸಿದ್ದಾರೆ.

‘ಈ ವಾರ ನನ್ನನ್ನು ಕಳಿಸಿಕೊಡಿ ಅಂತ ಕೇಳ್ತೀನಿ’ ಎಂದು ರೂಪೇಶ್ ಬಳಿ ಹೇಳಿದರು ಗುರೂಜಿ. ‘ಆರಾಮಾಗಿ ಇದೀರಲ್ಲ. ಮತ್ಯಾಕೆ ಹೋಗೋ ಚಿಂತೆ? ಈಗ ಮನೆಯಿಂದ ಔಟ್ ಆದ್ರೆ ಮತ್ತೆ ನೀವು ಬರೋಕೆ ಆಗಲ್ಲ’ ಎಂದು ಹೇಳಿದರು ರೂಪೇಶ್. ‘ಆಯ್ಕೆ ಇದ್ರೆ ಕಳಿಸಿಕೊಡಿ ಎಂದು ಕೇಳ್ತಿನಿ. ಹಾಗೆ ಆಯ್ಕೆ ಇಲ್ಲ ಅಂದ್ರೆ ಇಲ್ಲೇ ಮುಂದುವರಿಯುತ್ತೀನಿ. ನಾನು ಮನೆಯಿಂದ ಹೊರಹೋಗಬೇಕು. ಇಲ್ಲಿ​ಗೆ ಬಂದು ಏನು ಆಗಬೇಕಿಲ್ಲ. 10 ವಾರ ಇದ್ರೂ ನನ್ನ ವೈಕ್ತಿತ್ವ ಇರೋದು ಹೀಗೆ. ಇನ್ನೂ 10 ವಾರ ಇದ್ರೂ ನಾನು ಹೀಗೆ ಇರೋದು. ಇಷ್ಟು ದಿನ ಇದ್ದಿದ್ದು ಖುಷಿ ನೀಡಿದೆ. ಇಲ್ಲೇನು ನಾವು ಎಂಜಾಯ್ ಮಾಡ್ತಿದೀವಲ್ಲ ಅದಕ್ಕೆ ಬೆಲೆ ಇಲ್ಲ’ ಎಂದು ಆರ್ಯವರ್ಧನ್ ಹೇಳಿದ್ದಾರೆ.

ಇದನ್ನೂ ಓದಿ
ಮಹಿಳಾ ಸ್ಪರ್ಧಿಗಳ ಜೊತೆ ಮಿಂಗಲ್ ಆಗುವ ರೂಪೇಶ್ ಶೆಟ್ಟಿಯ ಕಾಲೆಳೆದ ಸುದೀಪ್
‘ಬಿಗ್ ಬಾಸ್ ಶುರುವಾದಾಗ ನಾನು ಬಂದು ಪ್ರೀತಿ ಮಾಡಿ ಅಂತ ಹೇಳಿದ್ನಾ?’; ಸುದೀಪ್ ಪ್ರಶ್ನೆಗೆ ಕಂಗಾಲಾದ ರೂಪೇಶ್
ರೂಪೇಶ್ ಶೆಟ್ಟಿ-ಸಾನ್ಯಾ ಮಧ್ಯೆ ಬಂದ ಕಾವ್ಯಶ್ರೀ ಗೌಡ; ಐಯ್ಯರ್ ಕಣ್ಣಲ್ಲಿ ತುಂಬಿತು ನೀರು
BBK 9: ‘ರೂಪೇಶ್ ಶೆಟ್ಟಿ ಬಿಗ್ ಬಾಸ್ ಕನ್ನಡ ಸೀಸನ್ 9ರ ವಿನ್ನರ್’; ಏನಿದು ಸಮಾಚಾರ?

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಚಿನ್ನದ ಗಣಿ ಟಾಸ್ಕ್​; ವೀಕ್ಷಕರಿಗೆ ನೆನಪಾಯ್ತು ‘ಕೆಜಿಎಫ್’ ಸಿನಿಮಾ

ಸದ್ಯ ಆರ್ಯವರ್ಧನ್ ಅವರ ಹೇಳಿಕೆ ಸಾಕಷ್ಟು ಕುತೂಹಲ ಮೂಡಿಸಿದೆ. ವೀಕೆಂಡ್ ಎಲಿಮಿನೇಷ​ನ್​ನಲ್ಲಿ ಸುದೀಪ್ ಬಳಿ ಆರ್ಯವರ್ಧನ್ ಈ ವಿಚಾರ ಪ್ರಸ್ತಾಪ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

TV9 Web

TV9 Kannada

Read More
Loading...
Unable to load recommendations.
Follow Us