AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಗೆ ಮೊದಲ ದಿನವೇ ಬಂದ ಹೊಸ ಸ್ಪರ್ಧಿ; ದಿನವೀಡಿ ಅಳು

ಬಿಗ್ ಬಾಸ್ ಕನ್ನಡ 13ನೇ ಸೀಸನ್ ಅದ್ಧೂರಿಯಾಗಿ ಆರಂಭಗೊಂಡ ಬೆನ್ನಲ್ಲೇ ಸ್ಪರ್ಧಿಗಳಿಗೆ ಬಿಗ್ ಶಾಕ್ ಸಿಕ್ಕಿದೆ. ವಿಮಾನದ ಸೆಟ್‌ನಲ್ಲಿದ್ದ 16 ಸ್ಪರ್ಧಿಗಳ ಮಧ್ಯೆಗೆ ನೈಜ ಮಗುವಿನಂತಿರುವ ತಂತ್ರಜ್ಞಾನ ಆಧಾರಿತ ಗೊಂಬೆಯೊಂದು ಎಂಟ್ರಿ ಕೊಟ್ಟಿದೆ. ಮಗು ಅತ್ತಾಗ ಡ್ಯಾನ್ಸ್ ಮಾಡಿ ನಗಿಸುವ ಈ ವಿಶಿಷ್ಟ ಸವಾಲು ದೊಡ್ಮನೆಯಲ್ಲಿ ಮೊದಲ ದಿನವೇ ಭಾರೀ ಕುತೂಹಲ ಮೂಡಿಸಿದೆ.

ಬಿಗ್ ಬಾಸ್ ಮನೆಗೆ ಮೊದಲ ದಿನವೇ ಬಂದ ಹೊಸ ಸ್ಪರ್ಧಿ; ದಿನವೀಡಿ ಅಳು
ಬಿಗ್ ಬಾಸ್ Image Credit source: Colors Kannada
ರಾಜೇಶ್ ದುಗ್ಗುಮನೆ
|

Updated on: Sep 08, 2026 | 7:04 AM

Share

ಮುಖ್ಯಾಂಶಗಳು

  • ವಿಮಾನದಲ್ಲಿ ಕಾದಿತ್ತು ಬಿಗ್ ಶಾಕ್
  • ದೊಡ್ಮನೆಗೆ ಬಂತು 'ಕಿರು ಸ್ಪರ್ಧಿ'
  • ಸ್ಪರ್ಧಿಗಳ ತಾಳ್ಮೆಗೆ ನೈಜ ಪರೀಕ್ಷೆ

‘ಬಿಗ್ ಬಾಸ್ ಕನ್ನಡ ಸೀಸನ್ 13’ ಅದ್ಧೂರಿಯಾಗಿ ಚಾಲನೆ ಪಡೆದುಕೊಂಡಿದೆ. ಮೊದಲ ದಿನ 16 ಸ್ಪರ್ಧಿಗಳು ಫ್ಲೈಟ್​​ನಲ್ಲೇ ಇದ್ದರು. ಅಲ್ಲಿಗೇ ಊಟ ಬರುತ್ತಿತ್ತು. ಈ ಬೆನ್ನಲ್ಲೇ ಸ್ಪರ್ಧಿಗಳಿಗೆ ಒಂದು ಶಾಕ್ ಉಂಟಾಗಿದೆ. ದೊಡ್ಮನೆಯಲ್ಲಿ ಮೊದಲ ದಿನವೇ ಅಚ್ಚರಿಯ ತಿರುವು ಸಿಕ್ಕಿದ್ದು, ಮನೆಯೊಳಗೆ ಎಲ್ಲ ಸ್ಪರ್ಧಿಗಳು ಕಾಲಿಟ್ಟು ಸೆಟಲ್ ಆಗುವಷ್ಟರಲ್ಲೇ ಮತ್ತೋರ್ವ ‘ವಿಶೇಷ ಸ್ಪರ್ಧಿ’ಯ ಆಗಮನವಾಗಿದೆ. ಇದು ಉಳಿದ ಸ್ಪರ್ಧಿಗಳನ್ನೆಲ್ಲ ಕಂಗಾಲುಗೊಳಿಸಿದೆ.

ಆ ವಿಶೇಷ ಸ್ಪರ್ಧಿ ಬೇರಾರೂ ಅಲ್ಲ, ಒಂದು ಪುಟ್ಟ ಮಗುವಿನ ಗೊಂಬೆ. ಎಲ್ಲರೂ ವಿಮಾನದಲ್ಲಿ ಕುಳಿತಿದ್ದರು. ಆ ಸಮಯಕ್ಕೆ ಹೊಸ ಸ್ಪರ್ಧಿಯ ಆಗಮನದ ಸೂಚನೆ ಸಿಕ್ಕಿತು. ಎಲ್ಲರೂ ಇನ್ನೂ ಯಾರೋ ಒಬ್ಬರು ಬರುತ್ತಿದ್ದಾರೆ ಎಂದು ಭಾವಿಸಿದರು. ಆದರೆ, ಅದು ಮಗುವಿನ ಗೊಂಬೆ ಆಗಿತ್ತು. ನೋಡಲು ನೈಜ ಮಗುವಿನಂತೆಯೇ ರೂಪುಗೊಂಡಿರುವ ಈ ತಂತ್ರಜ್ಞಾನ ಆಧಾರಿತ ಕೃತಕ ಗೊಂಬೆ, ಈಗ ದೊಡ್ಮನೆಯ ಸದ್ಯದ ಹೈಲೈಟ್.

ಆಟದ ನಿಯಮ ಹಾಗೂ ಸವಾಲು:

ಅತ್ತರೆ ಸುಮ್ಮನಾಗಿಸಬೇಕು: ಈ ಗೊಂಬೆ ಮಗು ಇದ್ದಕ್ಕಿದ್ದಂತೆ ಜೋರಾಗಿ ಅಳಲು ಪ್ರಾರಂಭಿಸುತ್ತದೆ. ಮಗು ಅತ್ತ ತಕ್ಷಣ ಸ್ಪರ್ಧಿಗಳು ಅದನ್ನು ಸುಮ್ಮನಾಗಿಸಬೇಕು. ಹೀಗೆ ಮಾಡಲು ಸ್ಪರ್ಧಿಗಳು ನಗಬೇಕು, ಡ್ಯಾನ್ಸ್ ಮಾಡಬೇಕು.

ಸುಮ್ಮನಾದರೆ ಮಾತ್ರ ನಗು: ಸ್ಪರ್ಧಿಗಳು ಸರಿಯಾಗಿ ಆರೈಕೆ ಮಾಡಿ ಸಮಾಧಾನಪಡಿಸಿದಾಗ ಮಾತ್ರ ಆ ಮಗು ಅಳು ನಿಲ್ಲಿಸಿ ಮುದ್ದಾಗಿ ನಗುತ್ತದೆ. ಮಗು ಅತ್ತರೆ ಏನು? ನಕ್ಕರೆ ಏನು ಎಂಬ ಬಗ್ಗೆ ಬಿಗ್ ಬಾಸ್ ಏನನ್ನೂ ಹೇಳಿಲ್ಲ.

ಇದನ್ನೂ ಓದಿ: ಬಿಗ್ ಬಾಸ್ ಆಟ ಆರಂಭ ಆಗೋದಕ್ಕೂ ಮೊದಲೇ ಶುರುವಾಯ್ತು ಜಗಳ

ಮೊದಲ ದಿನವೇ ದೊಡ್ಮನೆಗೆ ಬಂದ ಈ ಮಗು ಸ್ಪರ್ಧಿಗಳ ಜವಾಬ್ದಾರಿ ಹಾಗೂ ತಾಳ್ಮೆಗೆ ದೊಡ್ಡ ಪರೀಕ್ಷೆ ಒಡ್ಡಿದೆ. ದಿನವಿಡೀ ಮಗುವಿನ ಅಳು-ನಗುವಿನ ಸುತ್ತಲೇ ಇಡೀ ಮನೆ ಹೆಣಗಾಡುತ್ತಿದ್ದು, ಪ್ರೇಕ್ಷಕರಿಗೆ ಮೊದಲ ದಿನವೇ ಪಕ್ಕಾ ಎಂಟರ್‌ಟೇನ್‌ಮೆಂಟ್ ಸಿಕ್ಕಂತಾಗಿದೆ. ಮುಂದೆ ಯಾವ ರೀತಿಯ ಘೋಷಣೆ ಬರುತ್ತದೆ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us