BBK 9 Winner Prize: ಬಿಗ್ ಬಾಸ್ ವಿಜೇತರಿಗೆ ಸಿಗ್ತಿರೋ ಹಣ 50 ಲಕ್ಷ ರೂಪಾಯಿ ಅಲ್ಲ, ಅದಕ್ಕೂ ಹೆಚ್ಚು

| Updated By: ರಾಜೇಶ್ ದುಗ್ಗುಮನೆ

Updated on: Jan 01, 2023 | 12:36 AM

‘ಕನ್ನಡ ಬಿಗ್ ಬಾಸ್’ ಗೆದ್ದ ಸ್ಪರ್ಧಿ ಹಣ ಹಾಗೂ ಆಕರ್ಷಕ ಟ್ರೋಫಿನ ಮನೆಗೆ ತೆಗೆದುಕೊಂಡು ಹೋಗಲಿದ್ದಾರೆ.

BBK 9 Winner Prize: ಬಿಗ್ ಬಾಸ್ ವಿಜೇತರಿಗೆ ಸಿಗ್ತಿರೋ ಹಣ 50 ಲಕ್ಷ ರೂಪಾಯಿ ಅಲ್ಲ, ಅದಕ್ಕೂ ಹೆಚ್ಚು
ಬಿಗ್ ಬಾಸ್
Follow us on

‘ಬಿಗ್ ಬಾಸ್​ ಕನ್ನಡ ಸೀಸನ್ 9’ (BBK 9) ಇಂದು (ಡಿಸೆಂಬರ್ 31) ಪೂರ್ಣಗೊಳ್ಳಲಿದೆ. ಪ್ರತಿ ಬಾರಿ ಬಿಗ್ ಬಾಸ್​​ ಫಿನಾಲೆ ಶನಿವಾರ ಹಾಗೂ ಭಾನುವಾರ ನಡೆಯುತ್ತಿತ್ತು. ಆದರೆ, ಈ ಬಾರಿ ಬಿಗ್ ಬಾಸ್ ಫಿನಾಲೆ ಶುಕ್ರವಾರ ಹಾಗೂ ಶನಿವಾರ ನಡೆದಿದೆ . ‘ಕನ್ನಡ ಬಿಗ್ ಬಾಸ್’ ಗೆದ್ದ ಸ್ಪರ್ಧಿ ರೂಪೇಶ್ ಶೆಟ್ಟಿ 50 ಲಕ್ಷ ರೂಪಾಯಿ ಬಹುಮಾನ ಹಣ ಹಾಗೂ ಆಕರ್ಷಕ ಟ್ರೋಫಿನ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಈ ಬಾರಿ ಹೆಚ್ಚುವರಿಯಾಗಿ 10 ಲಕ್ಷ ರೂಪಾಯಿ ಸಿಕ್ಕಿದೆ. ಅಂದರೆ ಗೆಲ್ಲುವ ಸ್ಪರ್ಧಿಗೆ 60 ಲಕ್ಷ ರೂಪಾಯಿ ಹಣ ಸಿಕ್ಕಿದೆ.

ಬಿಗ್ ಬಾಸ್​ ಫಿನಾಲೆಗೆ ಐವರು ತಲುಪಿದ್ದರು. ರೂಪೇಶ್ ರಾಜಣ್ಣ, ದಿವ್ಯಾ ಉರುಡುಗ, ದೀಪಿಕಾ ದಾಸ್​, ರಾಕೇಶ್ ಅಡಿಗ ಹಾಗೂ ರೂಪೇಶ್ ಶೆಟ್ಟಿ ಬಿಗ್ ಬಾಸ್ ಫಿನಾಲೆಯಲ್ಲಿ ಉಳಿದುಕೊಂಡಿದ್ದರು. ಶನಿವಾರದ (ಡಿಸೆಂಬರ್ 30) ಎಪಿಸೋಡ್​ನಲ್ಲಿ ದಿವ್ಯಾ ಔಟ್ ಆಗಿದ್ದಾರೆ. ಉಳಿದ ನಾಲ್ವರಲ್ಲಿ ರೂಪೇಶ್ ವಿನ್ ಆಗಿದ್ದಾರೆ.

ಈ ಬಾರಿ ‘ಬಿಗ್ ಬಾಸ್​​ ಕನ್ನಡ’ ಗೆದ್ದ ಸ್ಪರ್ಧಿಗೆ 60 ಲಕ್ಷ ರೂಪಾಯಿ ಸಿಕ್ಕಿದೆ. ಈ ಬಹುಮಾನದ ಮೊತ್ತಕ್ಕೆ ಶೇ.30 ಟ್ಯಾಕ್ಸ್ ಬೀಳಲಿದೆ. 60 ಲಕ್ಷ ರೂಪಾಯಿಯಲ್ಲಿ 18 ಲಕ್ಷ ರೂ.  ಕಟ್ ಆಗಲಿದೆ. ಅಂದರೆ ಬಿಗ್ ಬಾಸ್ ಗೆದ್ದ ಸ್ಪರ್ಧಿಗೆ 42  ಲಕ್ಷ ರೂಪಾಯಿ ಸಿಗಲಿದೆ. ಹತ್ತು ಸಾವಿರ ಹಾಗೂ ಅದಕ್ಕಿಂತ ಹೆಚ್ಚಿನ ಹಣ ಗೆದ್ದ ಸ್ಪರ್ಧಿಗೆ ಮಾತ್ರ ಈ ತೆರಿಗೆ ಅನ್ವಯ ಆಗಲಿದೆ. ಕೌನ್ ಬನೇಗಾ ಕರೋಡ್ಪತಿ ಸೇರಿ ಮನರಂಜನೆಗೆ ಸಂಬಂಧಿಸಿದ ಎಲ್ಲಾ ಶೋಗೆ ಈ ತೆರಿಗೆ ಸ್ಲ್ಯಾಬ್ ಅನ್ವಯ ಆಗಲಿದೆ.

ಇದನ್ನೂ ಓದಿ
BBK 9 Contestant List: ಈ ಸೀಸನ್​ಗೆ ಎಂಟ್ರಿ ಕೊಟ್ಟಿದ್ದ 18 ಸ್ಪರ್ಧಿಗಳು ಇವರೇ ನೋಡಿ; ಇಲ್ಲಿದೆ ಫೋಟೋ-ವಿವರ
‘ಕ್ಯಾರೆಕ್ಟರ್ ಹಾಳಾಗುತ್ತೆ ಅಂತ ಹೆದರಿಸಿದ್ರು’; ಎಚ್ಚರಿಕೆ ಬಗ್ಗೆ ಸುದೀಪ್ ಎದುರು ಹೇಳಿಕೊಂಡ ರೂಪೇಶ್ ಶೆಟ್ಟಿ
ಬಿಗ್ ಬಾಸ್ ಫಿನಾಲೆಯಲ್ಲಿ ಯಾವ ಸ್ಪರ್ಧಿ ಹೆಚ್ಚು ಸ್ಟ್ರಾಂಗ್​​? ಯಾರಿಗಿದೆ ಕಪ್ ಗೆಲ್ಲುವ ಚಾನ್ಸ್​?

ಶನಿವಾರದ ಎಲಿಮಿನೇಷನ್ ವಿವರ: 

ದಿವ್ಯಾ ಉರುಡುಗ ಅವರು ಶನಿವಾರದ ಎಪಿಸೋಡ್​ನಲ್ಲಿ ಔಟ್ ಆಗಿದ್ದಾರೆ. ಶನಿವಾರ ಔಟ್ ಆದ ಏಕೈಕ ಸ್ಪರ್ಧಿ ಎಂದರೆ ಅದು ದಿವ್ಯಾ ಉರುಡುಗ ಮಾತ್ರ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:16 pm, Sat, 31 December 22