ಗಿಲ್ಲಿ ‘ಬಡವ’ ಕಾರ್ಡ್ ಬಳಸಿ ಗೆದ್ದ ಎಂದವರಿಗೆ ಮುಟ್ಟಿ ನೋಡಿಕೊಳ್ಳೋ ಉತ್ತರ ಕೊಟ್ಟ ಸಹ ಸ್ಪರ್ಧಿ ಅಭಿಷೇಕ್
ಬಿಗ್ ಬಾಸ್ ಕನ್ನಡ ಸೀಸನ್ 12 ವಿಜೇತ ಗಿಲ್ಲಿ 'ಬಡವ ಕಾರ್ಡ್' ಬಳಸಿ ಗೆದ್ದಿದ್ದಾರೆ ಎಂಬ ಆರೋಪಕ್ಕೆ ಸಹ ಸ್ಪರ್ಧಿ ಅಭಿಷೇಕ್ ತೀಕ್ಷ್ಣ ಉತ್ತರ ನೀಡಿದ್ದಾರೆ. ಗಿಲ್ಲಿ ತಮ್ಮ ಪ್ರತಿಭೆ ಮತ್ತು ಮನರಂಜನೆಯಿಂದ ಇಡೀ ಕರ್ನಾಟಕವನ್ನು ನಗಿಸಿ ಗೆದ್ದಿದ್ದಾರೆ ಹೊರತು ಸಿಂಪತಿಯಿಂದಲ್ಲ ಎಂದು ಅಭಿಷೇಕ್ ಸ್ಪಷ್ಟಪಡಿಸಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಸ್ಪರ್ಧಿ ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಯಲ್ಲಿರುವಾಗ ‘ನಾನು ಬಡವ, ನನ್ನ ಬಳಿ ಹಣವಿಲ್ಲ, ಊಟಕ್ಕೂ ತೊಂದರೆ ಆಗುತ್ತಿದೆ’ ಎಂದೆಲ್ಲ ಎಂದಿಯೂ ಹೇಳಿಕೊಂಡವರಲ್ಲ. ಅವರು ತಮ್ಮ ಆಸ್ತಿ, ಜಾತಿ ವಿಷಯವನ್ನು ಮಾತನಾಡಿಯೇ ಇಲ್ಲ. ಆದರೂ ಕೆಲವರು ಆ ಬಗ್ಗೆ ಮಾತನಾಡುತ್ತಿದ್ದಾರೆ. ಗಿಲ್ಲಿ ಬಡವ ಕಾರ್ಡ್ ಬಳಸಿ ಗೆದ್ದ ಎಂದೆಲ್ಲ ಹೇಳುತ್ತಿದ್ದಾರೆ. ಈ ಬಗ್ಗೆ ಈ ಸೀಸನ್ ಸ್ಪರ್ಧಿ ಅಭಿಷೇಕ್ ಮಾತನಾಡಿದ್ದಾರೆ. ಅವರು ತೂಕದ ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಇರುವಾಗ ಯಾರ ಖ್ಯಾತಿ ಎಷ್ಟಿದೆ ಎಂಬುದರ ಅಂದಾಜು ಯಾರಿಗೂ ಇರೋದಿಲ್ಲ. ಅದನ್ನು ನೋಡೋಕೆ ಹೊರಕ್ಕೆ ಬರಬೇಕು. ಅಭಿಷೇಕ್ ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗ ಗಿಲ್ಲಿ ನಟನ ಆಟವನ್ನು ಅಷ್ಟಾಗಿ ಇಷ್ಟಪಟ್ಟವರಲ್ಲ. ಆದರೆ, ಹೊರ ಬಂದ ಬಳಿಕ ಗಿಲ್ಲಿ ಆಟ ಏನು ಎಂಬುದು ಗೊತ್ತಾಗಿದೆ. ಸಖತ್ ಆಗಿ ಕಂಟೆಂಟ್ ನೀಡಿ ಮನರಂಜಿಸಿದ್ದಾರೆ ಎಂಬುದು ಮನದಟ್ಟಾಗಿದೆ. ಈ ಎಲ್ಲಾ ಕಾರಣದಿಂದ ಅವರು ಗಿಲ್ಲಿಗೆ ಬೆಂಬಲ ನೀಡಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿದ್ದಾರೆ.
View this post on Instagram
‘ಸೋಶಿಯಲ್ ಮೀಡಿಯಾದಲ್ಲಿ ನೋಡುತ್ತಿದ್ದೇನೆ. ಒಬ್ಬರು ಗಿಲ್ಲಿ ಬಡವ ಅಂತಾರೆ, ಇನ್ನೊಬ್ಬರು ಗಿಲ್ಲಿ ಶ್ರೀಮಂತ ಅಂತಾರೆ. ಒಂದು ಕಡೆ ಅವನತ್ರ ಆ ಕಾರು ಇದೆ, ಈ ಕಾರು ಇದೆ ಅಂತಾರೆ. ಅದಕ್ಕೇನು? ಅವನು ಸಿಂಪತಿಯಿಂದ ಗೆದ್ದ ಎಂದು ನನಗೆ ಅನಿಸುತ್ತಿಲ್ಲ. ಅವನು ಟ್ಯಾಲೆಂಟ್ನಿಂದ ಗೆದ್ದ. ನಮಗೆ ಒಬ್ಬರನ್ನು ನಗಿಸೋದೆ ಕಷ್ಟ. ಹೀಗಿರುವಾಗ ಅವನು ಇಡೀ ಕರ್ನಾಟಕನ ನಗಿಸಿದ್ದಾನೆ. ನನಗೆ ಅವನ ಬಗ್ಗೆ ಸಂಪೂರ್ಣವಾಗಿ ಖುಷಿ ಇದೆ. ಅವನ ಬಳಿ ಟ್ಯಾಲೆಂಟ್ ಇದೆ. ಅವನು ಗೆದ್ದಿದ್ದಕ್ಕೆ ಖುಷಿ ಇದೆ. ಗಿಲ್ಲಿ ನಿನ್ನ ಬಗ್ಗೆ ಹೆಮ್ಮೆ ಇದೆ’ ಎಂದು ಅಭಿಷೇಕ್ ಮಾತನಾಡಿದ್ದಾರೆ.
ಇದನ್ನೂ ಓದಿ: ಗಿಲ್ಲಿ ಬಡವನಾ ಶ್ರೀಮಂತನಾ? ಮುತ್ತಿನಂಥ ಮಾತು ಹೇಳಿದ ಸೂರಜ್ ಅಭಿಷೇಕ್ ಮಾತಿನಿಂದ ಗಿಲ್ಲಿ ಅಭಿಮಾನಿಗಳಿಗೆ ಖುಷಿ ಆಗಿದೆ. ಅವರು ಅಭಿಷೇಕ್ಗೆ ಧನ್ಯವಾದ ಅರ್ಪಿಸಿದ್ದಾರೆ. ಅಭಿಷೇಕ್ ರೀತಿ ಸೂರಜ್ ಕೂಡ ಮಾತನಾಡಿದ್ದಾರೆ. ಅವರು ಕೂಡ ಗಿಲ್ಲಿಗೆ ಬೆಂಬಲ ಸೂಚಿಸಿದ್ದಾರೆ. ಗಿಲ್ಲಿ ಸಿಂಪತಿ ಹಾಗೂ ಬಡವ ಕಾರ್ಡ್ ಬಳಸಿ ಗೆದ್ದ ಎಂಬುದು ಅಶ್ವಿನಿ ಹಾಗೂ ಧ್ರುವಂತ್ ಆರೋಪ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




