AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮಗಿಂತಲೂ ದೊಡ್ಡ ಕಲಾವಿದರಿದ್ದಾರೆ, ನೀವೇನೂ ಅಲ್ಲ’, ಕಿಚ್ಚ ಬಗ್ಗೆ ಓಂ ಪ್ರಕಾಶ್ ಮಾತು

Bigg Boss Kannada: ಸುದೀಪ್ ಅವರು ಸ್ಪರ್ಧಿಗಳನ್ನು ಇತರೆ ಸ್ಪರ್ಧಿಗಳ ಬಗ್ಗೆ ಹಾಗೂ ಒಟ್ಟಾರೆ ಮೊದಲ ವಾರದ ಅನುಭವಗಳ ಬಗ್ಗೆ ಅಭಿಪ್ರಾಯಗಳನ್ನು ಕೇಳುತ್ತಿದ್ದರು. ಅದರಂತೆ ಓಂ ಪ್ರಕಾಶ್ ರಾವ್ ಅವರನ್ನು ಮೊದಲ ವಾರ ಬಿಗ್​​ಬಾಸ್ ಮನೆಯಲ್ಲಿ ಏನೆನ್ನಿಸಿತು ಎಂದರು. ಅದಕ್ಕೆ ಓಂ ಪ್ರಕಾಶ್ ರಾವ್ ನೀಡಿದ ಉತ್ತರಕ್ಕೆ ಖುದ್ದು ಸುದೀಪ್ ಮನತುಂಬಿ ನಕ್ಕು ಬಿಟ್ಟರು.

‘ನಿಮಗಿಂತಲೂ ದೊಡ್ಡ ಕಲಾವಿದರಿದ್ದಾರೆ, ನೀವೇನೂ ಅಲ್ಲ’, ಕಿಚ್ಚ ಬಗ್ಗೆ ಓಂ ಪ್ರಕಾಶ್ ಮಾತು
Sudeep Om Prakash Rao
ಮಂಜುನಾಥ ಸಿ.
|

Updated on: Sep 12, 2026 | 10:25 PM

Share

ಮುಖ್ಯಾಂಶಗಳು

  • ಬಿಗ್​​ಬಾಸ್ ಕನ್ನಡ 13 ಮೊದಲ ಕಿಚ್ಚನ ಸೆಲೆಬ್ರಿಟಿ
  • ಓಂ ಪ್ರಕಾಶ್ ರಾವ್ ಮಾತಿಗೆ ನಕ್ಕು ಸುಸ್ತಾದ ಸುದೀಪ್
  • ‘ನಿಮಗಿಂತಲೂ ದೊಡ್ಡ ಕಲಾವಿದರಿದ್ದಾರೆ, ನೀವೇನೂ ಅಲ್ಲ’

ಬಿಗ್​​ಬಾಸ್ ಕನ್ನಡ ಸೀಸನ್ 13 ಸೀಸನ್​​ ಶುರುವಾಗಿ ವಾರವಾಗುತ್ತಾ ಬಂದಿದೆ. ಈ ಸೀಸನ್​​ನ ಮೊದಲ ಕಿಚ್ಚನ ಪಂಚಾಯ್ತಿ ಇಂದು (ಸೆಪ್ಟೆಂಬರ್ 12) ನಡೆದಿದೆ. ಸುದೀಪ್ ಅವರು ಎಂದಿನಂತೆ ಖಡಕ್ ಆಗಿ ಎಂಟ್ರಿ ಕೊಟ್ಟು ಸ್ಪರ್ಧಿಗಳನ್ನು ಮಾತನಾಡಿಸಿದ್ದಾರೆ. ಮೊದಲ ಪಂಚಾಯ್ತಿಯಲ್ಲೇ ಸುದೀಪ್ ಅವರು ಕೆಲವರಿಗೆ ಸುದೀಪ್ ಅವರು ಖಡಕ್ ಆಗಿ ಕ್ಲಾಸ್ ತೆಗೆದುಕೊಂಡರು. ವಿಶೇಷವಾಗಿ ತಾಂಡವ್, ಗಗನ್, ಮಂಜು, ಶಾಸ್ತ್ರಿ, ಜಗ್ಗಿ ಅವರುಗಳಿಗೆ ಸಖತ್ ಶಾಕ್ ಕೊಟ್ಟರು. ಆದರೆ ಸುದೀಪ್ ಅವರಿಗೇ ಶಾಕ್ ಕೊಟ್ಟವರು ನಿರ್ದೇಶಕ ಓಂ ಪ್ರಕಾಶ್ ರಾವ್.

ಸುದೀಪ್ ಅವರು ಸ್ಪರ್ಧಿಗಳನ್ನು ಇತರೆ ಸ್ಪರ್ಧಿಗಳ ಬಗ್ಗೆ ಹಾಗೂ ಒಟ್ಟಾರೆ ಮೊದಲ ವಾರದ ಅನುಭವಗಳ ಬಗ್ಗೆ ಅಭಿಪ್ರಾಯಗಳನ್ನು ಕೇಳುತ್ತಿದ್ದರು. ಅದರಂತೆ ಓಂ ಪ್ರಕಾಶ್ ರಾವ್ ಅವರನ್ನು ಮೊದಲ ವಾರ ಬಿಗ್​​ಬಾಸ್ ಮನೆಯಲ್ಲಿ ಏನೆನ್ನಿಸಿತು ಎಂದರು. ಅದಕ್ಕೆ ಓಂ ಪ್ರಕಾಶ್ ರಾವ್ ನೀಡಿದ ಉತ್ತರಕ್ಕೆ ಖುದ್ದು ಸುದೀಪ್ ಮನತುಂಬಿ ನಕ್ಕು ಬಿಟ್ಟರು.

ಸುದೀಪ್ ಪ್ರಶ್ನೆಗೆ ಉತ್ತರಿಸಿದ ಓಂ ಪ್ರಕಾಶ್ ರಾವ್, ‘ಕರ್ನಾಟಕದಲ್ಲಿ ನೀವೇ ಒಳ್ಳೆಯ ಕಲಾವಿದ, ನಟ ಎಂದುಕೊಂಡಿದ್ದೆ, ಆದರೆ ಖಂಡಿತ ಇಲ್ಲ ಇಲ್ಲಿರುವ ಕೆಲವರು ನಿಮಗಿಂತಲೂ ಒಳ್ಳೆಯ ನಟರು ಇಲ್ಲಿದ್ದಾರೆ’ ಎಂದರು. ಓಂ ಪ್ರಕಾಶ್ ರಾವ್ ಮಾತು ಕೇಳಿ ಸ್ಪರ್ಧಿಗಳೆಲ್ಲ ನಗಲು ಆರಂಭಿಸಿದರು. ಖುದ್ದು ಸುದೀಪ್​​ಗೆ ಸಹ ನಗು ತಡೆಯಲಾಗಲಿಲ್ಲ. ಬಳಿಕ ಸುದೀಪ್ ಅವರು, ‘ನನ್ನ ಪುಣ್ಯ, ನೀವು ‘ಹುಚ್ಚ’ ಸಿನಿಮಾ ಮಾಡುವಾಗ ಇವರು ನಿಮ್ಮ ಕೈಗೆ ಸಿಗಲಿಲ್ಲ, ಇಲ್ಲವಾದರೆ ನಾನು ಹೀರೋ ಆಗ್ತಿರಲಿಲ್ಲ’ ಎಂದರು.

ಇದನ್ನೂ ಓದಿ:ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್

ಮಾತು ಮುಂದುವರೆಸಿದ ಓಂ ಪ್ರಕಾಶ್ ರಾವ್, ‘ಇವರ ಮುಂದೆ ನೀವು ಏನೂ ಅಲ್ಲ ಬಿಡಿ. ನಿಮಗಿಂತಲೂ ದೊಡ್ಡ ಕಲಾವಿದರು ಇವರು’ ಎಂದರು ಓಂ ಪ್ರಕಾಶ್ ರಾವ್. ಮಾತಿಗೆ ಪ್ರತಿಕ್ರಿಯಿಸಿದ ಸುದೀಪ್, ‘ನನಗೆ 12 ಸೀಸನ್ ಹಿಂದೆಯೇ ನನಗೆ ಈ ವಿಷಯ ತಿಳಿದು ಬಿಟ್ಟಿತು, ಒಳಗೆ ಹೋದವರ ನಟನೆ ಮುಂದೆ ನಮ್ಮ ನಟನೆ ಏನೂ ಅಲ್ಲ ಬಿಡಿ’ ಎಂದರು ಸುದೀಪ್.

ಓಂ ಪ್ರಕಾಶ್ ರಾವ್ ಅವರು ತಾಂಡವ್ ರಾಮ್ ಮಾಡಿದ ನಟನೆಯ ಬಗ್ಗೆ ಹಾಗೂ ಯಶಸ್ ಹೇಳಿದ ಮಾತಿನ ಬಗ್ಗೆ ಸುದೀಪ್ ಬಳಿ ತಮಾಷೆ ಮಾಡುತ್ತಲೇ ದೂರು ಹೇಳಿದರು. ವಿಶೇಷವಾಗಿ ಯಶಸ್ ಹೇಳಿದ ಮಾತಿನ ಬಗ್ಗೆ ಓಂ ಪ್ರಕಾಶ್ ರಾವ್ ಅಸಮಾಧಾನ ವ್ಯಕ್ತಪಡಿಸಿದರು. ಸುದೀಪ್ ಅವರು ಸಹ ಓಂ ಪ್ರಕಾಶ್ ರಾವ್ ಅವರು ಆಡುತ್ತಿರುವ ರೀತಿ ಮತ್ತು ಅವರು ಮನೆಯವರನ್ನು ಗಮನಿಸುತ್ತಿರುವ ರೀತಿಯ ಬಗ್ಗೆ ಹೊಗಳಿದರು.

ಓಂ ಪ್ರಕಾಶ್ ರಾವ್ ಅವರನ್ನು ಸುದೀಪ್, ಬಿಗ್​​ಬಾಸ್ ಮನೆಗೆ ಸ್ವಾಗತ ಮಾಡಿದಾಗಲೇ ಸುದೀಪ್ ಹೇಳಿದ್ದರು, ಓಂ ಪ್ರಕಾಶ್ ರಾವ್ ಬಹಳ ನಗಿಸುತ್ತಾರೆ ಎಂದು. ಓಂ ಪ್ರಕಾಶ್ ಅವರು ಅದನ್ನೇ ಮಾಡುತ್ತಿದ್ದಾರೆ. ಓಂ ಪ್ರಕಾಶ್ ಅವರು ಇತ್ತೀಚೆಗಷ್ಟೆ ಗುರುಜಿ ಆಗಿ ಸಖತ ಆಗಿ ಎಂಟರ್ಟೈನ್ ಮಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ