AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಗೆ ‘ಘಾಟಿ ಗಾನವಿ’ ವೈಲ್ಡ್ ಕಾರ್ಡ್ ಎಂಟ್ರಿ; ಇವರ ಸ್ಪೆಷಾಲಿಟಿ ಏನು?

ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಗಾನವಿ ಗೌಡ ಎಂಟ್ರಿ ಕೊಟ್ಟಿದ್ದಾರೆ. 'ಹಳ್ಳಿ ಪವರ್' ಶೋನಲ್ಲಿ ರನ್ನರ್ ಅಪ್ ಆಗಿ ತಮ್ಮ ನೇರ ಮಾತು ಹಾಗೂ ದಿಟ್ಟ ವ್ಯಕ್ತಿತ್ವದಿಂದ 'ಘಾಟಿ ಗಾನವಿ' ಎಂದೇ ಹೆಸರಾಗಿದ್ದ ಇವರ ಆಗಮನದಿಂದ ಬಿಗ್ ಬಾಸ್ ಮನೆಯ ಗೇಮ್ ಪ್ಲಾನ್ ಸಂಪೂರ್ಣ ಬದಲಾಗುವ ನಿರೀಕ್ಷೆಯಿದೆ.

ಬಿಗ್ ಬಾಸ್ ಮನೆಗೆ 'ಘಾಟಿ ಗಾನವಿ' ವೈಲ್ಡ್ ಕಾರ್ಡ್ ಎಂಟ್ರಿ; ಇವರ ಸ್ಪೆಷಾಲಿಟಿ ಏನು?
ಗಾನವಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 27, 2026 | 9:32 PM

Share

ಮುಖ್ಯಾಂಶಗಳು

  • ಬಿಗ್ ಬಾಸ್‌ಗೆ 'ಘಾಟಿ' ಮೆರುಗು
  • ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಗಾನವಿ ಗೌಡ
  • 'ಹಳ್ಳಿ ಪವರ್'ನಿಂದ ಬಿಗ್ ಬಾಸ್‌ವರೆಗೆ

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಈಗ ಹೊಸ ಟ್ವಿಸ್ಟ್‌ಗಳು ಶುರುವಾಗಿವೆ. ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿರುವ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಹಾಗೂ ರಿಯಾಲಿಟಿ ಶೋ ತಾರೆ ಗಾನವಿ ಗೌಡ (ಘಾಟಿ ಗಾನವಿ) ಅವರ ಎಂಟ್ರಿಯಾಗಿದೆ.

‘ಹಳ್ಳಿ ಪವರ್’ ಶೋನಲ್ಲಿ ತಮ್ಮದೇ ಹವಾ ಸೃಷ್ಟಿಸಿದ್ದ ಗಾನವಿ

ಕಿರುತೆರೆ ಪ್ರೇಕ್ಷಕರಿಗೆ ‘ಘಾಟಿ ಗಾನವಿ’ ಎನ್ನುವ ಹೆಸರು ಹೊಸದೇನಲ್ಲ. ಈ ಮೊದಲು ‘ಹಳ್ಳಿ ಪವರ್’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಇವರು, ತಮ್ಮ ನೇರ ಮಾತು ಹಾಗೂ ದಿಟ್ಟ ವ್ಯಕ್ತಿತ್ವದಿಂದ ಅಪಾರ ಪ್ರೇಕ್ಷಕರ ಗಮನ ಸೆಳೆದಿದ್ದರು. ಶೋನಲ್ಲಿ ನೀಡುತ್ತಿದ್ದ ಕಠಿಣ ಟಾಸ್ಕ್‌ಗಳಲ್ಲಿ ಕೊಂಚವೂ ಹಿಂದೆ ಸರಿಯದೆ, ಎದುರಾಳಿಗಳಿಗೆ ಕಡಕ್ ಟಕ್ಕರ್ ನೀಡುತ್ತಾ ನಿಜವಾದ “ಘಾಟಿ” ಎನಿಸಿಕೊಂಡಿದ್ದರು. ‘ಹಳ್ಳಿ ಪವರ್’ ಶೋನಲ್ಲಿ ಮೊದಲ ರನ್ನರ್ ಅಪ್ ಆಗಿ ಸೌಂಡ್ ಮಾಡಿದ್ದ ಗಾನವಿ, ತಮ್ಮ ಆಟದ ಶೈಲಿಯಿಂದಲೇ ‘ಘಾಟಿ ಗಾನವಿ’ ಎಂದೇ ಪ್ರಸಿದ್ಧರಾದರು.

ಬಿಗ್ ಬಾಸ್‌ನಲ್ಲಿ ‘ಘಾಟಿ’ ಆಟ ಶುರು

ಈಗ ಅದೇ ಬೋಲ್ಡ್ ಹಾಗೂ ಕಾನ್ಫಿಡೆಂಟ್ ಸ್ವಭಾವದೊಂದಿಗೆ ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಗೆ ಗಾನವಿ ಗೌಡ ಕಾಲಿಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಸ್ಪರ್ಧಿಗಳ ನಡುವೆ ಹಗ್ಗಜಗ್ಗಾಟ, ಮಾತುಕತೆಗಳ ಕದನ ತೀವ್ರಗೊಂಡಿರುವಾಗ, ಇವರ ಎಂಟ್ರಿಯಿಂದ ಮನೆಯ ಗೇಮ್ ಪ್ಲಾನ್ ಸಂಪೂರ್ಣ ಬದಲಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 13: ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಸುದೀಪ್ ಸ್ವಾಗತ

ಯಾರ ಮಾತಿಗೂ ಬಗ್ಗದ, ಯಾವುದೇ ಸಂದರ್ಭದಲ್ಲೂ ತಮ್ಮ ಅನಿಸಿಕೆಯನ್ನು ನೇರವಾಗಿ ವ್ಯಕ್ತಪಡಿಸುವ ಗಾನವಿ, ಬಿಗ್ ಬಾಸ್ ಮನೆಯಲ್ಲಿ ಇರುವ ಹಳೆಯ ಸ್ಪರ್ಧಿಗಳಿಗೆ ಕಠಿಣ ಸವಾಲಾಗಲಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ. ‘ಹಳ್ಳಿ ಪವರ್’ನಲ್ಲಿ ತೋರಿಸಿದ ಗತ್ತು ಮತ್ತು ಗಮ್ಮತ್ತನ್ನು ಬಿಗ್ ಬಾಸ್ ಮನೆಯಲ್ಲೂ ಮುಂದುವರಿಸುತ್ತಾರಾ ಮತ್ತು ತಮ್ಮ ಆಟದಿಂದ ಪ್ರೇಕ್ಷಕರ ಮನ ಗೆಲ್ಲುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಅವರ ಆಟದಿಂದ ಬೊಗ್ ಬಾಸ್ ಜರ್ನಿ ಸಂಪೂರ್ಣವಾಗಿ ಬದಲಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More