AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಸೌತ್: ಕೇವಲ 5 ವಾರಗಳಲ್ಲಿ 550 ಮಿಲಿಯನ್ ವಾಚ್ ಅವರ್ಸ್ ಮೈಲಿಗಲ್ಲು

ಜಿಯೋ ಹಾಟ್​​ಸ್ಟಾರ್ ಮೂಲಕ ದಕ್ಷಿಣ ಭಾರತದ ಕನ್ನಡ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಗಳ ಬಿಗ್ ಬಾಸ್ ರಿಯಾಲಿಟಿ ಶೋ ಕೇವಲ ಐದು ವಾರಗಳಲ್ಲಿ 550 ಮಿಲಿಯನ್ ವಾಚ್ ಅವರ್ಸ್ ದಾಟಿ ಹೊಸ ದಾಖಲೆ ಸೃಷ್ಟಿಸಿದೆ. ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಈ ಜನಪ್ರಿಯ ಕಾರ್ಯಕ್ರಮದ ಯಶಸ್ಸಿನ ಹಿಂದಿನ ಪ್ರಮುಖ ವಿವರಗಳು ಇಲ್ಲಿವೆ.

ಬಿಗ್ ಬಾಸ್ ಸೌತ್: ಕೇವಲ 5 ವಾರಗಳಲ್ಲಿ 550 ಮಿಲಿಯನ್ ವಾಚ್ ಅವರ್ಸ್ ಮೈಲಿಗಲ್ಲು
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on: Oct 16, 2026 | 2:27 PM

Share

ಮುಖ್ಯಾಂಶಗಳು

  • ಕೇವಲ ಐದೇ ವಾರಗಳಲ್ಲಿ ಐತಿಹಾಸಿಕ ಮೈಲಿಗಲ್ಲು ದಾಟಿದ ಬಿಗ್ ಬಾಸ್ ಸೌತ್
  • 24x7 ಲೈವ್ ಫೀಡ್‌ಗೂ ಹರಿದುಬಂದ ಭರ್ಜರಿ ಪ್ರೇಕ್ಷಕರ ರೆಸ್ಪಾನ್ಸ್
  • 75ಕ್ಕೂ ಹೆಚ್ಚು ಕಂಪನಿಗಳಿಂದ ದಾಖಲೆಯ ಸ್ಪಾನ್ಸರ್‌ಶಿಪ್

ಬಿಗ್ ಬಾಸ್​ಗೆ ಎಲ್ಲ ಕಡೆಗಳಲ್ಲೂ ವೀಕ್ಷಕರು ಇದ್ದೇ ಇದ್ದಾರೆ. ಈಗ ಇದು ಜಿಯೋ ಹಾಟ್​ಸ್ಟಾರ್​​ನಲ್ಲಿ ಹೊಸ ದಾಖಲೆ ಸೃಷ್ಟಿ ಮಾಡಿದೆ. ಪ್ರಸಾರ ಆರಂಭಿಸಿದ ಕೇವಲ ಐದು ವಾರಗಳಲ್ಲೇ 550 ಮಿಲಿಯನ್ ವಾಚ್ ಅವರ್ಸ್ ದಾಟಿ ಭರ್ಜರಿ ಯಶಸ್ಸು ಕಂಡಿವೆ. ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ನಾಲ್ಕೂ ಭಾಷೆಗಳಲ್ಲಿ ಏಕಕಾಲಕ್ಕೆ ಮೂಡಿಬಂದಿರುವ ಈ ಸೀಸನ್, ಫ್ರಾಂಚೈಸ್‌ನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಲಾಂಚ್ ಎಂಬ ದಾಖಲೆ ಬರೆದಿದೆ. .

ದಾಖಲೆ ಪ್ರಮಾಣದ ವೀಕ್ಷಣೆ: ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಒಟ್ಟಾರೆ ವಾಚ್ ಟೈಮ್ ಶೇ. 20ರಷ್ಟು ಏರಿಕೆ ಕಂಡಿದೆ.

24×7 ಲೈವ್‌ಗೆ ಒಲವು: ಕೇವಲ ದೈನಂದಿನ ಸಂಚಿಕೆಗಳಷ್ಟೇ ಅಲ್ಲದೆ, ಪ್ರತಿ 10 ರಲ್ಲಿ 6 ವೀಕ್ಷಕರು 24×7 ಲೈವ್ ಫೀಡ್ ವೀಕ್ಷಿಸುವ ಮೂಲಕ ಮನೆಯಲ್ಲಿ ಏನಾಯಿತು ಎಂಬುದರ ಬಗ್ಗೆ ಆಸಕ್ತಿ ತೋರಿಸುತ್ತಿ್ದಾರೆ.

ಬ್ರ್ಯಾಂಡ್‌ಗಳ ಬಲವಾದ ವಿಶ್ವಾಸ: ಈ ಬಾರಿ ನಾಲ್ಕೂ ಭಾಷೆಗಳ ಆವೃತ್ತಿಗಳಿಗೆ 75ಕ್ಕೂ ಹೆಚ್ಚು ಬ್ರ್ಯಾಂಡ್‌ಗಳು ಕೈಜೋಡಿಸಿದ್ದು, ಒಟ್ಟು 120ಕ್ಕೂ ಅಧಿಕ ಸ್ಪಾನ್ಸರ್‌ಶಿಪ್‌ಗಳು ದಾಖಲಾಗಿವೆ. ವಿಶೇಷವೆಂದರೆ, ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಬ್ರ್ಯಾಂಡ್‌ಗಳು ಬಿಗ್ ಬಾಸ್‌ ಜೊತೆ ಮೊದಲ ಬಾರಿಗೆ ಕೈಜೋಡಿಸಿವೆ. ಸ್ಥಳೀಯ ಜಾಹೀರಾತುದಾರರು ಒಟ್ಟು ಜಾಹೀರಾತು ವೆಚ್ಚದಲ್ಲಿ ಶೇ. 30ರಷ್ಟು ಪಾಲು ಹೊಂದಿದ್ದಾರೆ.

ಬಿಗ್ ಬಾಸ್ ಅಗ್ನಿಪರೀಕ್ಷೆ: ಮುಖ್ಯ ಸೀಸನ್‌ಗೂ ಮುನ್ನ ದಕ್ಷಿಣ ಭಾರತದಾದ್ಯಂತ ಪ್ರಸಾರವಾದ ಡಿಜಿಟಲ್ ಪ್ರಿ-ಶೋ ಪ್ರೇಕ್ಷಕರ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿತ್ತು.

ಇದನ್ನೂ ಓದಿ: ‘ತಿದ್ದೋದಲ್ಲ, ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಮಯ’; ಬಿಗ್ ಬಾಸ್ ವೇದಿಕೆ ಮೇಲೆ ಗುಡುಗಿದ ಸುದೀಪ್

ನಿರೂಪಣೆ:

ನಾಲ್ಕೂ ಭಾಷೆಗಳ ಬಿಗ್ ಬಾಸ್ ಕಾರ್ಯಕ್ರಮಗಳು ದಕ್ಷಿಣ ಭಾರತದ ಜನಪ್ರಿಯ ನಟರ ನಿರೂಪಣೆಯಲ್ಲಿ ಮೂಡಿಬರುತ್ತಿವೆ. ಕನ್ನಡದಲ್ಲಿ ಕಿಚ್ಚ ಸುದೀಪ್ ಹೋಸ್ಟ್ ಮಾಡುತ್ತಿದ್ದು, ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಲಿದೆ. ತಮಿಳಿನಲ್ಲಿ ವಿಜಯ್ ಸೇತುಪತಿ ನಡೆಸಿಕೊಡುತ್ತಿದ್ದು ಸ್ಟಾರ್ ವಿಜಯ್ ಅಲ್ಲಿ ಶೋ ಪ್ರಸಾರ ಆಗುತ್ತಿದೆ. ತೆಲುಗುನಲ್ಲಿ ನಾಗಾರ್ಜುನ ಹೋಸ್ಟ್ ಮಾಡುತ್ತಿದ್ದು, ಸ್ಟಾರ್ ಮಾದಲ್ಲಿ ಪ್ರಸಾರ ಆಗುತ್ತಿದೆ. ಮಲಯಾಳಂನಲ್ಲಿ ಸ್ಟಾರ್ ನಟ ಮೋಹನ್‌ಲಾಲ್ ನಡೆಸಿಕೊಡುತ್ತಿದ್ದು, ಏಷ್ಯಾನೆಟ್ ಅಲ್ಲಿ ಶೋ ಪ್ರಸಾರ ಆಗುತ್ತಿದೆ. ಟಿವಿ ಸಂಚಿಕೆಗಳ ಜೊತೆಗೆ, ಜಿಯೋಹಾಟ್‌ಸ್ಟಾರ್ ಆ್ಯಪ್‌ನಲ್ಲಿ ಈ ಎಲ್ಲಾ ಎಪಿಸೋಡ್‌ಗಳು ಹಾಗೂ 24×7 ಲೈವ್ ಫೀಡ್ ವೀಕ್ಷಕರಿಗೆ ಲಭ್ಯವಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More