‘ಬಿಗ್ ಬಾಸ್ ತೆಲುಗು ಸೀಸನ್ 8’ರಲ್ಲಿ ಮೈಸೂರಿನ ನಿಖಿಲ್ ಅವರು ಗೆದ್ದು ದಾಖಲೆ ಬರೆದಿದ್ದಾರೆ. ಅವರು ತೆಲುಗು ಬಿಗ್ ಬಾಸ್ನಲ್ಲಿ 100 ದಿನಕ್ಕೂ ಹೆಚ್ಚು ಕಾಲ ಇದ್ದು ಗೆಲುವು ದಾಖಲು ಬರೆದಿದ್ದಾರೆ. ತೆಲುಗಿನ ಸ್ಪರ್ಧಿಗಳನ್ನು ಹಿಂದಿಕ್ಕಿ ಇವರು ಗೆಲುವು ಕಂಡಿದ್ದಾರೆ. ಈಗ ನಿಖಿಲ್ ಅವರ ಹೊಸ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಅವರು ಕನ್ನಡದಲ್ಲೇ ಮಾತನಾಡಿದ್ದಾರೆ.
ನಿಖಿಲ್ ಅವರು ಮೂಲತಃ ಮೈಸೂರಿನವರಾಗಿದ್ದಾರೆ. ಮೈಸೂರಿನವರಾಗಿ ಕನ್ನಡ ಬಂದಿಲ್ಲ ಎಂದರೆ ಹೇಗೆ ನೀವೇ ಹೇಳಿ? ನಿಖಿಲ್ ಅವರು ನಿರರ್ಗಳವಾಗಿ ಕನ್ನಡ ಮಾತನಾಡುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ನಿಖಿಲ್ ಅವರು ಖುಷಿ ಖುಷಿಯಿಂದ ಮಾತನಾಡಿದ್ದಾರೆ. ಈ ಮೊದಲು ಬಿಗ್ ಬಾಸ್ನಲ್ಲೂ ಕೆಲವೊಮ್ಮೆ ಕನ್ನಡ ಮಾತನಾಡಿದ್ದು ಇದೆ.
ನಿಖಿಲ್ ಅವರು ಕಾರಿನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ‘ವಿನ್ ಆಗಿದ್ದಕ್ಕೆ ಹೇಗೆ ಅನಿಸುತ್ತಿದೆ’ ಎಂದು ಕೇಳಲಾಯಿತು. ‘ಹೀಗೆ ಅನಿಸುತ್ತಿದೆ’ ಎಂದು ಅವರು ಹೇಳಿಕೊಂಡಿದ್ದಾರೆ. ಅವರನ್ನು ಹಿಂದಿನ ಸೀಟ್ನಲ್ಲಿ ಕೂರಿಸಲಾಗಿತ್ತು. ‘ನನ್ನನ್ನು ಕಳ್ಳರನ್ನು ಕರೆದುಕೊಂಡು ಹೋದಂತೆ ಹೋಗ್ತಾ ಇದೀರಲ್ಲೋ’ ಎಂದು ನಿಖಿಲ್ ಹೇಳಿದ್ದಾರೆ. ಈ ವಿಡಿಯೋ ಸಖತ್ ಫನ್ ಆಗಿದೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ನಿಖಿಲ್ ಅವರು ಕನ್ನಡದ ‘ಊಟಿ’ ಹೆಸರಿನ ಸಿನಿಮಾ ಮಾಡಿದ್ದರು. ಈ ಚಿತ್ರದ ಮೂಲಕ ಕನ್ನಡದಲ್ಲಿ ಫೇಮಸ್ ಆದರು. ಆ ಬಳಿಕ ಅವರಿಗೆ ತೆಲುಗು ಧಾರಾವಾಹಿಗಳಿಂದ ಆಫರ್ಗಳು ಬಂದವು. ಅವರು ತೆಲುಗಿನ ‘ಗೋರಿಂಟಕು’ ಧಾರಾವಾಹಿಯಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಈ ಧಾರಾವಾಹಿ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆಯಿತು. ಆ ಬಳಿಕ ಅವರು ಬಿಗ್ ಬಾಸ್ ಶೋನಲ್ಲಿ ಕಾಣಿಸಿಕೊಂಡು ಗಮನ ಸೆಳೆದರು.
ಇದನ್ನೂ ಓದಿ: ತೆಲುಗು ಬಿಗ್ ಬಾಸ್ ಕಿರೀಟ ಗೆದ್ದ ಕನ್ನಡದ ಹುಡುಗ ನಿಖಿಲ್; ಸೃಷ್ಟಿ ಆಯಿತು ದಾಖಲೆ
ಸೋಶಿಯಲ್ ಮೀಡಿಯಾದಲ್ಲಿ ನಿಖಿಲ್ ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಕನ್ನಡ ಬಿಗ್ ಬಾಸ್ಗೂ ಬರಲಿ ಎಂದು ಕೋರುತ್ತಿದ್ದಾರೆ. ಆದರೆ, ಒಂದು ಶೋನ ವಿನ್ ಆದವರು ಇಲ್ಲಿಗೆ ಬರೋದು ಅನುಮಾನ. ಈ ಮೊದಲು ತೆಲುಗಿನಲ್ಲಿ ಹವಾ ಮಾಡಿದ್ದ ಶೋಭಾ ಶೆಟ್ಟಿ ಅವರು ಕನ್ನಡ ಬಿಗ್ ಬಾಸ್ಗೆ ಬಂದರು. ಆದರೆ, ಎರಡೇ ವಾರಕ್ಕೆ ಅವರು ಔಟ್ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:46 am, Wed, 18 December 24