AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜತ್ ದುರಹಂಕಾರಕ್ಕೆ ಸಿಕ್ಕಿತು ದೊಡ್ಡ ಪ್ರತಿಫಲ; ಮೂರಕ್ಕೆ ಮೂರು ಟಾಸ್ಕ್​ನಲ್ಲಿ ಸೋಲು

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದ ರಜತ್, ಆರಂಭದಲ್ಲಿ ಉತ್ತಮ ಆಟ ಆಡಿದರೂ, ಇತ್ತೀಚೆಗೆ ಅತಿಯಾದ ಅಹಂಕಾರದಿಂದಾಗಿ ಸೋಲು ಅನುಭವಿಸುತ್ತಿದ್ದಾರೆ. ಅವರ ತಂಡ ಮೂರು ಟಾಸ್ಕ್‌ಗಳಲ್ಲಿ ಸೋತಿದ್ದು, ಇದು ಅವರ ಅಹಂಕಾರದ ಪರಿಣಾಮ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಗೌತಮಿ ಮತ್ತು ಚೈತ್ರಾ ಜೊತೆಗಿನ ಜಗಳಗಳು ಮತ್ತು ಸುದೀಪ್ ಅವರ ಎಚ್ಚರಿಕೆಯ ಹೊರತಾಗಿಯೂ ಅವರ ವರ್ತನೆ ಬದಲಾಗಿಲ್ಲ.

ರಜತ್ ದುರಹಂಕಾರಕ್ಕೆ ಸಿಕ್ಕಿತು ದೊಡ್ಡ ಪ್ರತಿಫಲ; ಮೂರಕ್ಕೆ ಮೂರು ಟಾಸ್ಕ್​ನಲ್ಲಿ ಸೋಲು
ರಜತ್
ರಾಜೇಶ್ ದುಗ್ಗುಮನೆ
|

Updated on: Dec 18, 2024 | 6:56 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ರಜತ್ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟವರು. ಅವರು ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಆಟ ಆರಂಭದಲ್ಲಿ ಜೋರಾಗಿತ್ತು. ಆದರೆ, ಈಗ ತಮ್ಮನ್ನು ಬಿಟ್ಟರೆ ಯಾರೂ ಇಲ್ಲ ಎಂಬುದು ನೆತ್ತಿಗೆ ಏರಿದಂತೆ ಕಾಣಿಸುತ್ತಿದೆ. ಈ ಕಾರಣಕ್ಕೆ ಅವರಿಗೆ ದುರಹಂಕಾರ ಬಂದಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇದರ ಪರಿಣಾಮವಾಗಿ ಅವರ ತಂಡ ಮೂರಕ್ಕೆ ಮೂರು ಟಾಸ್ಕ್​ನಲ್ಲಿ ಸೋಲು ಕಂಡಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ 50 ದಿನ ಪೂರ್ಣಗೊಂಡ ಬಳಿಕ ರಜತ್ ಅವರು ದೊಡ್ಮನೆಗೆ ಕಾಲಿಟ್ಟರು. ಅವರು ಉತ್ತಮ ಆಟ ಪ್ರದರ್ಶನ ಕೊಡಲು ಆರಂಭಿಸಿದರು. ಟಾಸ್ಕ್​ಗಳಲ್ಲಿ ಉತ್ತಮವಾಗಿ ಆಟ ಆಡಿ ಮೆಚ್ಚುಗೆ ಪಡೆದರು. ಆದರೆ, ಇತ್ತೀಚೆಗೆ ಏಕೋ ಅವರು ಮದ ಏರಿದ ಆನೆಯಂತೆ ಆಗಿದ್ದಾರೆ. ಅವರಿಗೆ ದುರಹಂಕಾರ ಬಂದಿದೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ರಜತ್ ಅವರು ಆರಂಭದಲ್ಲಿ ಗೌತಮಿ ಅವರನ್ನು ಟಾರ್ಗೆಟ್ ಮಾಡಿ ಜಗಳ ಆಡಿದರು. ಇಡೀ ಮನೆ ಸ್ವಚ್ಛತೆ ಮಾಡುವ ಟಾಸ್ಕ್​ನಲ್ಲಿ ಬ್ಯುಸಿ ಆದರೆ, ರಜತ್ ಮಾತ್ರ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತಿದ್ದರು. ಈ ಕಾರಣಕ್ಕೆ ಅವರು ಮನೆಯವರಿಂದ ಸಾಕಷ್ಟು ಟೀಕೆ ಅನುಭವಿಸಬೇಕಾಯಿತು. ಇಷ್ಟಕ್ಕೆ ನಿಂತಿಲ್ಲ, ಅವರು ಚೈತ್ರಾ ಅವರನ್ನು ತಳ್ಳಾಡಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣ ಆಗಿದೆ. ರಜತ್​ಗೆ ಸುದೀಪ್ ಅವರು ಕಳೆದ ವೀಕೆಂಡ್​ನಲ್ಲಿ ಪಾಠ ಮಾಡಿದ್ದರು. ತಳ್ಳಾಟ ಬೇಡ ಎಂದು ಎಚ್ಚರಿಕೆ ನೀಡಿದ್ದರು. ಆದಾಗ್ಯೂ ಅದನ್ನು ಅವರು ಮುಂದುವರಿಸಿದ್ದಾರೆ.

ಇದನ್ನೂ ಓದಿ: ಸಾಕಿದ ನಾಯಿಗಾಗಿ ಬ್ರೇಕಪ್ ಮಾಡಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ; ಪವಿ ಪೂವಪ್ಪ ಶ್ವಾನ ಪ್ರೇಮಕ್ಕೆ ಹ್ಯಾಟ್ಸ್​ಆಫ್

ರಜತ್ ಒಂದು ತಂಡದ ನಾಯಕನಾಗಿದ್ದರೆ, ತ್ರಿವಿಕ್ರಂ ಅವರು ಮತ್ತೊಂದು ತಂಡದ ನಾಯಕರಾಗಿದ್ದರು. ರಜತ್ ತಂಡ ಆಡಿದ ಮೂರು ಟಾಸ್ಕ್​​ನಲ್ಲಿ ಮೂರನ್ನೂ ಸೋತಿದೆ. ‘ಇದು ರಜತ್ ದುರಹಂಕಾರಕ್ಕೆ ಸಿಕ್ಕ ಪ್ರತಿಫಲ’ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ. ಅವರು ಸೋಲಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಹಗೆ ತೀರಿಸಿಕೊಳ್ಳಬೇಕು ಎಂಬ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More