‘ಹೆಸರ ಜೊತೆ ಅಕ್ಕ ಸೇರಿದ್ರೆ ಅರ್ಥವೇ ಬೇರೆಯಾಗುತ್ತೆ’; ‘ಮಹಾನಟಿ’ ವೇದಿಕೆ ಮೇಲೆ ದೀಪಿಕಾ ಬೇಸರ

'ಮಹಾನಟಿ ಸೀಸನ್ 2'ರಲ್ಲಿ ಭಾಗವಹಿಸಿದ ದೀಪಿಕಾ ಕೆ.ಜೆ. ಅವರ ಹೆಸರಿನಿಂದ ಉಂಟಾದ ತಮಾಷೆಯ ಘಟನೆ ವೈರಲ್ ಆಗಿದೆ. ಅವರ ಹೆಸರಿನೊಂದಿಗೆ 'ಅಕ್ಕ' ಎಂಬ ಪದ ಸೇರಿದಾಗ ಉಂಟಾಗುವ ಅನುಚಿತ ಶಬ್ದದ ಬಗ್ಗೆ ಅವರು ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಇದು ವೇದಿಕೆಯಲ್ಲಿರುವವರನ್ನು ನಗಿಸಿದೆ .

‘ಹೆಸರ ಜೊತೆ ಅಕ್ಕ ಸೇರಿದ್ರೆ ಅರ್ಥವೇ ಬೇರೆಯಾಗುತ್ತೆ’; ‘ಮಹಾನಟಿ’ ವೇದಿಕೆ ಮೇಲೆ ದೀಪಿಕಾ ಬೇಸರ
ಮಹಾನಟಿ
Updated By: ರಾಜೇಶ್ ದುಗ್ಗುಮನೆ

Updated on: Jun 16, 2025 | 7:56 AM

‘ಮಹಾನಟಿ’ (Mahanati) ವೇದಿಕೆ ಮೇಲೆ ಅನೇಕ ಕಲಾವಿದರಿಗೆ ಅವಕಾಶ ಸಿಕ್ಕಿತ್ತು. ಈ ವೇದಿಕೆ ಮೂಲಕ ಸ್ಪರ್ಧಿಗಳು ಸಾಕಷ್ಟು ಗಮನ ಸೆಳೆದರು. ಈ ಶೋ ಯಶಸ್ಸಿನ ಬಳಿಕ ಎರಡನೇ ಸೀಸನ್ ಆರಂಭ ಆಗಿದೆ. ಶನಿವಾರ (ಜೂನ್ 14) ಮಹಾನಟಿ ಮೊದಲ ಎಪಿಸೋಡ್ ಪ್ರಸಾರ ಕಂಡಿದೆ. ಈ ವೇದಿಕೆ ಮೇಲೆ ಅನೇಕ ಸ್ಪರ್ಧಿಗಳು ತಮ್ಮ ಅಭಿನಯವನ್ನು ತೋರಿಸಿ ಜನರ ಮನ ಗೆದ್ದರು. ಇನ್ನೂ ಕೆಲವು ಕಲಾವಿದರು ಫನ್ ಆಗಿ ಜಡ್ಜ್​​ಗಳ ಜೊತೆ ಮಾತನಾಡಿದರು. ಈ ಪೈಕಿ ದೀಪಿಕಾ ಕೂಡ ಒಬ್ಬರು ಎನ್ನಬಹುದು. ‘ಮೇಗಾ ಆಡಿಷನ್’ ಪ್ರೋಮೋ ಸದ್ಯ ವೈರಲ್ ಆಗಿದೆ.

ದೀಪಿಕಾ ಅವರು ಮೂಲತಃ ತುಮಕೂರಿನವರು. ಅವರು ‘ಮಹಾನಟಿ ಸೀಸನ್ 2’ ವೇದಿಕೆ ಮೇಲೆ ಕಾಣಿಸಿಕೊಂಡರು. ದೀಪಿಕಾ ಅವರು ಸೀರೆ ಉಟ್ಟು ತಮ್ಮ ಕಲೆಯನ್ನು ತೋರಿಸಿದರು. ಅವರ ಪೂರ್ತಿ ಹೆಸರು ದೀಪಿಕಾ ಕೆಜೆ ಎಂದಾಗಿತ್ತು. ಈ ವೇಳೆ ನಿಶ್ವಿಕಾ ಅವರು, ‘ದೀಪಿಕಾನ ನಾನು ದೀಪು ಎನ್ನಬಹುದಾ’ ಎಂದು ಕೇಳಿದರು. ಆಗ ದೀಪಿಕಾ ತಮ್ಮ ಹೆಸರಿನ ಸಮಸ್ಯೆ ಹೇಳಿದರು.

ಇದನ್ನೂ ಓದಿ
ಸಲ್ಲು ಮದುವೆ ಆಗದಿರಲು ವಿಚ್ಛೇದನದ ಭಯವೇ ಕಾರಣ; ಓಪನ್ ಆಗಿ ಮಾತನಾಡಿದ ನಟ
ವಮಿಕಾ ಕೊಹ್ಲಿಯ ಕೈ ಬರಹ ಎಷ್ಟು ಕ್ಯೂಟ್ ನೋಡಿ; ಫೋಟೋ ಹಂಚಿಕೊಂಡ ಅನುಷ್ಕಾ
ಸಲ್ಮಾನ್ ಖಾನ್​ ವೃತ್ತಿ ಜೀವನದ ಅತಿ ಕೆಟ್ಟ ಚಿತ್ರಗಳಿವು..
ನಿಶಾ ರವಿಕೃಷ್ಣನ್​ಗೆ ತೆಲುಗು ಕಿರುತೆರೆಯಲ್ಲಿ ಎದುರಾದ ಕಷ್ಟಗಳು ಒಂದೆರಡಲ್ಲ

‘ಅನುಶ್ರೀ ಅವರನ್ನ ಅನು ಅಕ್ಕ, ಅನುಶ್ರೀ ಅಕ್ಕ ಎಂದು ಕರೆದರೆ ಯಾವುದೇ ಸಮಸ್ಯೆ ಇಲ್ಲ. ಆದರೆ, ನನ್ನನ್ನು ಎಲ್ಲರೂ ದೀಪಿಕಕ್ಕ, ದೀಪಿಕಕ್ಕ ಎನ್ನುತ್ತಾರೆ’ ಎಂದು ಅವರು ಹೇಳಿದರು. ದೀಪಿಕಾ ಮತ್ತು ಅಕ್ಕ ಸೇರಿದರೆ ಕೊನೆಯಲ್ಲಿ ಬರುವ ‘ಕಕ್ಕ’ ಶಬ್ದ ಕೆಟ್ಟದಾಗಿ ಕೇಳುತ್ತದೆ ಎಂದು ಅವರು ಹೇಳೋಕೆ ಬಂದರು. ಇದನ್ನು ಕೇಳಿ ವೇದಿಕೆ ಮೇಲೆ ಇದ್ದವರೆಲ್ಲರೂ ನಕ್ಕರು. ನಿಶ್ವಿಕಾ ಅವರು ತಮ್ಮ ಹೆಸರಲ್ಲೂ ಇದೇ ಸಮಸ್ಯೆ ಇದೆ ಎಂದು ಹೇಳಿದರು. ಆಗ ಎಲ್ಲರೂ ಮತ್ತಷ್ಟು ನಕ್ಕರು.

ಇದನ್ನೂ ಓದಿ: ‘ಮಹಾನಟಿ 2 ಶೋಗೆ ಆಡಿಷನ್: ನಿಮ್ಮ ಜಿಲ್ಲೆಯಲ್ಲಿ ಯಾವಾಗ ನೋಡಿ, ಷರತ್ತು ಗಮನಿಸಿ

ಇದಕ್ಕೆ ಎಲ್ಲರೂ ನಾನಾ ರೀತಿಯ ಕಮೆಂಟ್ ಮಾಡಿದ್ದಾರೆ. ‘ದೀಪಿಕಾ ಅಕ್ಕ ಮುಂದೆ ಅನುಶ್ರೀ ಅಕ್ಕನ ಮೀ ರಿಸ್ತಾರೆ. ಸೂಪರ್ ಆಕ್ಟಿಂಗ್ ಅಕ್ಕ’ ಎಂದು ಕೆಲವರು ಹೇಳಿದ್ದಾರೆ. ಸದ್ಯ ‘ಮಹಾನಟಿ 2’ನಲ್ಲಿ ಮೆಗಾ ಆಡಿಷನ್ ನಡೆಯುತ್ತಿದೆ. ನಿಜವಾದ ಎಪಿಸೋಡ್ ಶೀಘ್ರವೇ ಆರಂಭ ಆಗಲಿದೆ. ಈ ವೇದಿಕೆ ಮೇಲೆ ರಮೇಶ್ ಅರವಿಂದ್, ಪ್ರೇಮಾ, ನಿಶ್ವಿಕಾ ನಾಯ್ಡು, ತರುಣ್ ಸುಧೀರ್ ಜಡ್ಜ್ ಸ್ಥಾನದಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:52 am, Mon, 16 June 25