Divya Uruduga: ಅರವಿಂದ್ ಕೆಪಿ ಜನ್ಮದಿನಕ್ಕಾಗಿ ದಿವ್ಯಾ ಉರುಡುಗ ವಿಶೇಷ ಸಾಲುಗಳು; ಇಲ್ಲಿದೆ ಆ ಕವಿತೆ

| Updated By: ರಾಜೇಶ್ ದುಗ್ಗುಮನೆ

Updated on: Jan 03, 2023 | 11:37 AM

ದೊಡ್ಮನೆಯಿಂದ ಹೊರ ಬಂದ ನಂತರದಲ್ಲಿ ಅರವಿಂದ್ ಕೆಪಿ ಅವರನ್ನು ದಿವ್ಯಾ ಭೇಟಿ ಮಾಡಿದ್ದಾರೆ. ಅರವಿಂದ್​ಗಾಗಿ ಬರೆದ ವಿಶೇಷ ಸಾಲುಗಳನ್ನು ಅವರು ಪೋಸ್ಟ್ ಮಾಡಿದ್ದಾರೆ.

Divya Uruduga: ಅರವಿಂದ್ ಕೆಪಿ ಜನ್ಮದಿನಕ್ಕಾಗಿ ದಿವ್ಯಾ ಉರುಡುಗ ವಿಶೇಷ ಸಾಲುಗಳು; ಇಲ್ಲಿದೆ ಆ ಕವಿತೆ
ದಿವ್ಯಾ-ಅರವಿಂದ್
Follow us on

ಬೈಕ್ ರೇಸರ್​ ಅರವಿಂದ್ ಕೆಪಿ (Aravind KP) ಹಾಗೂ ದಿವ್ಯಾ ಉರುಡುಗ ಮಧ್ಯೆ ಪ್ರೀತಿ ಮೊಳೆತಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 8’ರಲ್ಲಿ ಆರಂಭವಾದ ಇವರ ಪಯಣ ಈಗ ಹೊಸ ಅರ್ಥ ಪಡೆದುಕೊಂಡಿದೆ. ಈ ಜೋಡಿ ಬೇಗ ಮದುವೆ ಆಗಲಿ ಎಂದು ಫ್ಯಾನ್ಸ್​ ಕೋರುತ್ತಿದ್ದಾರೆ. ಇಷ್ಟು ದಿನ ದಿವ್ಯಾ ಅವರು ‘ಬಿಗ್ ಬಾಸ್’ (Bigg Bosss) ಮನೆಯಲ್ಲಿದ್ದರು. ಅವರು ‘ಬಿಗ್ ಬಾಸ್ ಕನ್ನಡ ಸೀಸನ್​ 9’ರಲ್ಲಿ ನಾಲ್ಕನೇ ರನ್ನರ್ ಅಪ್​ ಆಗಿದ್ದಾರೆ. ದೊಡ್ಮನೆಯಿಂದ ಹೊರಬಂದ ಅವರು ಅರವಿಂದ್​ಗಾಗಿ ವಿಶೇಷ ಸಾಲುಗಳನ್ನು ಬರೆದಿದ್ದಾರೆ. ಇದನ್ನು ಓದಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಡಿಸೆಂಬರ್ 8ಕ್ಕೆ ಅರವಿಂದ್ ಕೆಪಿ ಅವರು ಬರ್ತ್​​ಡೇ ಆಚರಿಸಿಕೊಂಡರು. ಆ ಸಂದರ್ಭದಲ್ಲಿ ದಿವ್ಯಾ ಅವರು ಬಿಗ್ ಬಾಸ್ ಮನೆಯಲ್ಲಿದ್ದರು. ಹೀಗಾಗಿ, ಒಟ್ಟಾಗಿ ಜನ್ಮದಿನ ಆಚರಿಸಿಕೊಳ್ಳಲು ಸಾಧ್ಯವಾಗಿಲ್ಲ. ದೊಡ್ಮನೆಯಿಂದ ಹೊರ ಬಂದ ನಂತರದಲ್ಲಿ ಅರವಿಂದ್ ಕೆಪಿ ಅವರನ್ನು ದಿವ್ಯಾ ಭೇಟಿ ಮಾಡಿದ್ದಾರೆ. ಅರವಿಂದ್​ಗಾಗಿ ಬರೆದ ವಿಶೇಷ ಸಾಲುಗಳನ್ನು ಅವರು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ
ಬಿಗ್ ಬಾಸ್​ನಲ್ಲಿ ಅರವಿಂದ್-ದಿವ್ಯಾ ಉರುಡುಗ ಜೋಡಿ ನೋಡಿ ಮನೆ ಮಂದಿ ಹೇಳಿದ್ದು ಒಂದೇ ಮಾತು
ಅರವಿಂದ್ ಬಳಿಕ ಬಿಗ್ ಬಾಸ್ ಮನೆಗೆ ಕಾಲಿಟ್ಟ ವಾಸುಕಿ ವೈಭವ್​; ಸ್ಪರ್ಧಿಗಳಿಗೆ ಸಿಕ್ಕಾಪಟ್ಟೆ ಸರ್​ಪ್ರೈಸ್​
ದಿವ್ಯಾ ಉರುಡುಗಗೆ ಕಣ್ಣೀರು ಹಾಕಿಸಿದ್ದ ರೂಪೇಶ್ ರಾಜಣ್ಣ; ದೊಡ್ಮನೆಯಲ್ಲಿ ಟಾಂಗ್ ಕೊಟ್ಟ ಅರವಿಂದ್ ಕೆಪಿ
Divya Uruduga: ದಿವ್ಯಾ ಉರುಡುಗ ಸಲುವಾಗಿ ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿದ ಅರವಿಂದ್ ಕೆಪಿ

ಕಡಲ ಅಲೆಯು ತನ್ನ ಕಾಂತಿ ತೈದು ಸುರಿದು

ಬೀಸೋ ಗಾಳಿ ತನ್ನ ವೇಗ ಧಾರೆ ಎರೆದು

ಪ್ರಕೃತಿಯೆ ಪ್ರೀತಿಸುವ ಪುಣ್ಯದ ಸಿರಿ ನೀ

ಇಡೀ ದೇಶವೆ ಬೆನ್ ತಟ್ಟೋ ಭಾಗ್ಯದ ನಿಧಿ ನೀ

ನೀ ನಗುವಿಗೆ ನಾಯಕ

ಪ್ರೀತಿ ನಗರದ ಮಾಂತ್ರಿಕ

ಹೆತ್ತ ತಾಯಿ ಪುಣ್ಯ

ಜನ್ಮ ಭೂಮಿ ಧನ್ಯ

ನೀ ಕೋಟಿ ಮನಸಿಗೆ ಸ್ಫೂರ್ತಿ

ನೀ ಅರವಿಂದ್ ಕೆಪಿ

ಈ ಸಾಲಿನ ಕೊನೆಯಲ್ಲಿ ‘ಈ ಸಾಲುಗಳನ್ನು ಅರವಿಂದ್​ಗಾಗಿ ನಾನೇ ಬರೆದಿದ್ದು. ಇದರ ಕ್ರೆಡಿಟ್​ ನನಗೆ ಮಾತ್ರ ಸಲ್ಲಬೇಕು’ ಎಂದು ಬರೆದುಕೊಂಡಿದ್ದಾರೆ ದಿವ್ಯಾ. ಈ ಮೊದಲು ಬಿಗ್ ಬಾಸ್ ಮನೆಯಲ್ಲಿರುವಾಗ ರೂಪೇಶ್ ರಾಜಣ್ಣ ಬರೆದ ಹಾಡನ್ನು ದಿವ್ಯಾ ಹಾಡಿದ್ದರು. ತಮಗೆ ಕ್ರೆಡಿಟ್ ನೀಡಿಲ್ಲ ಎಂದು ರೂಪೇಶ್ ರಾಜಣ್ಣ ಆರೋಪಿಸಿದ್ದರು. ಈ ಕಾರಣಕ್ಕೆ ದಿವ್ಯಾ ಈ ಸಾಲುಗಳನ್ನು ಬರೆದಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ಅರವಿಂದ್-ದಿವ್ಯಾ ಉರುಡುಗ ಜೋಡಿ ನೋಡಿ ಮನೆ ಮಂದಿ ಹೇಳಿದ್ದು ಒಂದೇ ಮಾತು

ಅರವಿಂದ್​​ಗಾಗಿ ದಿವ್ಯಾ ಬರೆದ ಸಾಲುಗಳು ಅಭಿಮಾನಿಗಳಿಗೆ ಇಷ್ಟವಾಗಿದೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅರವಿಂದ್ ಕೆಪಿ ಬಗ್ಗೆ ದಿವ್ಯಾ ಬರೆದ ಸಾಲುಗಳನ್ನು ನೋಡಿ ಫ್ಯಾನ್ಸ್​​ಗೆ ಖುಷಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ