ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಮುಕ್ತಾಯ ಆಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ 100 ದಿನಗಳ ಕಾಲ ಪ್ರಸಾರವಾದ ಈ ಶೋನ ಫಿನಾಲೆ ಕಾರ್ಯಕ್ರಮ ಡಿ.31ರ ರಾತ್ರಿ ಪ್ರಸಾರವಾಯಿತು. ನಟ ರೂಪೇಶ್ ಶೆಟ್ಟಿ (Roopesh Shetty) ಅವರಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ. ಬಿಗ್ ಬಾಸ್ 9ನೇ ಸೀಸನ್ನ ವಿನ್ನರ್ (Bigg Boss Kannada Winner) ಆಗಿ ಅವರು ಹೊರಹೊಮ್ಮಿದ್ದಾರೆ. ಒಟ್ಟು 60 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಒಂದು ಆಕರ್ಷಕ ಟ್ರೋಫಿ ಅವರ ಕೈ ಸೇರಿದೆ. ನಟ ರಾಕೇಶ್ ಅಡಿಗ (Rakesh Adiga) ರನ್ನರ್ ಅಪ್ ಆಗಿದ್ದಾರೆ. ಒಂದು ವರ್ಗದ ಪ್ರೇಕ್ಷಕರಿಗೆ ಇದು ಬೇಸರ ಮೂಡಿಸಿದೆ. ‘ರಾಕೇಶ್ ಅಡಿಗ ಅವರೇ ಬಿಗ್ ಬಾಸ್ ವಿನ್ನರ್ ಆಗಬೇಕಿತ್ತು’ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ.
ಪ್ರತಿ ಬಾರಿ ಬಿಗ್ ಬಾಸ್ ವಿನ್ನರ್ ಹೆಸರು ಘೋಷಣೆ ಆದಾಗಲೂ ಈ ರೀತಿಯ ಅಭಿಪ್ರಾಯ ವ್ಯಕ್ತವಾಗುತ್ತದೆ. ಟ್ರೋಫಿ ಗೆಲ್ಲಲು ನಿಜವಾಗಿ ಅರ್ಹವಾದ ವ್ಯಕ್ತಿಯು ರನ್ನರ್ ಅಪ್ ಆಗುತ್ತಾರೆ ಎಂಬುದು ಕೆಲವರು ವಾದ. ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಫಿನಾಲೆ ಮುಗಿಯುತ್ತಿದ್ದಂತೆಯೇ ಈ ಚರ್ಚೆ ಶುರುವಾಗಿದೆ. ರೂಪೇಶ್ ಶೆಟ್ಟಿ ವಿನ್ನರ್ ಎಂದು ಕಿಚ್ಚ ಸುದೀಪ್ ಘೋಷಿಸಿದರು. ಆದರೆ ರಾಕೇಶ್ ಅಡಿಗ ವಿನ್ ಆಗಬೇಕಿತ್ತು ಎಂಬ ಅಭಿಪ್ರಾಯ ಹಲವರಿಂದ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: Rakesh Adiga: ‘ಬಿಗ್ ಬಾಸ್’ ರನ್ನರ್ ಅಪ್ ಆದ ರಾಕೇಶ್ ಅಡಿಗ; ವಿನ್ನರ್ ಪಟ್ಟ ಜಸ್ಟ್ ಮಿಸ್
ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ ಅವರು ಸಮನಾಗಿ ಫೈಟ್ ನೀಡುತ್ತಾ ಬಂದಿದ್ದರು. ಇಬ್ಬರೂ ಕೂಡ ಬಿಗ್ ಬಾಸ್ ಒಟಿಟಿ ಮೊದಲ ಸೀಸನ್ನಿಂದ ಟಿವಿ ಸೀಸನ್ ತನಕ ಸಾಗಿ ಬಂದರು. ಒಟಿಟಿ ಮತ್ತು ಟಿವಿ ಸೀಸನ್ ಸೇರಿದಂತೆ 140 ದಿನಗಳ ಜರ್ನಿಯನ್ನು ಪೂರೈಸಿದ್ದಾರೆ. ಗೆದ್ದಿರುವ ರೂಪೇಶ್ ಶೆಟ್ಟಿಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅವರ ಸಿನಿಮಾ ಜರ್ನಿಗೆ ಶುಭವಾಗಲಿ ಎಂದು ಹಾರೈಸಲಾಗುತ್ತಿದೆ.
ಚಿತ್ರರಂಗದಲ್ಲಿ ರಾಕೇಶ್ ಅಡಿಗ ಅವರು ಅನೇಕ ವರ್ಷಗಳಿಂದ ಇದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದಾರೆ. ಬಿಗ್ ಬಾಸ್ಗೆ ಕಾಲಿಟ್ಟ ಬಳಿಕ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಯಿತು. ರಾಕೇಶ್ ಅಡಿಗ ಅವರ ನಿಜವಾದ ವ್ಯಕ್ತಿತ್ವ ಏನು ಎಂಬುದನ್ನು ತಿಳಿಯಲು ಈ ರಿಯಾಲಿಟಿ ಶೋ ಸಹಕಾರಿ ಆಯಿತು. ಅದೇ ರೀತಿ ರೂಪೇಶ್ ಶೆಟ್ಟಿ ಅವರಿಗೂ ಈ ಕಾರ್ಯಕ್ರಮದಿಂದ ಸಖತ್ ಜನಪ್ರಿಯತೆ ಸಿಕ್ಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.