
ಕಿರುತೆರೆ ವೀಕ್ಷಕರಿಗೆ ವಿಭಿನ್ನ ಹಾಗೂ ಭಾವನಾತ್ಮಕ ಕಥೆಗಳನ್ನು ನೀಡುತ್ತಾ ಬಂದಿರುವ ಜೀ ಕನ್ನಡ ವಾಹಿನಿ, ಈಗ ಮತ್ತೊಂದು ಕೌತುಕಭರಿತ ಹಾಗೂ ಕುಟುಂಬ ಆಧಾರಿತ ಹೊಸ ಧಾರಾವಾಹಿ ‘ಗೌರಿಪುತ್ರ’ ಪ್ರಸಾರಕ್ಕೆ ಸಜ್ಜಾಗಿದೆ. ಈ ಧಾರಾವಾಹಿಯ ಹೊಸ ಪ್ರೋಮೋ ಪ್ರೇಕ್ಷಕರ ಗಮನ ಸೆಳೆದಿದ್ದು, ಕಥೆಯ ತಿರುಳೇನು ಎಂಬುದರ ಸುಳಿವು ನೀಡಿದೆ.
ರಿತ್ವಿಕ್ ಕೃಪಾಕರ್: ‘ರಾಮಾಚಾರಿ’ ಧಾರಾವಾಹಿಯ ಮೂಲಕ ಮನೆಮಾತಾಗಿರುವ ನಟ ರಿತ್ವಿಕ್ ಕೃಪಾಕರ್ ಈ ಧಾರಾವಾಹಿಯಲ್ಲಿ ನಾಯಕನಾಗಿ (ಮಾಸ್ ಮತ್ತು ಕ್ಲಾಸ್ ಲುಕ್‌ನಲ್ಲಿ) ಕಾಣಿಸಿಕೊಳ್ಳಲಿದ್ದಾರೆ.
ಅನು ಪ್ರಭಾಕರ್: ಚಿತ್ರರಂಗದ ಹಿರಿಯ ಹಾಗೂ ಜನಪ್ರಿಯ ನಟಿ ಅನು ಪ್ರಭಾಕರ್ ಅವರು ಮುಖ್ಯ ಪಾತ್ರವಾದ ‘ಗೌರಿ’ಯಾಗಿ ಬಣ್ಣ ಹಚ್ಚಿದ್ದಾರೆ.
ಇತರ ಕಲಾವಿದರು: ಹಿರಿಯ ನಟ ರಮೇಶ್ ಭಟ್, ಮಹತಿ ಭಟ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಈ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.
ಬಿಡುಗಡೆಯಾಗಿರುವ ಹೊಸ ಪ್ರೋಮೋ ಪ್ರಕಾರ, ತಾಯಿಯೊಬ್ಬಳ ಆಸೆಯನ್ನು ಈಡೇರಿಸಲು ಮಗ ಹೊರಡುವ ಭಾವನಾತ್ಮಕ ಹಾಗೂ ಅನಿರೀಕ್ಷಿತ ತಿರುವುಗಳ ಕಥೆ ಇದಾಗಿದೆ. ಅಮ್ಮನಿಗಾಗಿ, ಅಮ್ಮನಿಗೆ ತವರು ಮನೆ ಮರಳಿಸಿಕೊಡಲು ಮದುವೆ ಮಂಟಪದಲ್ಲಿ ತನಗಿಷ್ಟವಿಲ್ಲದ ಹುಡುಗೊ ಜೊತೆ ಮದುವೆ ಆಗುವ ಕಥೆ ಇದರಲ್ಲಿದೆ. ಕಥೆಯ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ದ್ವಿಗುಣಗೊಳಿಸಿದೆ.
ಇದನ್ನೂ ಓದಿ: ಜೀ ಕನ್ನಡದಲ್ಲಿ ಹೊಸ ಧಾರಾವಾಹಿ; ರಿತ್ವಿಕ್ ಕೃಪಾಕರ್ ಹಾಗೂ ಅನು ಪ್ರಭಾಕರ್ ಅಭಿನಯದ ‘ಗೌರಿಪುತ್ರ’ ಶೀಘ್ರದಲ್ಲೇ ಪ್ರಾರಂಭ
ಹೊಸ ಶೈಲಿಯ ಕಥಾಹಂದರ ಹೊಂದಿರುವ ‘ಗೌರಿಪುತ್ರ’ ಧಾರಾವಾಹಿಯು ನವೆಂಬರ್ 16ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಧಾರಾವಾಹಿಯನ್ನು ನೋಡಲು ವೀಕ್ಷಕರು ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 5:02 pm, Sat, 31 October 26