‘ಬಿಗ್ ಬಾಸ್’ ಹೊಸ ಸೀಸನ್ ಆರಂಭಕ್ಕೆ ಕ್ಷಣಗಣನೆ; ಮೂರು ಪಟ್ಟು ಹೆಚ್ಚಿತು ನಿರೂಪಕನ ಸಂಭಾವನೆ

ಭಾರತದಲ್ಲಿ ಬಿಗ್ ಬಾಸ್ ಮೊದಲು ಆರಂಭವಾಗಿದ್ದೇ ಹಿಂದಿಯಲ್ಲಿ. ಕಳೆದ ಒಂದಷ್ಟು ಸೀಸನ್​ಗಳನ್ನು ಸಲ್ಮಾನ್ ಖಾನ್ ಅವರು ನಡೆಸಿಕೊಡುತ್ತಿದ್ದಾರೆ. ಅವರ ಖಡಕ್ ನಿರೂಪಣೆ ವೀಕ್ಷಕರಿಗೆ ಇಷ್ಟವಾಗುತ್ತದೆ.

‘ಬಿಗ್ ಬಾಸ್’ ಹೊಸ ಸೀಸನ್ ಆರಂಭಕ್ಕೆ ಕ್ಷಣಗಣನೆ; ಮೂರು ಪಟ್ಟು ಹೆಚ್ಚಿತು ನಿರೂಪಕನ ಸಂಭಾವನೆ
ಬಿಗ್ ಬಾಸ್
TV9kannada Web Team

| Edited By: Rajesh Duggumane

Jul 15, 2022 | 2:30 PM

‘ಬಿಗ್ ಬಾಸ್​’ (Bigg Boss) ರಿಯಾಲಿಟಿ ಶೋ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ. ಕಿರುತೆರೆ ಮಂದಿ ಇದನ್ನು ತುಂಬಾನೇ ಇಷ್ಟಪಟ್ಟು ವೀಕ್ಷಣೆ ಮಾಡುತ್ತಾರೆ. ವಿವಿಧ ಮನಸ್ಥಿತಿಯ ಸ್ಪರ್ಧಿಗಳು ಮನೆ ಒಳಗೆ ತೆರಳುತ್ತಾರೆ. ಈ ವೇಳೆ ಅಲ್ಲಿ ಸಾಕಷ್ಟು ಹಾಸ್ಯ, ರಾಜಕೀಯ, ಕೀಟಲೆ, ಜಗಳ ನಡೆಯುತ್ತದೆ. ಈ ಕಾರಣಕ್ಕೂ ಸಾಕಷ್ಟು ಮಂದಿಗೆ ಈ ಶೋ ಇಷ್ಟವಾಗುತ್ತದೆ. ಇನ್ನು, ಈ ರಿಯಾಲಿಟಿ ಶೋನಲ್ಲಿ ನಿರೂಪಣೆ ಕೂಡ ತುಂಬಾನೇ ಮುಖ್ಯ. ಈಗ ‘ಹಿಂದಿ ಬಿಗ್​ ಬಾಸ್ 16’ (Hindi Bigg Boss 16) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೊಸ ಸೀಸನ್ ಆರಂಭಕ್ಕೂ ಮುನ್ನ ಸಲ್ಮಾನ್​ ಖಾನ್ ಅವರ ಸಂಭಾವನೆ ಹೆಚ್ಚಾಗಿರುವ ಬಗ್ಗೆ ವರದಿ ಆಗಿದೆ.

ಭಾರತದಲ್ಲಿ ಬಿಗ್ ಬಾಸ್ ಮೊದಲು ಆರಂಭವಾಗಿದ್ದೇ ಹಿಂದಿಯಲ್ಲಿ. ಕಳೆದ ಒಂದಷ್ಟು ಸೀಸನ್​ಗಳನ್ನು ಸಲ್ಮಾನ್ ಖಾನ್ ಅವರು ನಡೆಸಿಕೊಡುತ್ತಿದ್ದಾರೆ. ಅವರ ಖಡಕ್ ನಿರೂಪಣೆ ವೀಕ್ಷಕರಿಗೆ ಇಷ್ಟವಾಗುತ್ತದೆ. ಅವರು ಸ್ಪರ್ಧಿಗಳನ್ನು ಹ್ಯಾಂಡಲ್ ಮಾಡುವ ರೀತಿಯೂ ಮೆಚ್ಚಿಕೊಳ್ಳುವಂತಹದ್ದು. ಸಲ್ಮಾನ್ ಖಾನ್ ಅವರ ನಿರೂಪಣೆ ನೋಡುವ ಉದ್ದೇಶದಿಂದಲೇ ಬಿಗ್​ ಬಾಸ್ ನೋಡುವವರೂ ಇದ್ದಾರೆ. ಕಳೆದ ಸೀಸನ್​ನಲ್ಲಿ ಅವರು ಪ್ರತಿ ಎಪಿಸೋಡ್​ಗೆ 15 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಿದ್ದರು ಎಂದು ಈ ಮೊದಲು ವರದಿ ಆಗಿತ್ತು. ಈಗ ಮೂರು ಪಟ್ಟು ಹೆಚ್ಚು ಎಂದರೆ, ಅವರು ಪ್ರತಿ ಎಪಿಸೋಡ್​ಗೆ ಬರೋಬ್ಬರಿ 45 ಕೋಟಿ ರೂಪಾಯಿ ಪಡೆದಂತಾಗುತ್ತದೆ.

ಸಲ್ಮಾನ್ ಖಾನ್ ಜನಪ್ರಿಯತೆ ತುಂಬಾನೇ ದೊಡ್ಡದು. ಬಾಲಿವುಡ್​ನಲ್ಲಿ ಅವರು ದೊಡ್ಡ ಹೆಸರು ಮಾಡಿದ್ದಾರೆ. ಹಲವು ಸಿನಿಮಾ ಕೆಲಸಗಳಲ್ಲಿ ಸಲ್ಮಾನ್ ಖಾನ್ ಬ್ಯುಸಿ ಇದ್ದಾರೆ. ಈ ಮಧ್ಯೆ ಅವರು ‘ಬಿಗ್ ಬಾಸ್​’ ಶೂಟಿಂಗ್​ಗೋಸ್ಕರ ಒಂದು ದಿನ ಮುಡಿಪಿಡಬೇಕಿದೆ. ಈ ಕಾರಣದಿಂದಲೂ ಅವರು ಸಂಭಾವನೆ ಹೆಚ್ಚಿಸಿ ಎಂದು ಕೋರಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಹತ್ಯೆಗೆ ಖರೀದಿ ಆಗಿತ್ತು 4 ಲಕ್ಷ ರೂಪಾಯಿ ಗನ್; ಹೊರಬಿತ್ತು ಶಾಕಿಂಗ್ ನ್ಯೂಸ್

ಇದನ್ನೂ ಓದಿ

ಕಳೆದ ವರ್ಷ ತೇಜಸ್ವಿ ಪ್ರಕಾಶ್ ಬಿಗ್​ ಬಾಸ್ ವಿನ್ನರ್ ಆಗಿದ್ದರು. ಪ್ರತಿಕ್​ ಸೆಹಜ್​ಪಾಲ್​ ಅವರು ಮೊದಲ ರನ್ನರ್ ಅಪ್​ ಆಗಿದ್ದರು. ಈಗ ಬಿಗ್​ ಬಾಸ್ 16ನೇ ಸೀಸನ್​ಗೆ ಯಾವೆಲ್ಲ ಸ್ಪರ್ಧಿಗಳು ಬರಲಿದ್ದಾರೆ ಎಂಬ ಕುತೂಹಲ ಮೂಡಿದೆ. ಈ ಮಧ್ಯೆ ಕನ್ನಡ ಬಿಗ್ ಬಾಸ್ ಕೂಡ ಶೀಘ್ರವೇ ಆರಂಭ ಆಗಲಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada