‘ನಿಮ್ಮ ಕಮೆಂಟ್ಗಳು ನನ್ನ ಮೇಲೆ ಪ್ರಭಾವ ಬೀರಲ್ಲ’; ಒಂದು ವಿಚಾರಕ್ಕೆ ಅಪ್ಸೆಟ್ ಆದ ‘ಗಟ್ಟಿಮೇಳ’ ನಟಿ ನಿಶಾ ರವಿಕೃಷ್ಣನ್
ನಿಶಾ ಅವರು ತಮ್ಮದೇ ಯೂಟ್ಯೂಬ್ ಚಾನೆಲ್ ಮಾಡಿಕೊಂಡಿದ್ದಾರೆ. ಅಲ್ಲಿಯೂ ಅವರು ವಿವಿಧ ರೀತಿಯ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಈ ಮೂಲಕ ಫ್ಯಾನ್ಸ್ ಜತೆ ಸಂಪರ್ಕದಲ್ಲಿ ಇರಲು ಅವರು ಹೊಸ ಮಾರ್ಗ ಕಂಡು ಕೊಂಡಿದ್ದಾರೆ.
ನಟಿ ನಿಶಾ ರವಿಕೃಷ್ಣನ್ (Nisha Ravikrishnan) ಅವರು ‘ಗಟ್ಟಿಮೇಳ’ ಧಾರಾವಾಹಿ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಕಿರುತೆರೆ ವಲಯದಲ್ಲಿ ಅಮೂಲ್ಯ ಎಂದೇ ಫೇಮಸ್ ಆದವರು ನಿಶಾ. ಜೀ ಕನ್ನಡದಲ್ಲಿ ಪ್ರಸಾರವಾಗುವ ಈ ಧಾರಾವಾಹಿಯಿಂದ ಅವರ ವೃತ್ತಿ ಜೀವನದ ಮೈಲೇಜ್ ಹೆಚ್ಚಿದೆ. ಈಗ ಅವರು ತೆಲುಗಿನಲ್ಲೂ ಧಾರಾವಾಹಿ ಮಾಡುತ್ತಿದ್ದಾರೆ. ಜೀ ತೆಲುಗಿನಲ್ಲಿ ಪ್ರಸಾರವಾಗುತ್ತಿರುವ ‘ಮುತ್ಯಮಂತ ಮುದ್ದು’ (Muthyamantha Muddu ) ಧಾರಾವಾಹಿಯಲ್ಲಿ ಅವರು ಗೀತಾ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಮೂಲಕ ತೆಲುಗು ಕಿರುತೆರೆಯಲ್ಲೂ ಅವರು ಫೇಮಸ್ ಆಗಿದ್ದಾರೆ. ಅವರು ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಎಂಬುದು ಅನೇಕರ ಕೋಪಕ್ಕೆ ಕಾರಣವಾಗಿದೆ. ನಿಶಾ ಅವರು ಕನ್ನಡ ಬಿಟ್ಟು ತೆಲುಗಿಗೆ ಹೋಗಿದ್ದಾರೆ ಎಂದು ಕೆಲವರು ಕೋಪ ತೋಡಿಕೊಂಡಿದ್ದಾರೆ. ಇದಕ್ಕೆ ನಿಶಾ ಅವರು ಖಡಕ್ ಉತ್ತರ ನೀಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಲೈವ್ ಬಂದಿರುವ ನಿಶಾ, ‘ತುಂಬಾ ಕಮೆಂಟ್ಸ್ ಓದಿದೆ. ನಾನು ಯಾವ ಪೋಸ್ಟ್ ಹಾಕಿದರೂ ಒಂದೇ ಕಮೆಂಟ್. ನಾನು ಯಾವುದೇ ನೆಗೆಟಿವ್ ಅಂಶಗಳನ್ನು ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ನೀವು ಯಾಕೆ ಅಷ್ಟು ಒರಟಾಗಿ ಮೆಸೇಜ್ ಮಾಡ್ತಾ ಇದೀರಿ ಎಂದು ಗೊತ್ತಿಲ್ಲ. ಅದು ನನಗೆ ಕೋಪ ಬರಿಸುತ್ತಿದೆ ಎಂದು ನಾನು ಹೇಳಲ್ಲ. ನಿಮ್ಮ ನೆಗೆಟಿವ್ ಕಮೆಂಟ್ಗಳಿಂದ ನನಗೇನೂ ಎಫೆಕ್ಟ್ ಆಗುತ್ತಿಲ್ಲ. ಆದರೆ, ಅದು ಕಮೆಂಟ್ ಬಾಕ್ಸ್ನಲ್ಲಿ ಅಷ್ಟು ಚೆನ್ನಾಗಿ ಕಾಣುತ್ತಿಲ್ಲ’ ಎಂದಿದ್ದಾರೆ.
‘ನಿಮಗೆ ಇಷ್ಟವಾಗಿಲ್ಲ ಎಂದರೆ ನೋಡಬೇಡಿ. ಆದರೆ, ತಪ್ಪಾಗಿ ಕಮೆಂಟ್ ಮಾಡೋದು ಸರಿಯಲ್ಲ. ನಾನು ಎಲ್ಲಾ ಭಾಷೆಯನ್ನೂ ಪ್ರೀತಿಸುತ್ತೀನಿ. ಇದು ನನ್ನ ಕರಿಯರ್. ಮುಂದೆ ಸುಮಾರು ಭಾಷೆಗಳಲ್ಲಿ ಆ್ಯಕ್ಟ್ ಮಾಡೋ ಅವಕಾಶ ಸಿಗಬಹುದು, ಆಗ ನಾನು ನಟಿಸುತ್ತೇನೆ. ಎಲ್ಲರ ಜತೆ ಪ್ರೀತಿಯಿಂದ ಮಾತನಾಡೋಣ. ಎಲ್ಲ ಭಾಷೆಯನ್ನು ಗೌರವಿಸೋಣ. ಎಲ್ಲ ಭಾಷೆಯನ್ನು ಪ್ರೀತಿಸೋಣ. ನಿಮ್ಮ ನೆಗೆಟಿವ್ ಕಮೆಂಟ್ಗಳು ನನ್ನ ತಲೆಗೆ ಹೋಗಲ್ಲ’ ಎಂದಿದ್ದಾರೆ ಅವರು.
View this post on Instagram
ಇದನ್ನೂ ಓದಿ: ‘ಓಂ’ ಸಿನಿಮಾ ಸ್ಟೈಲ್ನಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ಗೆ ಶಿವರಾಜ್ಕುಮಾರ್ ಎಂಟ್ರಿ; ಇಲ್ಲಿದೆ ವಿಡಿಯೋ
ನಿಶಾ ಅವರು ತಮ್ಮದೇ ಯೂಟ್ಯೂಬ್ ಚಾನೆಲ್ ಮಾಡಿಕೊಂಡಿದ್ದಾರೆ. ಅಲ್ಲಿಯೂ ಅವರು ವಿವಿಧ ರೀತಿಯ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಈ ಮೂಲಕ ಫ್ಯಾನ್ಸ್ ಜತೆ ಸಂಪರ್ಕದಲ್ಲಿ ಇರಲು ಅವರು ಹೊಸ ಮಾರ್ಗ ಕಂಡು ಕೊಂಡಿದ್ದಾರೆ. ‘ಗಟ್ಟಿಮೇಳ’ ಧಾರಾವಾಹಿ ಕಥಾನಾಯಕ ರಕ್ಷಿತ್ ಜತೆಗಿನ ವಿಡಿಯೋ ಒಂದನ್ನು ಅವರು ಯೂಟ್ಯೂಬ್ನಲ್ಲಿ ಹಂಚಿಕೊಂಡಿದ್ದರು.
Published On - 4:32 pm, Thu, 14 July 22