Honganasu: ಕೊನೆಗೂ ಪ್ರೀತಿ ವಿಚಾರ ಬಾಯ್ಬಿಟ್ಟ ರಿಷಿ: ವಸುಧರಾಗೆ ಲವ್ ಪ್ರಪೋಸ್ ಮಾಡ್ತಾನಾ?

| Updated By: ಮದನ್​ ಕುಮಾರ್​

Updated on: Dec 06, 2022 | 4:16 PM

Honganasu Serial Update: ಮಹೇಂದ್ರ ಬೇಕು ಅಂತನೇ ರಿಷಿ ಮತ್ತು ಸಾಕ್ಷಿಯ ಮದುವೆ ಕಾರ್ಡ್ ಡಿಸೈನ್ ಮಾಡಿ ದೇವಯಾನಿಗೆ ಕಳುಹಿಸಿದ. ಅದನ್ನು ನೋಡಿ ದೇವಯಾನಿ ಫುಲ್ ಖುಷಿ ಆದಳು.

Honganasu: ಕೊನೆಗೂ ಪ್ರೀತಿ ವಿಚಾರ ಬಾಯ್ಬಿಟ್ಟ ರಿಷಿ: ವಸುಧರಾಗೆ ಲವ್ ಪ್ರಪೋಸ್ ಮಾಡ್ತಾನಾ?
ಹೊಂಗನಸು ಸೀರಿಯಲ್
Follow us on

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ವಸುಧರಾ ಜೊತೆ ಎಕ್ಸಾಮ್ ಸೆಂಟರ್‌ಗೆ ಹೊರಟ ರಿಷಿ. ‘ನಿನ್ನ ಜೊತೆ ಬರಲ್ಲ ಒಬ್ಬಳೇ ಹೋಗು’ ಎಂದು ವಸುಧರಾ ಮೇಲೆ ರೇಗಿದ್ದ ರಿಷಿ ದಿಢೀರ್ ಅಂತ ಹೊರಟ. ರಿಷಿ ಬಂದಿದ್ದು ವಸುಧರಾ ಖುಷಿ ಹೆಚ್ಚಾಯಿತು. ಆದರೆ ರಿಷಿ ಮತ್ತು ವಸುಧರಾ ಇಬ್ಬರನ್ನೂ ಫಾಲೋ ಮಾಡಿಕೊಂಡು ಅವರ ಹಿಂದೆಯೇ ಹೊರಟಳು ಸಾಕ್ಷಿ. ದೇವಯಾನಿ ಪ್ಲಾನ್ ಪ್ರಕಾರ ವಸುಧರಾ ಎಕ್ಸಾಮ್ ಬರೆಯದ ಹಾಗೆ ತಡೆಯಲು ಬಂದಿದ್ದಾಳೆ ಸಾಕ್ಷಿ.

ವಸುಧರಾ ಮತ್ತು ರಿಷಿ ಇಬ್ಬರೂ ಎಕ್ಸಾಮ್ ಬರೆಯಬೇಕಿದ್ದ ಜಾಗಕ್ಕೆ ಬಂದರು. ಇವರಿಬ್ಬರ ಹಿಂದೆಯೇ ಸಾಕ್ಷಿ ಕೂಡ ಎಂಟ್ರಿ ಕೊಟ್ಟಳು. ವಸುಧರಾಳನ್ನು ಕರ್ಕೊಂಡು ಸೀದಾ ಹೋಟೆಲ್‌ಗೆ ಬಂದ ರಿಷಿ. ವಸುಧರಾಳನ್ನು ರೂಮಿನಲ್ಲಿ ಬಿಟ್ಟು ತಾನು ಕಾರಿನಲ್ಲೇ ಕುಳಿತ ರಿಷಿ. ರಿಷಿ ಹೋಟೆಲಿನ ಹೊರಗೆ ಕಾರಿನಲ್ಲಿ ಕುಳಿತಿದ್ದನ್ನು ಗಮನಿಸಿದಳು ಸಾಕ್ಷಿ. ಇತ್ತ ರಿಷಿ ಎಲ್ಲೋದ ಎಂದು ದೇವಯಾನಿಗೆ ಯೋಚನೆ ಹೆಚ್ಚಾಯಿತು. ರಿಷಿಗೆ ಫೋನ್ ಮಾಡಿದಳು ದೇವಯಾನಿ. ‘ಹೊರಗಡೆ ಇದ್ದೀನಿ, ಬ್ಯುಸಿ ಇದ್ದೀನಿ’ ಅಂತ ಫೋನ್ ಕಟ್ ಮಾಡಿದ. ರಿಷಿಯ ವರ್ತನೆ ದೇವಯಾನಿಗೆ ಅನುಮಾನ ಮೂಡಿಸಿತು. ರಿಷಿ ತನ್ನ ಕೈಯಿಂದ ತಪ್ಪಿಹೋಗುತ್ತಿದ್ದಾನೆ ಅಂದುಕೊಂಡಳು. ದೇವಯಾನಿಗೆ ಫೋನ್ ಮಾಡಿದಳು ಸಾಕ್ಷಿ. ಆದರೆ ರಿಷಿ ಬಂದಿರುವ ವಿಚಾರವನ್ನು ಹೇಳದೆ ಫೋನ್ ಕಟ್ ಮಾಡಿದಳು ಸಾಕ್ಷಿ. ದೇವಯಾನಿಗೆ ಹೇಳಿದರೆ ತನ್ನ ಕೆಲಸ ಕೆಡುತ್ತೆ ಎಂದು ಸೈಲೆಂಟ್ ಆದಳು ಸಾಕ್ಷಿ.

ಕಾರಿನಲ್ಲಿ ಕುಳಿತಿದ್ದ ರಿಷಿ ಎಫ್ಎಂನಲ್ಲಿ ಪ್ರಸಾರವಾಗುತ್ತಿದ್ದ ಲವ್ ಕಾರ್ಯಕ್ರಮಕ್ಕೆ ಫೋನ್ ಮಾಡಿದ. ತನ್ನ ಪ್ರೀತಿ ವಿಚಾರವನ್ನು ಬಹಿರಂಗ ಪಡಿಸಿದ. ವಸುಧರಾ ತನ್ನ ಹೃದಯ ಕದ್ದಿರುವ ಬಗ್ಗೆ ಮೊದಲ ಬಾರಿಗೆ ಹೇಳಿದ ರಿಷಿ. ರಿಷಿಯ ಮಾತನ್ನು ಮಹೇಂದ್ರ ಮತ್ತು ಜಗತಿ ಇಬ್ಬರೂ ಕೇಳಿಸಿಕೊಂಡು ಶಾಕ್ ಆದರು. ಹೃದಯದಲ್ಲಿ ಪ್ರೀತಿ ಇದ್ದರೂ ರಿಷಿ ಯಾಕೆ ಹೇಳಿಕೊಳ್ಳುತ್ತಿಲ್ಲ ಎಂದು ಮಹೇಂದ್ರ ಜಗತಿಗೆ ಕೇಳಿದ. ಇತ್ತ ರಿಷಿಯ ಮಾತನ್ನು ಕೊನೆಯಲ್ಲಿ ಮಾತ್ರ ಕೇಳಿಕೊಂಡಳು ವಸುಧರಾ. ರಿಷನೇ ಮಾತನಾಡಿದ್ದು ಎಂದು ಗೊತ್ತಿಲ್ಲ ವಸುಗೆ.

ಇದನ್ನೂ ಓದಿ: Honganasu: ಕೊನೆಗೂ ವಸುಧರಾಳನ್ನು ಎಕ್ಸಾಮ್‌ಗೆ ಕರ್ಕೊಂಡು ಹೋದ ರಿಷಿ; ಸಾಕ್ಷಿ ಕಣ್ಣಿಗೆ ಬೀಳ್ತಾರಾ?

ಬೆಳಗ್ಗೆ ಎದ್ದವಳೇ ಸಾಕ್ಷಿ ಎಕ್ಸಾಮ್ ನಡೆಯುತ್ತಿದ್ದ ಕಾಲೇಜಿಗೆ ಎಂಟ್ರಿ ಕೊಟ್ಟಳು. ವಸುಧರಾಳನ್ನು ಸುಮ್ಮನೆ ಬಿಡಲ್ಲ ಎಂದು ಹಠ ಹಿಡಿದು ನಿಂತಳು. ರಿಷಿ ಮತ್ತು ತನ್ನ ಮಧ್ಯೆ ಯಾರ್ ಬಂದರೂ ಬಿಡಲ್ಲ ಎಂದು ಕಾಲೇಜಿನ ಮುಂದೆಯೇ ಕಾಯುತ್ತಿದ್ದಳು ಸಾಕ್ಷಿ. ಇತ್ತ ವಸುಧರಾ ತಡವಾಯಿತು ಎಂದು ಅವಸರದಲ್ಲೇ ಹೊರಡುತ್ತಿದಳು. ವಸುಧರಾಳನ್ನು ಕರ್ಕೊಂಡು ಹೋಗಲು ರಿಷಿ ರೂಮಿಗೆ ಬಂದ. ವಸುಧರಾ ಎಡವಿ ರಿಷಿ ಮೇಲೆ ಬಿದ್ದಳು. ರಿಷಿ ಎದೆ ಬಡಿತ ಜಾಸ್ತಿ ಆಯಿತು. ಇಬ್ಬರೂ ರೊಮ್ಯಾಂಟಿಕ್ ಮೂಡ್‌ನಲ್ಲಿ ಕಳೆದು ಹೋದರು. ಬಳಿಕ ಎಕ್ಸಾಮ್‌ಗೆ ಸಮಯ ಆಯಿತು ಎಂದು ಇಬ್ಬರೂ ಹೊರಟರು.

ಇದನ್ನೂ ಓದಿ: Honganasu: ವಸುಧರಾ ಜತೆ ರಿಷಿಯ ಪ್ರೀತಿ ರಹಸ್ಯ ಬಯಲಿಗೆಳೆದ ಸಾಕ್ಷಿ: ದೇವಯಾನಿಗೆ ಖುಷಿ

ವಸುಧರಾ ಎಕ್ಸಾಮ್‌ಗೆ ಹೋಗುವ ಮೊದಲು ನಿನ್ನ ಜೊತೆ ತುಂಬಾ ಮಾತನಾಡಬೇಕು, ನಮ್ಮಿಬ್ಬರಿಗೆ ಸಂಬಂಧ ಪಟ್ಟ ವಿಚಾರ ಎಂದು ಹೇಳಿದ ರಿಷಿ. ಏನಿರಬಹುದು ಎಂದು ಅಚ್ಚರಿಯಲ್ಲೇ ಎಕ್ಸಾಮ್‌ಗೆ ಹೊರಟಳು ವಸು. ಇತ್ತ ಮಹೇಂದ್ರ ಬೇಕು ಅಂತನೇ ರಿಷಿ ಮತ್ತು ಸಾಕ್ಷಿಯ ಮದುವೆ ಕಾರ್ಡ್ ಡಿಸೈನ್ ಮಾಡಿ ದೇವಯಾನಿಗೆ ಕಳುಹಿಸಿದ. ಮಹೇಂದ್ರ ಕಳುಹಿಸಿದ್ದ ವೆಡ್ಡಿಂಗ್ ಕಾರ್ಡ್ ನೋಡಿ ದೇವಯಾನಿ ಫುಲ್ ಖುಷ್ ಆದಳು. ಇದನ್ನು ರಿಷಿಗೆ ಸೆಂಡ್ ಮಾಡ್ತೀನಿ ಅಂತ ಹೊರಟಳು. ವಸುಧರಾ ಎಕ್ಸಾಮ್ ಬರೆಯುತ್ತಾಳಾ? ತನ್ನ ಪ್ರೀತಿಯನ್ನು ವಸುಗೆ ಹೇಳುತ್ತಾನಾ ರಿಷಿ? ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.