Honganasu: ರಿಷಿ ನೋಡಲು ಬಿಡದೇ ವಸುಧರಾಳನ್ನು ಮನೆಯಿಂದ ಹೊರ ನೂಕಿದ ದೇವಯಾನಿ

Honganasu Serial Update: ನೀರು ಕುಡಿಯಲು ಪರದಾಡುತ್ತಿದ್ದ ರಿಷಿಯ ಸಹಾಯಕ್ಕೆ ಬಂದಳು ಜಗತಿ. ಆದರೆ ಆಕೆ ಕೊಟ್ಟ ನೀರನ್ನು ಮುಟ್ಟದೇ ರಿಷಿ ಸುಮ್ಮನೆ ಕುಳಿತ. ‘ದಯವಿಟ್ಟು ನನ್ನನ್ನು ಒಂಟಿಯಾಗಿ ಬಿಡಿ’ ಎಂದು ಆತ ಕೇಳಿಕೊಂಡ.

Honganasu: ರಿಷಿ ನೋಡಲು ಬಿಡದೇ ವಸುಧರಾಳನ್ನು ಮನೆಯಿಂದ ಹೊರ ನೂಕಿದ ದೇವಯಾನಿ
ಹೊಂಗನಸು ಸೀರಿಯಲ್
Updated By: ಮದನ್​ ಕುಮಾರ್​

Updated on: Dec 15, 2022 | 10:47 AM

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ಆಕ್ಸಿಡೆಂಟ್ ಆಗಿ ರಸ್ತೆ ಪಕ್ಕದಲ್ಲಿ ಬಿದ್ದಿದ್ದ ರಿಷಿಯನ್ನು ಆಸ್ಪತ್ರೆಗೆ ಕರ್ಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಬಳಿಕ ಮನೆಗೆ ಬಿಟ್ಟಳು ವಸುಧರಾ. ರಿಷಿ ಪರಿಸ್ಥಿತಿ ನೋಡಿ ಮನೆಯವರು ಶಾಕ್ ಆದರು. ಅವನನ್ನು ನೋಡಲು ಬಂದ ವಸುಧರಾಳನ್ನು ಮನೆಯೊಳಗೆ ಬರದಂತೆ ದೇವಯಾನಿ ತಡೆದಳು. ರಿಷಿಯನ್ನು ನೋಡದೇ ಅಳುತ್ತಲೇ ವಸುಧರಾ ಹೊರಟು ಹೋದಳು. ರಿಷಿಗೆ ಏನಾಯಿತು ಎಂದು ದೇವಯಾನಿ ಅಳುವ ನಾಟಕ ಮಾಡಿದಳು.

ರಿಷಿ ಬೇಗ ಗುಣವಾಗಲಿ ಎಂದು ದೇವರಿಗೆ ಪೂಜೆ ಮಾಡಿ ಪ್ರಸಾದ ತೆಗೆದುಕೊಂಡು ವಸುಧರಾ ಮತ್ತೆ ಬಂದಳು. ಆದರೆ ವಸುಧರಾಳನ್ನು ಮನೆಯೊಳಗೆ ಸೇರಿಸದೆ ಸರಿಯಾಗಿ ಬೈದು ಹಾಗೆ ಪಾವಾಸ್ ಕಳುಹಿಸಿದಳು ದೇವಯಾನಿ. ‘ರಿಷಿ ಸರ್‌ನ ನೋಡಬೇಕು, ಒಂದು ಸರಿ ಬಿಡಿ’ ಎಂದು ಕೇಳಿಕೊಂಡಳು ವಸುಧರಾ. ಆದರೆ ಎಷ್ಟೇ ವಸುನಾ ಒಳಗೆ ಬಿಡದೆ ಹಾಗೆ ಕಳುಹಿಸಿದಳು ದೇವಯಾನಿ. ವಸುಧರಾ ಹೇಗಾದರೂ ಮಾಡಿ ರಿಷಿನ ನೋಡಬೇಕು, ಈ ಪ್ರಸಾದ ಕೊಡಬೇಕೆಂದು ಗೇಟ್ ಬಳಿಯೇ ನಿಂತಳು.

ಇದನ್ನೂ ಓದಿ: Honganasu: ಪ್ರೀತಿ ತಿರಸ್ಕರಿಸಿದ ವಸುಧರಾ; ಸಾಕ್ಷಿಯನ್ನೇ ಮದುವೆ ಆಗ್ತಾನಾ ರಿಷಿ?

‘ನನ್ನನ್ನು ಆಸ್ಪತ್ರೆಗೆ ಕರ್ಕೊಂಡು ಹೋಗಿದ್ದು ಯಾರು’ ಎಂದು ಮಹೇಂದ್ರನಿಗೆ ಕೇಳಿದ ರಿಷಿ. ಯಾರು ಎಂದು ಹೇಳುವ ಮೊದಲೇ ವಸುಧರಾ ಅಲ್ವಾ ಎಂದ ರಿಷಿ. ಆಕ್ಸಿಡೆಂಟ್ ಹೇಗಾಯಿತು, ನೀನು ಯಾಕೆ ರಸ್ತೆ ಪಕ್ಕದಲ್ಲಿ ನಡೆದುಕೊಂಡು  ಹೋಗುತ್ತಿದೆ ಎಂದು ರಿಷಿಗೆ ಕೇಳಿದ ಮಹೇಂದ್ರ. ಆದರೆ ಯಾವುದೂ ನೆನಪಿಲ್ಲ ಎಂದ ಹೇಳಿ ರೂಮಿನಿಂದ ಹೊರ ಬಂದು ನಿಂತ ರಿಷಿ. ಗೇಟ್ ಬಳಿ ನಿಂತಿದ್ದ ವಸುಧರಾಳನ್ನು ನೋಡಿದ, ಆದರೆ ಇದು ತನ್ನ ಭ್ರಮೆ ಎಂದು ಕೊಂಡ ರಿಷಿ, ‘ಯಾಕಿಷ್ಟು ಕಾಡುತ್ತಿದ್ದೀಯಾ ವಸುಧರಾ’ ಎಂದು ಮನಸ್ಸಲ್ಲೇ ಅಂದುಕೊಂಡ.

ಇದನ್ನೂ ಓದಿ: Honganasu: ಜಗತಿಗೆ ಅನುಮಾನ ಮೂಡಿಸಿದ ವಸುಧರಾ ಮಾತು; ರಿಷಿ ಮುಂದಿನ ನಿಲುವೇನು?

ವಸುಧರಾ ಗೇಟ್ ಬಳಿ ನಿಂತಿದ್ದನ್ನು ನೋಡಿ ಮಾತನಾಡಿಸಲು ಬಂದ ಗೌತಮ್. ರಿಷಿಯ ಬಗ್ಗೆ ಇಷ್ಟು ಕಾಳಜಿ ತೋರಿಸುವ ವಸು ಅವನ ಪ್ರೀತಿಯನ್ನು ಯಾಕೆ ರಿಜೆಕ್ಟ್ ಮಾಡಿದಳು ಅಂತ ಯೋಚಿಸುತ್ತಲೇ ಬಂದು ವಸುನಾ ಮಾತನಾಡಿಸಿದ. ಪ್ರಸಾದವನ್ನು ರಿಷಿಗೆ ಕೊಡುವಂತೆ ಹೇಳಿ ಹೊರಟಳು ವಸು. ಇತ್ತ ಸಾಕ್ಷಿಯನ್ನು ಮನೆಗೆ ಕರೆಸಿಕೊಂಡಳು ದೇವಯಾನಿ. ಸಾಕ್ಷಿ ಬಂದವಳೇ ರಿಷಿ ರೂಮಿಗೆ ಎಂಟ್ರಿ ಕೊಟ್ಟಳು. ಸಾಕ್ಷಿ ಬಂದಿದ್ದು ನೋಡಿ ಮತ್ತಷ್ಟು ಸಿಟ್ಟಾದ ರಿಷಿ ಇಲ್ಲಿಗೆ ಯಾಕೆ ಬಂದಿದ್ದು ಎಂದು ಕೂಗಾಡಿದ. ಸಾಕ್ಷಿಯನ್ನು ಬೈದು ರೂಮಿನಿಂದ ಹೊರ ಕಳುಹಿಸಿದಳು ಜಗತಿ. ರಿಷಿಗೆ ಇಷ್ಟವಿಲ್ಲ ಎಂದರೂ ಯಾಕೆ ಬರ್ತೀಯಾ ಎಂದು ಸಾಕ್ಷಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಳು ಜಗತಿ. ಸಾಕ್ಷಿ ಮೇಲೆ ರೇಗಿದ ಜಗತಿಯ ಮೇಲೆ ದೇವಯಾನಿ ಕೆಂಡವಾದಳು. ಸಾಕ್ಷಿಯನ್ನು ಯಾಕೆ ಮನೆಯಿಂದ ಹೊರಹಾಕುತ್ತಿದ್ದೀಯಾ, ಅವಳು ಈ ಮನೆ ಸೊಸೆ ಆಗುವವಳು ಎಂದು ಜಗತಿಗೆ ಸರಿಯಾಗಿ ಬೈದಳು ದೇವಯಾನಿ. ಇಬ್ಬರ ಜಗಳ ತಾರಕಕ್ಕೇರಿತು. ಬಳಿಕ ಜಗತಿಯೇ ಸೈಲೆಂಟ್ ಆದಳು.

ನೀರು ಕುಡಿಯಲು ಪರದಾಡುತ್ತಿದ್ದ ರಿಷಿಯ ಸಹಾಯಕ್ಕೆ ಬಂದಳು ಜಗತಿ. ಏನ್ ಬೇಕು ಅಂತ ಕೇಳಿದ ಜಗತಿ ಬಳಿಕ ರಿಷಿಗೆ ಕುಡಿಯಲು ನೀರು ಕೊಟ್ಟಳು. ಆದರೆ ಜಗತಿ ಕೊಟ್ಟ ನೀರನ್ನು ಮುಟ್ಟದೆ ಸುಮ್ಮನೆ ಕುಳಿತ ರಿಷಿ. ಸಮಾಧಾನ ಮಾಡಲು ಹೋದ ಜಗತಿಗೆ ದಯವಿಟ್ಟು ಒಂಟಿಯಾಗಿ ಬಿಡುವಂತೆ ಕೇಳಿಕೊಂಡ ರಿಷಿ. ಅಳುತ್ತಾ ರೂಮಿನಿಂದ ಹೋದಳು ಜಗತಿ. ರಿಷಿಯ ಸಹಾಯಕ್ಕೆ ನಿಂತಿದ್ದಾನೆ ಗೆಳೆಯ ಗೌತಮ್. ರಿಷಿಗೆ ತಾನೆ ಊಟ ಮಾಡಿಸುತ್ತೇನೆ ಎಂದು ಊಟ ತೆಗೆದುಕೊಂಡು ಆತನ ರೂಮಿಗೆ ಹೋದ. ಗೌತಮ್ ಊಟ ಹಿಡಿದು ಬಂದಿದ್ದು ನೋಡಿ ಅಚ್ಚರಿ ಪಟ್ಟುಕೊಂಡ ರಿಷಿ. ನೀನು ಯಾಕೆ ಊಟ ತಂದಿದ್ದೀಯಾ ಎಂದು ಗೌತಮ್‌ಗೆ ಕೇಳಿದ ರಿಷಿ. ಇವತ್ತು ನಾನೇ ನಿನಗೆ  ಊಟ ಮಾಡಿಸೋದು ಎಂದ ಗೌತಮ್. ವಸುಧರಾಳನ್ನು ಮಾತನಾಡಿಸುತ್ತಾನಾ ರಿಷಿ? ವಸು ಪ್ರೀತಿ ಒಪ್ಪಿಕೊಳ್ಳುತ್ತಾಳಾ? ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.